ಕೊವಿಡ್-19 ಸಾಂಕ್ರಾಮಿಕ ರೋಗದ ಹರಡುವಿಕೆಯ ಹಿನ್ನೆಲೆಯಲ್ಲಿ ಕಳೆದ 2ವರ್ಷಗಳಲ್ಲಿ ಶಿವಮೊಗ್ಗ ಭಾಗದ ಅನೇಕ ರೈಲು ಸೇವೆಗಳಲ್ಲಿ ಅನೇಕ ವ್ಯತ್ಯಯ ಉಂಟಾಗಿತ್ತು. ರೈಲ್ವೆ ಇಲಾಖೆಯೊಂದಿಗೆ ನಿರಂತರವಾಗಿ ಮಾತುಕತೆ ನಡೆಸಿದ ಪರಿಣಾಮವಾಗಿ ಕೊವಿಡ್ ಸಂದರ್ಭದಲ್ಲಿ ನಿಲುಗಡೆಯಾಗಿದ್ದ ಬಹುತೇಕ ರೈಲು ಸೇವೆಗಳನ್ನು ಪುನರಾರಂಭಗೊಳ್ಳುತ್ತಿದೆ. ಈಗಾಗಲೇ ಸಂಚರಿಸುತ್ತಿರುವ ರೈಲುಗಳ ಜತೆಗೆ 07349/07350 ತಾಳಗುಪ್ಪ ಶಿವಮೊಗ್ಗ ತಾಳಗುಪ್ಪ ಪ್ಯಾಸೆಂಜರ್ ರೈಲಿನ ಸೇವೆಯನ್ನು ಸೆಪ್ಟೆಂಬರ್ ಒಂದರಿಂದ ಪುನರಾರಂಭ ಲಾಗುತ್ತಿದೆ. ಹಾಗೆಯೇ 07311,07312 ಯಶವಂತಪುರ- ಶಿವಮೊಗ್- ಯಶವಂತಪುರ ವಾರಕ್ಕೆ 3ಬಾರಿ ಸಂಚರಿಸುವ ಎಕ್ಸ್ ಪ್ರೆಸ್ ಸೇವೆಯನ್ನು ಸೋಮವಾರ ಬುಧವಾರ ಮತ್ತು ಶನಿವಾರ ಅಕ್ಟೋಬರ್ 12 ಪುನರಾರಂಭ ಮಾಡಲಾಗುತ್ತಿದೆ. ಶಿವಮೊಗ್ಗ ತಾಳಗುಪ್ಪ ನಡುವಿನ ಅರಸಾಳು ರೈಲು ನಿಲ್ದಾಣದ ಫ್ಲಾಟ್ ಫಾರಂ ವಿಸ್ತರಣೆ ಕಾಮಗಾರಿಯು 2020ರ ಜನವರಿಯಲ್ಲಿ ಲೋಕಾರ್ಪಣೆ ಮಾಡಲಾಗಿದ್ದು ಈಗ 24 ಕೋಚ್ ಗಳ ಎಕ್ಸ್ ಪ್ರೆಸ್ ರೈಲುಗಳ ನಿಲುಗಡೆಗೆ ಬೇಕಾದ ಮೂಲ ಸೌಕರ್ಯವನ್ನು ಹೊಂದಿರುತ್ತದೆ. ರೈಲ್ವೆ ಇಲಾಖೆಯು 06227- 06228 ಮೈಸೂರು ತಾಳಗುಪ್ಪ ಮೈಸೂರು ಎಕ್ಸ್ ಪ್ರೆಸ್ ರೈಲನ್ನು ದಿನಾಂಕ 01.09.2021 ರಿಂದ ಈ ನಿಲ್ದಾಣದಲ್ಲಿ ನಿಲುಗಡೆ ಮಾಡಲು ಒಪ್ಪಿರುತ್ತದೆ. ಶಿವಮೊಗ್ಗ ಯಶವಂತಪುರ ಶಿವಮೊಗ್ಗ ಜನಶತಾಬ್ದಿ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ಈಗಾಗಲೇ ಬೆಂಗಳೂರು ಮೆಜೆಸ್ಟಿಕ್ ನಿಲ್ದಾಣದ ವರೆಗೆ ವಿಸ್ತರಿಸಲಾಗಿದೆ. ಮೈಸೂರು ಬೆಂಗಳೂರು ತಾಳಗುಪ್ಪ ಎಕ್ಸ್ ಪ್ರೆಸ್ ಈ ಹಿಂದೆ ಶಿವಮೊಗ್ಗ ನಗರಕ್ಕೆ ಬೆಳಗಿನ ಜಾವ ಸುಮಾರು 4.00 ಗಂಟೆಗೆ ತಲುಪಿದ್ದು ಪ್ರಯಾಣಿಕರಿಗೆ ಅನುಕೂಲವಾಗುತ್ತಿತ್ತು.ಶಿವಮೊಗ್ಗದಲ್ಲಿ ಈ ರೈಲು ಬೆಳಗ್ಗೆ ಬೆಳಗಾವಿ 5.00ಗಂಟೆಗೆ ಆಗಮಿಸುವಂತೆ ವೇಳಾಪಟ್ಟಿಯಲ್ಲಿ ಮಾರ್ಪಾಡು ಮಾಡಲಾಗಿದೆ ಹಾಗೆಯೇ ತಾಳಗುಪ್ಪ ಶಿವಮೊಗ್ಗ ಬೆಂಗಳೂರು ಎಕ್ಸ್ಪ್ರೆಸ್ ಸೇವೆಯೇ ಬೆಂಗಳೂರು ನಗರದ ನಿಲ್ದಾಣಕ್ಕೆ ಸುಮಾರು 4.00ಗಂಟೆಗೆ ತಲುಪಿದ್ದನ್ನು ಈಗ 5.00 ಗಂಟೆಗೆ ಆಗಮಿಸುವಂತೆ ಮಾಡಲಾಗಿದೆ. ಶಿವಮೊಗ್ಗ ಭಾಗದ ಎಲ್ಲ ಪ್ರಯಾಣಿಕರು ಕೋವಿಡ್ -19 ನಿಯಂತ್ರಣಕ್ಕೆ ಸರ್ಕಾರ ಹೊರಡಿಸಿರುವ ನಿಯಮಾವಳಿಗಳನ್ನು ಮತ್ತು ಸಾಮಾಜಿಕ ಅಂತರವನ್ನು ಪಾಲಿಸಿಕೊಂಡು ಈ ಎಲ್ಲಾ ರೈಲು ಸವಲತ್ತುಗಳನ್ನು ಸದುಪಯೋಗ ಮಾಡಿಕೊಳ್ಳಲು ಕೋರುತ್ತದೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153