ಯುವ ಪೀಳಿಗೆ ತಾವು ಆರ್ಥಿಕವಾಗಿ ಬೆಳವಣಿಗೆ ಕಾಣುವುದರ ಜೊತೆಗೆ ಉತ್ತಮ ಸಮಾಜ ನಿರ್ಮಾಣದ ಜವಾಬ್ದಾರಿಯನ್ನು ಹೊಂದಬೇಕು ಎಂದು ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬಿಲಿ ಕ್ಲಬ್, ಕಮಲನೆಹರು ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಆತ್ಮರಕ್ಷಣಾ ಅರಿವು ಕಾರ್ಯಕ್ರಮ ಅಭಯ ಉದ್ಘಾಟಿಸಿದ ಜಿಲ್ಲಾರಕ್ಷಣಾಧಿಕಾರಿ ಶ್ರೀ ಬಿ.ಎಮ್.ಲಕ್ಷ್ಮೀಪ್ರಸಾದ್ ಮಾತನಾಡಿದರು. ಮನೆಯ ಸಂಬಂದಿಗಳಿಂದ, ಅಕ್ಕ ಪಕ್ಕದ ಗೊತ್ತಿರುವ ಜನರಿಂದಲೇ ಅನೇಕರು ಕಿರುಕುಳ ಅನುಭವಿಸುತ್ತಾರೆ. ಆದರೆ ಅದನ್ನು ವಿರೋದಿಸಲು ಭಯ ಪಡಬಾರದು, ಸಮುದಾಯದಲ್ಲಿ ಬೆರೆಯಬೇಕು.
ಇಂದಿನ ತಾಂತ್ರಿಕ ಮುನ್ನಡೆಯಿಂದಾಗಿ ಎಲ್ಲರೂ ದೂರ ಆಗುತ್ತಿದ್ದಾರೆ. ಇದರಿಂದ ಅಪಾಯ ಆಗಬಹುದು. ಏನೇ ಆದರೂ ದೂಷಿಸುವವರು ಹಲವರು ಇರುತ್ತಾರೆ, ಆಗದಂತೆ ತಡೆಗಟ್ಟುವ ವಿಚಾರಗಳಿದ್ದರೆ ತಪ್ಪದೆ ನಮ್ಮೊಂದಿಗೆ ಹಂಚಿಕೊಳ್ಳಿ. ಇತ್ತೀಚೆಗೆ 112 ದೂರವಾಣಿಗೆ ಕರೆ ಮಾಡಿದರೆ ತಕ್ಷಣ ತಮ್ಮ ರಕ್ಷಣೆಗೆ ಬರಲು ನಮ್ಮ ತಂಡ ಸದಾ ಸಿದ್ದ ಅದನ್ನು ಉಪಯೋಗಿಸಿಕೊಳ್ಳಿ.
ಮಕ್ಕಳು ದೊಡ್ಡವರು ಮಾಡುವುದನ್ನು ನೋಡಿ ಕಲಿಯುತ್ತಾರೆ, ಕೆಲವು ರಾಸಾಯನಿಕ ಉತ್ಪತಿ ಯಿಂದಲೂ ಕೆಲವರು ದುಷ್ಟರಾಗ ಬಹುದು ತಪ್ಪನ್ನು ಕಂಡಾಗ ಎಲ್ಲರೂ ತಿದ್ದಿದರೆ ಉತ್ತಮ ಸಮಾಜ ಸಾಧ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ರೊ.ಲಕ್ಷ್ಮೀನಾರಾಯಣ್ ನಮ್ಮ ರೋಟರಿ ಮಹಿಳಾ ಸಭಲಿಕರಣಕ್ಕೆ ಹೆಚ್ಚಿನ ಆಧ್ಯತೆ ನೀಡುತ್ತದೆ. ಹೆದರ ಬೇಡಿ, ಎದುರಿಸುವ ಕ್ಷಮತೆ ಬೆಳೆಸಿ ಕೊಳ್ಳಿ ಎಂದರು. ಮುಖ್ಯ ಅತಿಥಿಗಳಾಗಿ ಪ್ರಾಂಶುಪಾಲರಾದ ಹೆಚ್.ಎಸ್.ನಾಗಭೂಷಣ್ ಭಾಗವಹಿಸಿದ್ದರು. ಭಾರದ್ವಾಜ್, ವಾಗೇಶ್, ವೆಂಕಟೇಶ್ ನಾಯ್ಕ್ ಇದ್ದರು.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ