ಮಹಾರಾಷ್ಟ್ರ ಮೂಲದ ಜೆನಿಟಿಕ್​ ಲೈಫ್​ ಸೈನ್ಸ್​ ಗುರುವಾರದಿಂದ ಆಂಫೊಟೆರಿಸಿನ್ ಬಿ ಎಮಲ್ಷನ್ ಚುಚ್ಚುಮದ್ದನ್ನ ತಯಾರಿಸುವ ಕಾರ್ಯ ಆರಂಭಿಸಿದೆ. ಇದು ಬ್ಲಾಕ್​ ಫಂಗಸ್​ ವಿರುದ್ಧದ ಚಿಕಿತ್ಸೆಯಲ್ಲಿ ಬಳಸುವ ಚುಚ್ಚುಮದ್ದಾಗಿದೆ. ಬ್ಲಾಕ್​ ಫಂಗಸ್​ ಅನ್ನೋದು ಶಿಲೀಂದ್ರ ಸಂಬಂಧಿ ಕಾಯಿಲೆಯಾಗಿದ್ದು, ಕೊರೊನಾದಿಂದ ಗುಣಮುಖರಾದವರಲ್ಲಿ ಈ ಕಾಯಿಲೆ ಕಾಣಿಸಿಕೊಳ್ತಿದೆ.
ದೇಶದಲ್ಲಿ ದಿನದಿಂದ ದಿನಕ್ಕೆ ಬ್ಲಾಕ್​ ಫಂಗಸ್​ ಕೇಸ್​ ಏರಿಕೆಯಾದ ಹಿನ್ನೆಲೆ ಆಂಫೊಟೆರಿಸಿನ್ ಬಿ ಚುಚ್ಚುಮದ್ದಿಗೆ ಕೊರತೆ ಉಂಟಾಗಿದೆ. ಚುಚ್ಚುಮದ್ದಿನ ವಿಚಾರವಾಗಿ ಕೇಂದ್ರ ಸಚಿವ ನಿತಿನ್​ ಗಡ್ಕರಿ ಕಚೇರಿ , ಕೋವಿಡ್​ ಸೋಂಕಿನ ಬಳಿಕ ಅನೇಕರಲ್ಲಿ ಕಾಣಿಸಿಕೊಳ್ತಿರುವ ಬ್ಲಾಕ್​ ಫಂಗಸ್​ ವಿರುದ್ಧ ನೀಡಲಾಗುವ ಆಂಫೋಟೆರಿಸಿನ್​ ಚುಚ್ಚುಮದ್ದನ್ನ ಜೆನಿಟಿಕ್​ ಲೈಫ್​ ಸೈನ್ಸ್ ಕಂಪನಿ ಉತ್ಪಾದಿಸಿದೆ.
ಇಲ್ಲಿಯವರೆಗೆ ಭಾರತದ ಏಕೈಕ ಕಂಪನಿ ಈ ಚುಚ್ಚುಮದ್ದನ್ನ ತಯಾರಿಸುತ್ತಿತ್ತು. ನಿತಿನ್​ ಗಡ್ಕರಿಯವರ ಪ್ರಯತ್ನದಿಂದ ಇದು ಸಾಧ್ಯವಾಗಿದೆ ಎಂದು ಟ್ವೀಟಾಯಿಸಿದೆ.
ಇಂಜೆಕ್ಷನ್​​ಗೆ 1200 ರೂಪಾಯಿ ನಿಗದಿ ಮಾಡಲಾಗಿದ್ದು, ಸೋಮವಾರದಿಂದ ಚುಚ್ಚುಮದ್ದು ಲಸಿಕೆಯ ವಿತರಣೆ ಆರಂಭವಾಗಲಿದೆ ಎಂದೂ ನಿತಿನ್​ ಗಡ್ಕರಿ ಕಚೇರಿಯಿಂದ ಟ್ವೀಟ್​ ಮೂಲಕ ಮಾಹಿತಿ ನೀಡಲಾಗಿದೆ. ಇಲ್ಲಿಯವರೆಗೆ ಈ ಇಂಜೆಕ್ಷನ್​ 7 ಸಾವಿರ ರೂಪಾಯಿ ದರದಲ್ಲಿ ಮಾರಾಟವಾಗುತ್ತಿತ್ತು.
ದೇಶದಲ್ಲಿ ಬ್ಲಾಕ್​ ಫಂಗಸ್​ ಕೇಸ್​ ಹೆಚ್ಚಾಗುತ್ತಿದ್ದಂತೆಯೇ ಪ್ರಧಾನಿ ಮೋದಿ ಹೇಗಾದರೂ ಮಾಡಿ ವಿಶ್ವದ ಯಾವುದೇ ಮೂಲೆಯಿಂದಾದರೂ ಸರಿ ಚುಚ್ಚುಮದ್ದನ್ನ ತರಿಸುವಂತೆ ಸೂಚನೆ ನೀಡಿದ್ದರು.

ವರದಿ: ಮಹೇಶ್ ಗೌಡ ಬೆಂಗಳೂರು