ಇಂದು ನಡೆದ ಸಭೆಯಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ ಶಿವಮೊಗ್ಗ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಪರಿಷತ್ತಿನ ಗುರಿ ಉದ್ದೇಶಗಳು, ಆಶಯಗಳನ್ನು ಪ್ರಸ್ತುತ ಪಡಿಸಿ..ಕನ್ನಡ ನಾಡು ನುಡಿಗೆ ನಮ್ಮ ಕೈಲಾದ ಸಾಹಿತ್ಯ ಸೇವೆ ಮಾಡುವ ಸಲುವಾಗಿ..ಜೊತೆಗೆ ಕಲೆ, ಸಾಂಸ್ಕೃತಿಕ, ಹಾಗೂ ಸಾಮಾಜಿಕ ಸೇವೆಯನ್ನು ಮಾಡುವ ಹಿತದೃಷ್ಟಿಯಿಂದ… ಶಿಕ್ಷಕರ ಸಾಹಿತ್ಯ ಪರಿಷತ್ ನ ಜಿಲ್ಲಾ ಸಮಿತಿಯನ್ನು ರಚನೆ ಮಾಡಲಾಯಿತು.
ಪದಾಧಿಕಾರಿಗಳ ಪರಿಚಯ

ಜಿಲ್ಲಾಧ್ಯಕ್ಷರು: ಶ್ರೀಮತಿ.ಅನಿತಕೃಷ್ಣ

ಗೌರವಾಧ್ಯಕ್ಷರು: ಶ್ರೀ.ನಾಗರಾಜ.ಬಿ

ಗೌರವ ಸಲಹೆಗಾರರು: ಶ್ರೀಮತಿ.ಡಾ.ಎನ್.ಆರ್.ಮಂಜುಳಾ.

ಪ್ರಧಾನಕಾರ್ಯದರ್ಶಿ:
ಶ್ರೀಮತಿ.ದೀಪಾ ಕುಬುಸದ್

ಖಜಾಂಚಿ:- ಶ್ರೀ.ಮಾರಪ್ಪ.ಸಿ

*ಉಪಾಧ್ಯಕ್ಷರು: ಶ್ರೀ.ವೇಕಟೇಶ್ ಗಾವಡಿ
*ಶ್ರೀಮತಿ.ಮೇರಿ ಡಿಸೋಜ*
ಶ್ರೀ.ಮಂಜುನಾಥ್. ಆರ್.ಸಿ

ಜಿಲ್ಲಾ ಪ್ರಧಾನ ಸಂಚಾಲಕರು:
ಶ್ರೀಮತಿ.ಶೋಭಾಸತೀಶ್
ಶ್ರೀ.ಗಿರಿಕುಮಾರ್

ಸಂಚಾಲಕರು:
ಶ್ರೀಮತಿ.ಭಾರತಿಬಾಯಿ
ಶ್ರೀ.ಗೋಪಾಲ್
ಶ್ರೀ. ಪುಟ್ಟಸ್ವಾಮಿ
ಶ್ರೀ.ಯೋಗೇಂದ್ರ ನಾಯ್ಕ್
ಶ್ರೀ.ಸಿದ್ದಪ್ಪ.ಜಿ.
ಶ್ರೀ.ಧರಣೇಶ್
ಶ್ರೀಮತಿ.ಕವಿತಾ.ಕೆ.ಬಿ
ಶ್ರೀಮತಿ.ಸುಲೋಚನಾ

ಇವರನ್ನು ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆಮಾಡಲಾಯಿತು.

ಹಾಗೂ ಡಾ.ಎನ್.ಆರ್.ಮಂಜುಳಾ ಮೇಡಂ..ಇವರನ್ನು ಅವರ ನಿವೃತ್ತಿ ಜೀವನ ಸುಖಕರವಾಗಿರಲೆಂದು..ಆಶಿಸಿ,ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಅನಿತಾ ಕೃಷ್ಣರವರು ಎಲೆ ಮರೆಯ ಕಾಯಿಯಂತೆ ಇರುವ ಶಿಕ್ಷಕ ಮಿತ್ರರಿಗೆ ಒಂದು ವೇದಿಕೆ ಕಲ್ಪಿಸುವುದು,..ಜೊತೆಗೆ ಶಾಲಾ ಮಕ್ಕಳಲ್ಲೂ ಸಾಹಿತ್ಯದ ಅಭಿರುಚಿ ಬೆಳೆಸುವ ದ್ಯೇಯೋದ್ದೇಶದಿಂದ ಹಾಗೂ ನಾವು ಬೆಳೆದು ಇತರರನ್ನು ಬೆಳೆಸೋಣ ಎಂಬ ಹಿತದೃಷ್ಟಿಯಿಂದ ನಮ್ಮ ಕರ್ನಾಟಕ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ ಸ್ಥಾಪಿತವಾಗಿದೆ ಎಂದರು .

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ