ಮಂಜುನಾಥ್ ಶೆಟ್ಟಿ…
ಶಿವಮೊಗ್ಗದ ಸಕ್ರೆಬೈಲ್ ಆನೆ ಬಿಡಾರದಲ್ಲಿ ಶೌರ್ಯ ಆನೆ ಮೃತಪಡಲು ಕಾರಣರಾದ ಅಧಿಕಾರಿಗಳನ್ನು ತಕ್ಷಣ ಅಮಾನತುಗೊಳಿಸಿ ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ಬೃಹತ್ ಪ್ರತಿಭಟನೆ ನಡೆಸಿದರು.
ಕಳೆದ ವಾರದಲ್ಲಿ ಅಷ್ಟೇ ಹುಲಿ ಸಿಂಹದಾಮದಲ್ಲಿ ಸಿಂಹದ ಮರಿಗಳು ಮೃತಪಟ್ಟಿರುವ ವಿಷಯ ಮಾಸುವ ಮುಂಚೆ ಸಕ್ರೆ ಬೈಲಲ್ಲಿ ಶೌರ್ಯ ಎಂಬ ಆನೆ ಮೃತವಾಗಿದ್ದು ಆಘಾತಕಾರಿ ವಿಷಯವಾಗಿದೆ.ಇದಕ್ಕೂ ಮುಂಚೆ ಅಧಿಕಾರಿಗಳ ನಿರ್ಲಕ್ಷದಿಂದ ನೀರಾನೆ ಮೃತಪಟ್ಟಿತು.ಅರಣ್ಯ ಸಚಿವರು ಕೂಡಲೇ ಶಿವಮೊಗ್ಗದ ಅಧಿಕಾರಿ ವರ್ಗದಲ್ಲಿ ಏನಾಗುತ್ತಿದೆ ಎಂಬುದನ್ನು ಕುಲಂಕುಶವಾಗಿ ಪರಿಶೀಲಿಸಬೇಕು.ಸಮನ್ವಯದ ಕೊರತೆಯಿಂದ ಅಥವಾ ಕರ್ತವ್ಯ ಲೋಪ ದಿಂದಲೋ, ಈ ಎಲ್ಲಾ ಪ್ರಕರಣಗಳು ಆಗುತ್ತಿರುವುದು ಎಂದು ಸಾರ್ವಜನಿಕರಲ್ಲಿ ವನ್ಯಜೀವಿ ಪ್ರಿಯರಲ್ಲಿ ಗೊಂದಲ ಸೃಷ್ಟಿಯಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಸಿಂಹ ಸೇನೆಯ ರಾಜ್ಯ ಅಧ್ಯಕ್ಷರಾದ ರವಿಪ್ರಸಾದ್ ಎಂ ರವರು ಈ ಹಿಂದೆ ಯಾವೆಲ್ಲ ಆನೆಗಳ ದುಸ್ಥಿತಿ ಆಗಿತ್ತು ಮತ್ತು ಬಾಲಣ್ಣನ ಕಿವಿಯನ್ನು ಶಾಶ್ವತವಾಗಿ ತೆಗೆದು ಹಾಕಿರುವುದು ಮತ್ತು ಒಬ್ಬ ಮಹಿಳಾ ವೈದ್ಯರ ಮೇಲೆ ನೀರಾನೆಯಿಂದ ದಾಳಿಯಾಗಿ ಮರಣವನ್ನು ಹೊಂದಿರುವ ಸಾಕಷ್ಟು ಸಮಸ್ಯೆಗಳು ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯುತ್ತಿದ್ದು ರಾಜ್ಯ ಸರ್ಕಾರದ ಸಚಿವರು ಮತ್ತು ಸಂಬಂಧಪಟ್ಟಂತಹ ಹಿರಿಯ ಅಧಿಕಾರಿಗಳಿಗೆ ದೂರು ಕೊಟ್ಟರು ಪ್ರಯೋಜನವಾಗುತ್ತಿಲ್ಲ ಎಂದು ವಿಷಾದವನ್ನು ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷ ಮಧುಸೂದನ್ ಮಾತನಾಡಿ ಎಲ್ಲಾ ಅಧಿಕಾರಿಗಳ ಬದಲಾವಣೆ ಆಗಬೇಕು ಮತ್ತು ವೈದ್ಯಕೀಯ ಸವಲತ್ತುಗಳನ್ನು ಹೆಚ್ಚಿಸಿ ಕೊಡಬೇಕು.ಆದಷ್ಟು ಬೇಗ ನುರಿತ ವೈದ್ಯರನ್ನು ನೇಮಿಸಬೇಕು.ಮತ್ತು ಸಕ್ರೆಬೈಲ ಮರು ಪ್ರಾರಂಭ ಮಾಡುವುದರ ಮುಂಚೆ ಎಲ್ಲಾ ವೈದ್ಯಕ್ತಿಯ ಸವಲತ್ತನ್ನು ಹೊಂದಿಸಿಕೊಂಡು ನಂತರದಲ್ಲಿ ಪ್ರಾರಂಭಿಸಬೇಕು ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಮಧುಸೂದನ್ ಅವರು ಆಗ್ರಹಿಸಿದ್ದಾರೆ.
ಈ ಎಲ್ಲಾ ಪ್ರಕರಣಗಳು ನಿಲ್ಲಬೇಕಾದರೆ ಅರಣ್ಯ ಇಲಾಖೆ ಸಚಿವರಾದ ಶ್ರೀ ರಾಮಲಿಂಗ ರೆಡ್ಡಿ ಅವರು ಈಗಿರುವ ಅಧಿಕಾರಿಗಳನ್ನು ಬದಲಾಯಿಸಿ ಸರಿಯಾದ ದಕ್ಷ ಅಧಿಕಾರಿಗಳನ್ನು ನೇಮಿಸಬೇಕೆಂದು ಆಗ್ರಹಿಸಿದರು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಅನಿವಾರ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಅಭಿಜಿತ್ ನವನೆ, ಜಿಲ್ಲಾ ಉಪಾಧ್ಯಕ್ಷರು ನಯಾಜ್, ಜಿಲ್ಲಾ ಉಪಾಧ್ಯಕ್ಷರು ನೂರಲ್ಲ ,ಜಿಲ್ಲಾ ಕಾರ್ಯದರ್ಶಿ ಶಿವು ,ರಘು, ಲಿಂಗಣ್ಣ, ಮತ್ತಿತರರು ಉಪಸ್ಥಿತರಿದ್ದರು.