ದಿನನಿತ್ಯ ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವ ಜನವಿರೋಧಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ- ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಸೌದೆ ಒಲೆ ಹಚ್ಚಿ ಪ್ರತಿಭಟನೆ. ದಿನನಿತ್ಯ ಅಡುಗೆ ಅನಿಲ ಅಗತ್ಯ ವಸ್ತುಗಳ ಬೆಲೆಯೇರಿಕೆ ಮಾಡುತ್ತಿರುವ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಗಳ ಬೆಲೆ ಕಡಿಮೆ ಇದ್ದರೂ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಏರಿಕೆ ಮಾಡುತ್ತಿರುವ ಜನವಿರೋಧಿ ಬಿಜೆಪಿ ಸರ್ಕಾರದ ನೀತಿಯನ್ನು ಖಂಡಿಸಿ ಮಹಾವೀರ ವೃತ್ತ ದಲ್ಲಿ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಸೌದೆ ಒಲೆ ಹಚ್ಚಿ ಪ್ರತಿಭಟಿಸಿದರು.

ದೇಶಕ್ಕೆ ಅಚ್ಚೇ ದಿನ್ ತರುತ್ತೇನೆಂದು ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಅಡುಗೆ ಅನಿಲದ ದರವನ್ನು ದಿನನಿತ್ಯ ಏರಿಕೆ ಮಾಡುತ್ತಾ ಮತ್ತೆ ತಿಂಗಳಲ್ಲೇ ಒಂದೇ ಎರಡು ಬಾರಿ ಅಡುಗೆ ಅನಿಲದ ದರವನ್ನು ಏರಿಕೆ ಮಾಡುತ್ತಾ ಈಗಾಗಲೇ ಕೋವಿಡ್ ಸಂಕಷ್ಟದಲ್ಲಿರುವ ದೇಶದ ಶ್ರೀಸಾಮಾನ್ಯನ ಮೇಲೆ ಬರೆಯುತ್ತಿರುವುದು ತೀವ್ರ ಖಂಡನೀಯ. ಈಗಾಗಲೇ ಹಲವಾರು ರೈತ-ಕಾರ್ಮಿಕ ಜನವಿರೋಧಿ ನೀತಿಗಳನ್ನು ಅನುಷ್ಠಾನಗೊಳಿಸಲು ಹೊರಟಿರುವ ದೇಶದ ಅದು ಮೂರು ವಲಯಗಳನ್ನು ಖಾಸಗೀಕರಣ ಮಾಡಲು ಹೊರಟಿರುವ ಹಾಗೂ ಕೋವಿಡ್ ನಿರ್ವಹಣೆಯಲ್ಲಿ ವಿಫಲವಾದ ಈ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಹಲವು ಬಾರಿ ಎಚ್ಚರಿಕೆ ಸಂದೇಶಗಳನ್ನು ನೀಡಿದ್ದು ಕೂಡಲೇ ರಾಷ್ಟ್ರಪತಿಗಳು ಈ ಜನವಿರೋಧಿ ಕೇಂದ್ರ ಬಿಜೆಪಿ ಸರ್ಕಾರವನ್ನು ವಜಾ ಮಾಡಬೇಕು ಎಂದು ಯುವ ಕಾಂಗ್ರೆಸ್ ಆಗ್ರಹಿಸುತ್ತದೆ. ಈ ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಎಚ್. ಪಿ. ಗಿರೀಶ್ ವಹಿಸಿದ್ದರು.

ಈ ಸಂದರ್ಭದಲ್ಲಿ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಭವ್ಯ, ರಾಜ್ಯ ಯುವ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಎಂ ಪ್ರವೀಣ್ ಕುಮಾರ್ , ಶಿವಮೊಗ್ಗ ಜಿಲ್ಲೆಯ ಉಸ್ತುವಾರಿಗಳು ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರದೀಪ್ , ರಾಜ್ಯ ಕಾರ್ಯದರ್ಶಿ ಮಹಮ್ಮದ್ ರಫಿ , ಜಿಲ್ಲಾ ಕಾಂಗ್ರೆಸ್ ನ ಉಪಾಧ್ಯಕ್ಷರಾದ ಎನ್. ರಮೇಶ್ , ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ರಂಗನಾಥ್ ಮಹಾನಗರ ಪಾಲಿಕೆ ಇರುವ ಪಕ್ಷ ನಾಯಕರಾದ ಯಮುನ ರಂಗೇಗೌಡ , ಭದ್ರಾವತಿ ನಗರಸಭೆ ಸದಸ್ಯ ಶ್ರೇಯಸ್ ಚಿಟ್ಟೆ ಮಹಿಳಾ ಕಾಂಗ್ರೆಸ್ ನ ಸುವರ್ಣ ನಾಗರಾಜ್ ಗೀತಾ, ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಬಿ ಲೋಕೇಶ್ ಹೊಳೆಹೊನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಟಿ ನಿತಿನ್ , ದಕ್ಷಿಣ ಬ್ಲಾಕ್ ಎಸ್. ಕುಮರೇಶ್ ಭದ್ರಾವತಿ ಯುವ ಕಾಂಗ್ರೆಸ್ ನಗರಾಧ್ಯಕ್ಷ ವಿನೋದ್ ಕುಮಾರ್, ಭದ್ರಾವತಿ ಗ್ರಾಮಾಂತರ ಅಧ್ಯಕ್ಷ ಅಫ್ತಾಬ್ ಅಹ್ಮದ್ , ಜಿಲ್ಲಾ ಯುವ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಗಳಾದ . ಅರುಣ್ ನವಲೆ , ಸಂದೀಪ್ ಗೋಣಿ. ಸಚಿನ್ ಶಿಂದೆ, ವೆಂಕಟೇಶ್ ಕಲ್ಲೂರ್ ಪವನ್ ರಾಹುಲ್ ಸಚಿನ್, ಚಿನ್ಮಯ್ ,ಮಸ್ತಾನ್ ತಬ್ರೆಜ್ ಇತರರು ಉಪಸ್ಥಿತರಿದ್ದರು.

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153