ಜೀವನದ ಸಾರ್ಥಕತೆಗೆ ಮನುಷ್ಯ ಸಮಾಜಮುಖಿಯಾಗಿ ಕೆಲಸ ಮಾಡಬೇಕು. ಜೀವಿತದ ಅವಧಿಯಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸುವ ಮುಖಾಂತರ ನಮ್ಮನ್ನು ನಾವು ಸಮರ್ಪಿಸಿಕೊಳ್ಳಬೇಕು ಎಂದು ಬೆಕ್ಕಿನ ಕಲ್ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ನಗರದ ಕಲ್ಲಳ್ಳಿಯ ಶ್ರೀ ಶಿವಗಂಗಾ ಯೋಗಕೇಂದ್ರದಲ್ಲಿ ಪಿರಮಿಡ್ ಕಟ್ಟಡದ ದಾನಿಗಳಿಗೆ ಶ್ರೀಗುರುರಕ್ಷೆ ಹಾಗೂ ಯೋಗಗುರು ಸಿ.ವಿ.ರುದ್ರಾರಾಧ್ಯ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡಿ, ಚಿತ್ತ ಸುದ್ದಿ, ಅಂತರAಗ ಸುದ್ದಿ ಇದ್ದಲ್ಲಿ ಮಾತ್ರ ದೇವರನ್ನು ಕಾಣಬಹುದು. ಜೀವನದಲ್ಲಿ ಸಂಸ್ಕಾರ ಬಹಳ ಮುಖ್ಯ. ಜೀವನ ಸಾರ್ಥಕತೆ ಪಡೆದುಕೊಳ್ಳಬೇಕಾದರೆ ನಮ್ಮ ಕೈಲಾದ ಸೇವೆ, ದಾನ, ಧರ್ಮ ಹಾಗೂ ಸದ್ವಿಚಾರಗಳ ಬಗ್ಗೆ ಧಾರೆ, ಗುರು ಹಿರಿಯರಲ್ಲಿ ಭಯ ಭಕ್ತಿ ಹಾಗೂ ಆಧ್ಯಾತ್ಮದ ಅರಿವು ಮುಖ್ಯ ಎಂದು ತಿಳಿಸಿದರು.
ನೆಲಮಂಗಲ ಶಿವಗಂಗಾ ಕ್ಷೇತ್ರದ ಪಟ್ಟದ ಶ್ರೀ ಡಾ. ಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಆಧುನಿಕ ಯುಗದಲ್ಲಿ ಮನುಷ್ಯ ಹಾಳಾಗಲು ಎರಡು ಸಾಧನಗಳು ಮುಖ್ಯ ಕಾರಣ ಮೊಬೈಲ್ ಮತ್ತು ಟಿವಿ. ಎರಡು ಸಾಧನವು ನಿತ್ಯ ಜೀವನದಲ್ಲಿ ನಮಗೆ ಇಲ್ಲವಾದರೆ ಮನಸ್ಸು ಏರುಪೇರಗುತ್ತದೆ ಎಂದು ಹೇಳಿದರು.
ಇತ್ತೀಚೀನ ವರದಿಗಳ ಪ್ರಕಾರ ಕರೊನಾದಿಂದ ಸಾಕಷ್ಟು ಜನ ಸಾವನ್ನಪ್ಪಿದವರಲ್ಲಿ ಯೋಗ ಸಾಧಕರು ಇಲ್ಲ ಎಂತಲೇ ಅನ್ನಬಹುದಾಗಿದೆ. ಯೋಗ ಮಾಡುವವರಲ್ಲಿ ಸದಾ ಆರೋಗ್ಯ ಜಾಗೃತಿ ಹಾಗೂ ಲವಲವಿಕೆಯಿಂದ ಇರುವ ಮನೋಭಾವ ಇರುತ್ತದೆ. ಅನಾರೋಗ್ಯದಿಂದ ದೂರ ಇರಲು ಸಾಧ್ಯ ಎಂದು ತಿಳಿಸಿದರು.
ಯೋಗಗುರು ಸಿ.ವಿ.ರುದ್ರಾರಾಧ್ಯ ಅವರ ಬದುಕು-ಜೀವನ ತುಂಬಾ ಆದರ್ಶ ಆಗಿರುವುದರ ಜತೆಯಲ್ಲಿ ಸಾರ್ಥಕತೆ ಅನುಭವಿಸಿದ್ದಾರೆ. ಸಾಧನೆ ಮಾಡಿದವರ ಜೀವನದ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸೂಡಾ ಅಧ್ಯಕ್ಷ ಹಾಗೂ ಶಿವಗಂಗಾ ಯೋಗಕೇಂದ್ರದ ಕಾರ್ಯದರ್ಶಿ ಎಸ್.ಎಸ್.ಜ್ಯೋತಿಪ್ರಕಾಶ್ ಅವರು ಯೋಗಕೇಂದ್ರ ನಡೆದುಬಂದ ದಾರಿ ಕುರಿತು ಮಾಹಿತಿ ನೀಡಿದರು. ಯೋಗ ಶಿಕ್ಷಣಾರ್ಥಿಗಳಿಂದ ಯೋಗಗುರು ಸಿ.ವಿ.ರುದ್ರಾರಾಧ್ಯ ಅವರಿಗೆ ಸನ್ಮಾನಿಸಲಾಯಿತು.
ಪ್ರಮುಖರಾದ ಲವಕುಮಾರ್, ಜಗದೀಶ್, ಓಂಕಾರ್, ವಿಜಯ್ ಬಾಯರಿ, ಪರಿಸರ ನಾಗರಾಜ್, ಜಿ.ವಿಜಯ್‌ಕುಮಾರ್, ಶರಣಬಸವೇಶ್, ಪ್ರೊ. ಎ.ಎಸ್.ಚಂದ್ರಶೇಖರ್, ಸೂರ್ಯನಾರಾಯಣ, ರೇಣುಕಾರಾಧ್ಯ, ಸುಮಾ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ