ಇಂದು ಜಯ ಕರ್ನಾಟಕ ರಾಜ್ಯಾಧ್ಯಕ್ಷರಾದ ಬಿ ಎನ್ ಜಗದೀಶ್ ರವರು ಗೃಹಮಂತ್ರಿಗಳಾದ ಅರಗ ಜ್ಞಾನೇಂದ್ರ ಅವರನ್ನು ಭೇಟಿ ಮಾಡಿ ಡಿವೈಎಸ್ಪಿ ಮತ್ತು ಮೇಲ್ಪಟ್ಟ ಆರಕ್ಷಕರಿಗೆ ಇಲಾಖೆವತಿಯಿಂದ ಗುಂಪು ವಿಮೆ ಮಾಡಿರುವುದನ್ನು ಸಾಮಾನ್ಯ ಪೇದೆವರೆಗೂ ವಿಸ್ತರಿಸುವಂತೆ ಜಯಕರ್ನಾಟಕ ಸಂಘಟನೆ ವತಿಯಿಂದ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಗದೀಶ್ ಬಿ ಎನ್ ರವರು ನೀವು ಈ ಸದ್ಯ ಜಾರಿ ಮಾಡಿರುವ ಗುಂಪು ವಿಮೆ ಸ್ವಾಗತಾರ್ಹ ಆದರೆ ಇದನ್ನು ಡಿವೈಎಸ್ಪಿ ಮತ್ತು ಮೇಲ್ಪಟ್ಟ ಪೋಲಿಸರಿಗೆ ಮಾಡಿರುವುದು ನೋವಿನ ಸಂಗತಿ . ಚಳಿ ಮಳೆ ಗಾಳಿಯನ್ನು ನೋಡದೆ ಪೊಲೀಸ್ ಪೇದೆಗಳು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಟ್ರಾಫಿಕ್ ಸಿಗ್ನಲ್ ನಿಂದ ಹಿಡಿದು ಕ್ರೈಮ್ ಸಿವಿಲ್ ಮೀಸಲು ಪಡೆಗಳಲ್ಲಿ ನಾಡಿನ ಸೈನಿಕರಂತೆ ದುಡಿಯುತ್ತಿದ್ದಾರೆ ಹಾಗಾಗಿ ಈ ಗುಂಪು ವಿಮೆ ಸೌಲಭ್ಯವನ್ನು ಈ ಎಲ್ಲಾ ಪೇದೆಗಳ ವರೆಗೂ ವಿಸ್ತರಿಸುವಂತೆ ಗೃಹಮಂತ್ರಿಗಳನ್ನು ಒತ್ತಾಯಿಸಿದರು . ಈ ಸಂದರ್ಭದಲ್ಲಿ ರಾಜ್ಯ ಕಾರ್ಯಾಧ್ಯಕ್ಷರಾದ ರಾಮಚಂದ್ರಯ್ಯ , ರಾಜ್ಯ ಉಪಾಧ್ಯಕ್ಷರಾದ ಮುನಿಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ರಜತ್ ಗಗನ್ ರಾಜ್ ಮುಂತಾದ ಪದಾಧಿಕಾರಿಗಳು ಉಪಸ್ಥಿತರಿದ್ದರು
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ
