ಪಿಎಫ್ ನಂಬರ್ ಗೆ ಆಧಾರ್ ಲಿಂಕ್ ಅನ್ನು ಮಾಡಿದ್ದಲ್ಲಿ ಅವರ ದಾಖಲಾತಿಯ ಬಗ್ಗೆ ಕಾರ್ಮಿಕರು ಪದೇಪದೆ ಕಚೇರಿ ತಿರುಗುವ ತಾಪತ್ರಯವನ್ನು ಕಡಿಮೆಗೊಳಿಸಲಾಗುವುದು. ಕೋವಿಡ್ ಸಂದರ್ಭದಲ್ಲಿ ಕಾರ್ಮಿಕರಿಗೆ ಅನುಕೂಲ ವಾಗಿತ್ತು.ಇದರ ಅನುಕೂಲ ಪಡೆಯಲು ವೆಬ್ ಸೈಟ್ ನಲ್ಲಿ ಲಾಗಿನ್ ಆಗಬೇಕು ಕಾರ್ಮಿಕರ ಕಾರ್ಡ್ ಗೆ ಇ ನಾಮಿನೇಷನ್ ಮಾಡಬೇಕು. ಇನ್ಶೂರೆನ್ಸ್ ಪೆನ್ಷನ್ ಸೆಟಲ್ ಮೆಂಟ್ ಗೆ ಅನುಕೂಲವಾಗಿದೆ. ಪೆನ್ಷನ್ ಪಡೆಯುವ ಕಾರ್ಮಿಕರು 34000 ಕಾರ್ಮಿಕರಿದ್ದಾರೆ ದಾವಣಗೆರೆ ಮತ್ತು ಶಿವಮೊಗ್ಗದ ಕಾರ್ಮಿಕರಾಗಿದ್ದಾರೆ.78 ಸಾವಿರ ಕಾರ್ಮಿಕರು ಪಿಎಫ್ ನಲ್ಲಿ ನೋಂದಾಯಿತರಾಗಿದ್ದಾರೆ. ಇವರುಗಳು ಇ ನಾಮಿನೇಷನ್ ಮಾಡಿಕೊಳ್ಳಬೇಕಾಗಿದೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ