ರಾಜ್ಯದಲ್ಲಿ ಶಾಲಾ ಕಾಲೇಜುಗಳು ಆರಂಭಗೊಂಡಿದ್ದು ,ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ತೆರಳಲು ಬಸ್ ಪಾಸ್ ಅವಶ್ಯವಾಗಿದೆ .ಆದರೆ ಈವರೆಗೂ ಬಸ್ ಪಾಸ್ ವಿತರಣೆ ಮಾಡದೆ ಇರುವುದರಿಂದ ಕಳೆದ ಸಾಲಿನ ಬಸ್ ಪಾಸ್ ಅವಧಿ ವಿಸ್ತರಿಸಬೇಕು .
2021-21ನೇ ಸಾಲಿನಲ್ಲಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ನೀಡಲಾಗಿದ್ದ ಬಸ್ ಪಾಸ್ ಅವಧಿಯು ಆಗಸ್ಟ್ ತಿಂಗಳಾಂತ್ಯಕ್ಕೆ ಮುಕ್ತಾಯಗೊಂಡಿರುತ್ತದೆ . ಕರೋನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಕೆಲ ತಿಂಗಳು ಜತೆಯಲ್ಲಿ ಸರಿಯಾಗಿ ಶಾಲಾ ಕಾಲೇಜಿನ ತರಗತಿಗಳು ನಡೆದಿರಲಿಲ್ಲ , ಬಹುತೇಕ ತರಗತಿಗಳು ಆನ್ ಲೈನ್ ನಲ್ಲಿ ನಡೆದಿದ್ದವು .
2021-22ನೇ ಸಾಲಿನಲ್ಲಿ ಶಾಲಾ ಕಾಲೇಜು ಆರಂಭಗೊಂಡಿದ್ದು , ಕಳೆದ ಸಾಲಿನ ಬಸ್ ಪಾಸ್ ಅವಧಿ ಮುಗಿದಿರುವುದರಿಂದ ವಿದ್ಯಾರ್ಥಿಗಳಿಗೆ ಹೊಸ ಬಸ್ ಪಾಸ್ ತರುವಂತೆ ಒತ್ತಾಯ ಮಾಡಲಾಗುತ್ತಿದೆ .ಹಿಂದಿನ ಸಾಲಿನ ಬಸ್ ಪಾಸ್ ಅನ್ನು ಪರಿಗಣಿಸುತ್ತಿಲ್ಲ .ಇದರಿಂದ ಗ್ರಾಮೀಣ ಭಾಗದಿಂದ ಶಾಲಾ ಕಾಲೇಜಿಗೆ ಬರುತ್ತಿರುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ .
ಕರೋನಾ ಸಂದರ್ಭದಲ್ಲಿ ಜೀವನ ನಿರ್ವಹಣೆ ಕಷ್ಟ ಆಗಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮತ್ತೆ ಬಸ್ ಪಾಸ್ ಪಡೆಯುವುದು ಕಷ್ಟವಾಗಲಿದೆ .ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಹಿಂದಿನ ವರ್ಷದ ಬಸ್ ಪಾಸ್ ಅನ್ನೇ 2021-22ನೇ ಸಾಲಿಗೂ ವಿಸ್ತರಣೆ ಮಾಡಬೇಕು .ವಿದ್ಯಾರ್ಥಿಗಳಿಗೆ ಆಗುವ ಹೆಚ್ಚುವರಿ ಆರ್ಥಿಕ ಹೊರೆಯನ್ನು ತಪ್ಪಿಸಬೇಕು .
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಚೇತನ್ ಕೆ ,ಯುವ ಕಾಂಗ್ರೆಸ್ ಮುಖಂಡರು ಮಧುಸೂದನ್ ಸಿ. ಜಿ , ಎನ್ .ಎಸ್. ಯು.ಐ ರಾಜ್ಯ ಕಾರ್ಯದರ್ಶಿ ಬಾಲಾಜಿ ಎಚ್ .ಎಸ್ , ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ರು ಮಹಮ್ಮದ್ ನಿಹಾಲ್ , ಎನ್ ಎಸ್ ಯು ಐ ಕಾರ್ಯಾಧ್ಯಕ್ಷರು ರವಿ , ದಕ್ಷಿಣ ಬ್ಲಾಕ್ ಅಧ್ಯಕ್ಷರು ಯುವ ಕಾಂಗ್ರೆಸ್ ವಿನಯ್ ತಾಂಡ್ಲೆ , ಗಿರೀಶ್ ,ರವಿ ,ಅಬ್ದುಲ್ ,ಮಂಜು ಪುರಲೆ , ಆಲ್ವಿನ್ , ಚಂದ್ರೋಜಿ ರಾವ್ ,ನರೇಂದ್ರ ,ಆಕಾಶ್ ,ಕಿರಣ್ ,ಸಂಜಯ್ ,ವೆಂಕಟೇಶ್ ,ನಿಖಿಲ್ ,ಅಭಿಷೇಕ್ ,ಉಪೇಂದ್ರ ,ಚರಣ್ ,ಧನು ಮಲವಗೊಪ್ಪ ,ಮುಂತಾದವರು ಉಪಸ್ಥಿತರಿದ್ದರು.
ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153