ಕೃಷ್ಣರಾಜೇಂದ್ರ ಜಲ ಶುದ್ಧೀಕರಣ ಘಟಕ ದಲ್ಲಿರುವ ಜಾಕ್ ವೆಲ್ ನಲ್ಲಿ ಈಗಿರುವ ಟರ್ಬೈನ್ ಪಂಪ್ ಅನ್ನು ಬದಲಾಯಿಸಿ ಹೊಸದಾಗಿ 150ಹೆಚ್ ಪಿ ಪಂಪ್ ಅಳವಡಿಸುವ ಕಾಮಗಾರಿ ಹಮ್ಮಿಕೊಳ್ಳುವುದರಿಂದ ದಿನಾಂಕ 27/08/2021 ರಿಂದ 31/08/2021 ರವರೆಗೆ ಏರು ಕೊಳವೆ ಮಾರ್ಗ 1.2.3.ಮತ್ತು 6ರಿಂದ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ನಗರದ ಗೋಪಾಳಗೌಡ ಬಡಾವಣೆ, ಸ್ವಾಮಿ ವಿವೇಕಾನಂದ ಬಡಾವಣೆ, ಅಪ್ಪಾಜಿರಾವ್ ಕಾಂಪೌಂಡ್, ಸರ್ಕಾರಿ ಶಾಲೆ, ಕಾರ್ಪೊರೇಷನ್ ಬೀಬಿ ಸ್ವೀಟ್, ಮಲ್ಲೇಶ್ವರ ನಗರ ,ಮೆಗಾನ್ ಆಸ್ಪತ್ರೆ ,ಬಸ್ಟ್ಯಾಂಡ್ ,ಕಲ್ಲಳ್ಳಿ , ವಿನೋಬಾನಗರ, ಆಲ್ಕೊಳ, ಎಪಿಎಂಸಿ ನರಸಿಂಹ ಬಡಾವಣೆ, ಕುವೆಂಪು ರಸ್ತೆ, ಬೂಸ್ಟರ್ ಪಂಪ್ ಹೌಸ್, ಆವರಣ ಕಾರ್ಪೊರೇಶನ್ ಬ್ಯಾಂಕ್ ಪ್ರದೇಶಗಳಲ್ಲಿ ದೈನಂದಿನ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸಬೇಕು ಎಂದು ಶಿವಮೊಗ್ಗ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣೆ ಮತ್ತು ಪಾಲನೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ