ಮಲೆನಾಡಿನ ಕರ್ನಾಟಕದ ಹೆಮ್ಮೆಯ ಶಿಕ್ಷಣ ಸಂಸ್ಥೆ ಲಕ್ಷಾಂತರ ಗ್ರಾಮಾಂತರ ಬಡ ಮತ್ತು ಮಧ್ಯಮ ವಿದ್ಯಾರ್ಥಿಗಳ ಜ್ಞಾನ ದೇಗುಲವಾದ ರಾಷ್ಟ್ರಕವಿ ಕುವೆಂಪು ಅವರ ಕನಸಿನ ರಾಜ್ಯದ ಪರಂಪರೆಯ ಸಂಕೇತವಾಗಿದ್ದ ಸಹ್ಯಾದ್ರಿ ಕಾಲೇಜು ಇಂದು ಅಪಾಯದಲ್ಲಿವೆ ಈ ನಾಡಿನ ವಿದೇಶಗಳಲ್ಲಿ ನೆಲೆಸಿದ ಲಕ್ಷಾಂತರ ಹಳೆಯ ವಿದ್ಯಾರ್ಥಿಗಳ ಸುಂದರ ನೆನಪುಗಳ ಪವಿತ್ರ ಅಪಾಯದಲ್ಲಿದೆ. ಜಿಲ್ಲಾಡಳಿತ ಕುವೆಂಪು ವಿಶ್ವವಿದ್ಯಾಲಯದ ಆಡಳಿತ ಹಾಗೂ ರಾಜಕಾರಣಿಗಳ ಸ್ವಾಥ ಪರ ಹುನ್ನಾರವಿಲ್ಲದೆ ಸಹ್ಯಾದ್ರಿ ಕಾಲೇಜಿನ ಕ್ಯಾಂಪಸ್ ಕಳೆದುಹೋಗುವ ಅಪಾಯ ದಲ್ಲಿದೆ ಗೆಲುವು ಇಂಡಿಯಾ ಸಂಸ್ಥೆಯ ಸಹಭಾಗಿ ಕ್ರೀಡಾ ತರಬೇತಿ ಕೇಂದ್ರದ ನೆಪದಲ್ಲಿ ಕಾಲೇಜು ಕ್ಯಾಂಪಸ್ ಶಾಶ್ವತವಾಗಿ ಪರಭಾರೆ ಮಾಡಲಾಗುತ್ತಿದೆ.

  • 1940 ರಲ್ಲಿ ಮೈಸೂರಿನ ಮಹರಾಜರಾದ ಜಯ ಚಾಮರಾಜೇಂದ್ರ ಒಡೆಯರು ಕಾಲೇಜಿಗೆ ನೂರು ಎಕರೆ ಭೂಮಿಯನ್ನು ದೇಣಿಗೆ ನೀಡಿದರು.
  • ಇಂಟರ್ ಮೀಡಿಯೆಟ್ ಕಾಲೇಜಿಗಾಗಿ ಆರಂಭವಾದ ಸಹ್ಯಾದ್ರಿ ಕಾಲೇಜು ಬೆಳೆದು ಇಂದು 650 ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುವ ತಾಯ್ನೆಲವಾಗಿದೆ 13ಸಂಖ್ಯೆಯ ಸ್ನಾತಕೋತ್ತರ ವಿಭಾಗಗಳಲ್ಲಿ ಆಶ್ರಯವಾಗಿದೆ.
    ಉನ್ನತ ಸಂಶೋಧನೆ ಶೇಷ್ಠ ಗ್ರಂಥಾಲಯ ವಿದ್ಯಾರ್ಥಿ ವಿದ್ಯಾರ್ಥಿನಿ ನಿಲಯ ಪ್ರಯೋಗಗಳು ನಿರ್ಮಾಣವಾಗಿ ಸ್ವಾಯತ್ತ ವಿಶ್ವವಿದ್ಯಾಲಯ ಕಾಲೇಜು ಆಗಿದೆ.
    ಸಹ್ಯಾದ್ರಿ ಕ್ಯಾಂಪಸ್ ಉಳಿಯಲಿ ತೀರಾ ಕೇಂದ್ರವು ಬರಲಿ ಬಂಧುಗಳೇ ಯಾವ ಸಾರ್ವಜನಿಕ ಚರ್ಚೆಯೂ ಇಲ್ಲದೆ ಯೋಜನೆಯ ಯಾವ ವಿವರವನ್ನೂ ಕೊಡದೆ ವಿದ್ಯಾರ್ಥಿಗಳ ಹೀಗೆ ವಿದ್ಯಾರ್ಥಿಗಳ ರೈತ ಮುಖಂಡರ ವಿದ್ಯಾರ್ಥಿ ಸಂಘಟನೆಗಳ ವಿರೋಧದ ನಡುವೆ ಸಹ್ಯಾದ್ರಿ ಕ್ಯಾಂಪಸ್ ಈ ಹುನ್ನಾರವೂ ಯಾಕೆ ಯೋಚಿಸಿ. ಈ ಕ್ರೀಡಾ ಯೋಜನೆಗಾಗಿ 50 ಎಕರೆ ಭೂಮಿಯನ್ನು ಆಯನೂರಿನಲ್ಲಿ 2015 ರಲ್ಲಿ ಮಂಜೂರು ಮಾಡಲಾಗಿದೆ ಕಂದಾಯ ದಾಖಲೆ ಎಂದೋ ಸಿದ್ಧವಾಗಿದೆ ಆದರೆ ಬೆಲೆಬಾಳುವ ಅಮೂಲ್ಯವಾದ ಸಹ್ಯಾದ್ರಿ ಕಾಲೇಜ್ ಕ್ಯಾಂಪಸ್ ಮೇಲೆ ಸ್ವಾರ್ಥಿಗಳ ಕಣ್ಣು ಬಿದ್ದಿದೆ ಒಮ್ಮೆ ಕಳೆದುಕೊಂಡರೆ ಮತ್ತೆ ಈ ಕ್ಯಾಂಪಸ್ ಸಿಗದು ಸುಳ್ಳು ಪ್ರಚಾರವನ್ನು ನಂಬಬೇಡಿ ಈ ಯೋಜನೆ ಕಾಲೇಜಿನ ವಿದ್ಯಾರ್ಥಿಗಳಿಗಲ್ಲ ಇಲ್ಲಿಯ ನಾಗರಿಕರಿಗೆ ಅಲ್ಲ ರಾಜಕಾರಣಿಗಳ ಸ್ವಪ್ರತಿಷ್ಠೆಗಾಗಿ ಹಾಗಾಗಿ ನಾವು ವಿರೋಧಿಸಲೇಬೇಕು. ಇಂದು ಬೆಳಿಗ್ಗೆ 10 ಗಂಟೆಗೆ ಬೃಹತ್ ಪ್ರತಿಭಟನಾ ಜಾಥಾ ರಸ್ತೆತಡೆ ಪ್ರತಿಭಟನಾ ಮೆರವಣಿಗೆ ಸಹ್ಯಾದ್ರಿ ಕಾಲೇಜ್ ಆವರಣದಿಂದ ಆರಂಭವಾಗಲಿದೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ