ಶಿವಮೊಗ್ಗ ನಗರದ ಕಮಲಾ ನೆಹರು ಕಾಲೇಜ್ ಎಟಿಎನ್ ಸಿಸಿ ಕಾಲೇಜು ಹಾಗೂ ಇತರೆ ಪದವಿ ಪೂರ್ವ ಹಾಗೂ ಪದವಿ ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರ ನಿಗದಿಪಡಿಸಿದ ಹಣಕ್ಕಿಂತ ಹತ್ತು ಪಟ್ಟು ಹಣ ಶಿಕ್ಷಣ ನೀಡುವ ಹೆಸರಿನಲ್ಲಿ ಪೋಷಕರಿಂದ ಬಲವಂತವಾಗಿ ವಸೂಲಿ ಮಾಡುತ್ತಿದೆ. ಅದರಲ್ಲೂ ಅನುದಾನಿತ ಪದವಿ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಈ ರೀತಿ ಹಲವಾರು ನೆಪವೊಡ್ಡಿ ಪೋಷಕರಿಂದ ಹಣ ವಸೂಲಿ ಮಾಡಿ ದಾಖಲಾತಿ ಮಾಡಿಕೊಳ್ಳುವುದು ಖಂಡನೀಯವಾಗಿದೆ ಈಗಾಗಲೇ ಕಳೆದ ವರ್ಷಗಳ ವರ್ಷಗಳಿಂದ ಸಾರ್ವಜನಿಕರು ದೇಶಾದ್ಯಂತ ಕೊರೋನಾವೈರಸ್ ಹೆಸರಿನ ಪರಿಣಾಮ ಸುಮಾರು ಕಳೆದ ವರ್ಷ 6 ತಿಂಗಳು ಜನರು ಕೆಲಸವಿಲ್ಲದೆ ಒಂದು ಊಟಕ್ಕೂ ಕೂಡ ಪರಿತಪಿಸುವಂತಹ ಪರಿಣಾಮ ಸೃಷ್ಟಿಯಾಗಿತ್ತು ಅದೇ ರೀತಿ ಈ ವರ್ಷವೂ ಕೂಡ ಎರಡನೇ ಲಾಕ್ ಡೌನ್ ಪರಿಣಾಮ ಜನರು 2ತಿಂಗಳು ಮನೆಯಿಂದ ಹೊರಬರದಂತೆ ಮನೆಯಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ಉಂಟಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ 1ಹೊತ್ತು ಊಟಕ್ಕೂ ಕೂಡ ಪರದಾಡುವಂತ ಪರಿಸ್ಥಿತಿ ಯಲ್ಲಿ ಈ ರೀತಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ನೆಪದಲ್ಲಿ ಪೋಷಕರ ದೌರ್ಜನ್ಯವನ್ನು ದುರುಪಯೋಗ ಪಡಿಸಿಕೊಂಡು ಒಂದಕ್ಕಿಂತ ಹತ್ತರಷ್ಟು ಹಣ ವಸೂಲಿ ಮಾಡಿಕೊಂಡು ದಾಖಲು ಮಾಡಿಕೊಂಡಿತ್ತು ಗಣನೀಯವಾಗಿದೆ ಈಗಾಗಲೇ ಬಹಳಷ್ಟು ವಿದ್ಯಾರ್ಥಿಗಳು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮನೆಯಲ್ಲಿನ ಚೂರುಪಾರು ಒಡವೆ ಮನೆ ಪತ್ರ ವಾಹನ ಗಿರವಿ ಇಟ್ಟು ತಮ್ಮ ಸಂಸ್ಥೆಯಲ್ಲಿ ದಾಖಲಾತಿ ವಶಪಡಿಸಿ ಕೊಂಡಿದ್ದು ಆದರೂ ತಮ್ಮ ಹಣದ ಆಸೆ ಕಡಿಮೆಯಾಗುತ್ತಿಲ್ಲ ದಯಮಾಡಿ ತಾವುಗಳು ಮಾನವೀಯತೆ ದೃಷ್ಟಿಯಿಂದ ಈಗಾಗಲೇ ವಸೂಲಿ ಮಾಡಿದ ಹಣವನ್ನು ಪೋಷಕರಿಗೆ ಸ್ವಲ್ಪವಾದರೂ ಹಿಂತಿರುಗಿಸಬೇಕು ಹಾಗೂ ಮುಂಬರುವ ಹೆಚ್ಚುವರಿ ದಾಖಲಾತಿಯಲ್ಲಿ ಹೆಚ್ಚುವರಿ ಹಣವನ್ನು ವಸೂಲಿ ಮಾಡಿದ್ದು ಈ ಕೂಡಲೇ ನಿಲ್ಲಿಸಿ ಸರ್ಕಾರ ನಿಗದಿಪಡಿಸಿದ ಹಣವನ್ನಷ್ಟೇ ಕಟ್ಟಿಸಿಕೊಂಡು ದಾಖಲಾತಿ ಮಾಡಿಕೊಳ್ಳಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ ಇಲ್ಲವಾದಲ್ಲಿ ತಮ್ಮ ಸಂಸ್ಥೆಯ ವಿರುದ್ಧ ತಮ್ಮ ಸಂಘಟನೆಯಿಂದ ತೀವ್ರ ಪ್ರತಿಭಟನೆ ಮಾಡಲೂ ಹಿಂಜರಿಯುವುದಿಲ್ಲ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153