ಮಂಜುನಾಥ ಶೆಟ್ಟಿ…
ಶಿವಮೊಗ್ಗ: ನಗರದ ಜನತೆಗೆ ಕೈಗೆಟುಕುವ ದರದಲ್ಲಿ ನಿವೇಶನ ಹಾಗೂ ಸುಸಜ್ಜಿತ ಮನೆ ಒದಗಿಸುವ ಉದ್ದೇಶದಿಂದ ಶಿವಮೊಗ್ಗದಲ್ಲಿ ಪ್ರಪ್ರಥಮ ಬಾರಿಗೆ RERA ನೋಂದಾಯಿತ ರಿಯಲ್ ಎಸ್ಟೇಟ್ ಸಲಹೆಗಾರ ಸಂಸ್ಥೆಯಾದ ‘ಬ್ರಿಕ್ ಅಂಡ್ ಸ್ಪೇಸ್’ ಶುಭಾರಂಭಗೊಂಡಿತು.ಸಂಸ್ಥೆಯ ನೂತನ ಕಚೇರಿಯನ್ನು ಹಿರಿಯ ಉದ್ಯಮಿ ಎನ್. ಭೂಪಾಳಂ ಸತ್ಯನಾರಾಯಣ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಮಾಜಿ ವಿಧಾನ ಪರಿಷತ್ ಸದಸ್ಯ ರುದ್ರೇಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಟಿ.ಡಿ. ಮೇಘರಾಜ್, ಎನ್.ಕೆ. ಜಗದೀಶ್, ಎಂ ಶ್ರೀಕಾಂತ್, ಕೆ.ಜಿ. ಕುಮಾರಸ್ವಾಮಿ, ನರಸಿಂಹ ಗಂಧದಮನೆ, ಕಿರಣ್ ಫೆರ್ನಾಂಡಿಸ್, ಡಿ. ಅಂತೋನಿ, ಗಿರೀಶ್ ಪಟೇಲ್ ಹಾಗೂ ರತ್ನಾಕರ್ ಶೆಣೈ ಸೇರಿದಂತೆ ಗಣ್ಯರು ಉಪಸ್ಥಿತರಿದ್ದು, ಸಂಸ್ಥೆಯ ಸಂಸ್ಥಾಪಕರಾದ ರಘು ಭೂಪಾಳಂ ಪಾಲುದಾರರಾದ ಸುಮಲತಾ ಭೂಪಾಳಂ, ವಿನ್ಸೆಂಟ್ ರೋಡ್ರಿಗಸ್ ಹಾಗೂ ಶ್ಯಾಮು ಅವರಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಉದ್ದೇಶಗಳ ಕುರಿತು ಮಾಹಿತಿ ನೀಡಿದ ವಿನ್ಸೆಂಟ್ ರೋಡ್ರಿಗಸ್, “ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಬಜೆಟ್‌ಗೆ ತಕ್ಕಂತೆ ಎಲ್ಲರಿಗೂ ಕೈಗೆಟುಕುವ ದರದಲ್ಲಿ ನಿವೇಶನ ಹಾಗೂ ಮನೆ ಒದಗಿಸುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ,” ಎಂದು ತಿಳಿಸಿದರು.
ಈಗಾಗಲೇ ಸಂಸ್ಥೆಯು ಕೋಟೆಗಂಗೂರಿನ ಶರ್ಮಾ ಲೇಔಟ್ ಅನ್ನು ಗುರುತಿಸಿದ್ದು, ಇಲ್ಲಿ ₹54,99,999ಕ್ಕೆ 30×40 ಅಡಿ ನಿವೇಶನದಲ್ಲಿ ಎರಡು ಬೆಡ್‌ರೂಮ್‌ಗಳನ್ನು ಒಳಗೊಂಡ ಸುಸಜ್ಜಿತ ಮನೆಯನ್ನು ನಿರ್ಮಿಸಿಕೊಡುವ ಯೋಜನೆ ರೂಪಿಸಲಾಗಿದೆ. ನುರಿತ ಇಂಜಿನಿಯರ್‌ಗಳ ತಂಡದ ಮೂಲಕ ಗುಣಮಟ್ಟದ ಮನೆ ನಿರ್ಮಿಸಿಕೊಡುವ ಭರವಸೆಯನ್ನು ಸಂಸ್ಥೆ ನೀಡಿದೆ ಎಂದು ಅವರು ಹೇಳಿದರು.
ಶಿವಮೊಗ್ಗ ನಗರದ ವಿವಿಧ ಭಾಗಗಳಲ್ಲಿಯೂ ಇದೇ ಮಾದರಿಯ ಯೋಜನೆಗಳನ್ನು ಮುಂದುವರಿಸುವ ಉದ್ದೇಶ ಸಂಸ್ಥೆ ಹೊಂದಿದ್ದು, ಮಧ್ಯಮ ವರ್ಗದ ಹಾಗೂ ಸಾಮಾನ್ಯ ಕುಟುಂಬಗಳ ಸ್ವಂತ ಮನೆ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ವಿನ್ಸೆಂಟ್ ರೋಡ್ರಿಗಸ್ ತಿಳಿಸಿದರು.