ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ,ವತಿಯಿಂದ 2018-19ನೇ ಸಾಲಿನಲ್ಲಿ ಕರೆದಿದ್ದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ಅಭ್ಯರ್ಥಿಗಳಿಂದ ಪರೀಕ್ಷಾ ಶುಲ್ಕ ಪಡೆದಿದ್ದರೂ ಈವರೆಗೆ ಪರೀಕ್ಷೆ ನಡೆಸದೆ ನಿರುದ್ಯೋಗಿಗಳನ್ನು ಕಾಯುತ್ತಿರುವುದನ್ನು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಖಂಡಿಸಿದ್ದು ಕೂಡಲೇ ನಿಗದಿ ಹುದ್ದೆಗಳಿಗೆ ಪರೀಕ್ಷೆ ನಡೆಸಿ ಅಭ್ಯರ್ಥಿಗಳ ಆಯ್ಕೆ ಮಾಡಬೇಕೆಂದು ಆಗ್ರಹಿಸುತ್ತದೆ.ಸರ್ಕಾರದ ಆದೇಶದಂತೆ ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ, ದಲ್ಲಿ ಖಾಲಿಯಿದ್ದ ಕಿರಿಯ ಸಹಾಯಕರು ಕ್ಷೇತ್ರಾಧಿಕಾರಿಗಳು ನಗದು ಗುಮಾಸ್ತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು ಜಿಲ್ಲೆಯಲ್ಲಿ ಸುಮಾರು 80 ರಿಂದ 100 ಹುದ್ದೆಗಳು ಖಾಲಿ ಇದ್ದು ಸುಮಾರು 4ಸಾವಿರ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರೆ ಪ್ರತಿ ಅಭ್ಯರ್ಥಿಯು ತಲಾ 924 ರೂ ಗಳಂತೆ ಪರೀಕ್ಷಾ ಶುಲ್ಕ ಪಾವತಿಸಿರುತ್ತಾರೆ ಹೀಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ದಿನಾಂಕ 11-08-2019 ನೇ ಭಾನುವಾರ ಪರೀಕ್ಷೆ ನಡೆಸುವುದಾಗಿ ತಿಳಿಸಿ ಪರೀಕ್ಷಾ ಪ್ರವೇಶ ಪತ್ರವನ್ನು ವಿತರಿಸಲಾಗಿತ್ತು ಆದರೆ ಏಕಾಏಕಿ ಕಾರಣಾಂತರದಿಂದ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಅಭ್ಯರ್ಥಿಗಳಿಗೆ ತಿಳಿಸಿರುತ್ತಾರೆ ಈವರೆಗೆ ಪರೀಕ್ಷೆ ನಡೆಸಿರುವುದಿಲ್ಲ. ಇದರಿಂದಾಗಿ ಕಳೆದ 3ವರ್ಷಗಳಿಂದ ಉದ್ಯೋಗಾಕಾಂಕ್ಷಿಗಳು ಪರೀಕ್ಷಾ ಶುಲ್ಕ ಕಟ್ಟಿದರೂ ಪರೀಕ್ಷೆ ಬರೆಯಲಾಗದೆ ಪರಿತಪಿಸುತ್ತಿದ್ದಾರೆ ಈ ಹುದ್ದೆಗಳು ನೇಮಕಾತಿಯಿಂದಾಗಿ ಬ್ಯಾಂಕ್ ನ ಬೊಕ್ಕಸಕ್ಕೆ ಲಕ್ಷ ರೂ ಗಳಿಗೂ ಅಧಿಕ ಹಣ ಬಂದಿರುತ್ತದೆ ಆದರೆ ಪರೀಕ್ಷೆ ನಡೆಸದೆ ಇರುವುದರಿಂದಾಗಿ ಬಹಳಷ್ಟು ಜನ ವಯೋಮಿತಿ ಮೀರಿ ಪರೀಕ್ಷೆ ಬರೆಯಲು ಅನರ್ಹರಾಗುತ್ತಿದ್ದಾರೆ. ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಲ್ಲೂ ಈ ಹಿಂದೆಯೂ ಸಾಕಷ್ಟು ಅವ್ಯವಹಾರಗಳು ನಡೆದಿದ್ದು ಈ ಹುದ್ದೆಗಳ ನೇಮಕಾತಿಯಲ್ಲಿ ಗೋಲ್ ಮಾಲ್ ನಡೆಯುವ ಸಾಧ್ಯತೆ ಇದೆ. ಪರೀಕ್ಷೆ ನಡೆಸದೆ ಹಿಂಬಾಗಿಲ ಮೂಲಕ ತಮಗೆ ಬೇಕಾದವರನ್ನು ನೇಮಕ ಮಾಡಿಕೊಂಡು ಹುದ್ದೆಗಳನ್ನು ಮಾರಿಕೊಳ್ಳಲು ಬ್ಯಾಂಕ್ನ ಆಡಳಿತ ಮಂಡಲಿ ಪ್ರಯತ್ನಿಸುತ್ತಿದೆ ಎಂಬ ಆರೋಪಗಳು ಅಭ್ಯರ್ಥಿಗಳಿಂದ ಕೇಳಿ ಬರುತ್ತಿದೆ. ಆದ್ದರಿಂದ ಕೂಡಲೇ ಬ್ಯಾಂಕ್ ಆಡಳಿತ ಮಂಡಳಿ ಪರೀಕ್ಷಾ ಶುಲ್ಕ ಪಾವತಿಸಿದ ಎಲ್ಲ ಅಭ್ಯರ್ಥಿಗಳಿಗೂ ಪರೀಕ್ಷೆ ನಡೆಸಬೇಕು ಎಲ್ಲ ಹುದ್ದೆಗಳ ನೇಮಕಾತಿಯನ್ನು ಪಾರದರ್ಶಕವಾಗಿ ನಡೆಸಬೇಕು ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಆಗ್ರಹಿಸುತ್ತದೆ. ಕೂಡಲೇ ಪರೀಕ್ಷೆ ನಡೆಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಎಲ್ಲ ಉದ್ಯೋಗಾಕಾಂಕ್ಷಿಗಳೊಂದಿಗೆ ತೀವ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಈ ಮೂಲಕ ಎಚ್ಚರಿಸುತ್ತಾರೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ