ಸಂಪ್ರದಾಯ, ಸಂಸ್ಕೃತಿ ಪಾಲನೆಯಿಂದ ಬದುಕು ಉತ್ತಮ
ಶಿವಮೊಗ್ಗ: ಸಂಪ್ರದಾಯ, ಸಂಸ್ಕೃತಿ, ಹಬ್ಬಗಳ ಆಚರಣೆ ಪಾಲನೆಯಿಂದ ನಮ್ಮ ಬದುಕು ಬೆಳಗುತ್ತದೆ. ಸನಾತನ ಕಾಲದಿಂದಲೂ ಪೂರ್ವಜರು ಹೇಳಿಕೊಟ್ಟ ಆಚರಣೆಗಳು ಮನಸ್ಸಿಗೆ ಶಾಂತಿ, ಆತ್ಮಸ್ಥೆöÊರ್ಯ ನೀಡುತ್ತದೆ ಎಂದು ಮಾಜಿ ಉಪಮೇಯರ್ ಸುರೇಖಾ ಮುರಳೀಧರ್ ಹೇಳಿದರು.
ನಗರದ ಆಚಾರ್ಯ ತುಳಸಿ ರಾಷ್ಟಿçÃಯ ವಾಣಿಜ್ಯ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಘಟಕ 1, 2 ಮತ್ತು 3, ಸ್ಪಂದನ ಮಹಿಳಾ ಘಟಕ, ಯುವ ರೆಡ್‌ಕ್ರಾಸ್, ಸಾಂಸ್ಕೃತಿಕ ವಿಭಾಗದಿಂದ ಆಯೋಜಿಸಿದ್ದ ಬಾಗಿನದ ಮಹತ್ವ ಹಾಗೂ ಬಾಗಿನ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಹಿಂದೂ ಸಂAಸ್ಕೃತಿ, ಸಂಪ್ರದಾಯದ ಹಬ್ಬ ಆಚರಣೆಗಳು ಎಲ್ಲರನ್ನು ಒಟ್ಟುಗೂಡಿಸಿ ಪ್ರೀತಿ ವಿಶ್ವಾಸದಿಂದ ಇರಲು ತುಂಬಾ ಅವಶ್ಯಕ ಎಂದು ತಿಳಿಸಿದರು.
ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿ ದೇಶಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ. ಸಾಧನೆಯ ಜತೆಯಲ್ಲಿ ಮನೆಯ ನಿರ್ವಹಣೆಯನ್ನು ಮಹಿಳೆಯರು ಸಮರ್ಥವಾಗಿ ನಿಭಾಯಿಸುವ ಕೆಲಸ ಮಾಡುತ್ತಿದ್ದಾರೆ. ಮಹಿಳೆಯರನ್ನು ಗೌರವದಿಂದ ಕಾಣುವ ಮನೋಭಾವ ಎಲ್ಲರೂ ಬೆಳೆಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿ ಹಾಗೂ ಇನ್ನರ್‌ವ್ಹೀಲ್ ಕ್ಲಬ್ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಬಿಂದು ವಿಜಯ್‌ಕುಮಾರ್ ಮಾತನಾಡಿ, ಕಾಲೇಜಿನಲ್ಲಿ ಬಾಗಿನ ಮಹತ್ವ ತಿಳಿಸುವ ವಿಶೇಷ ಕಾರ್ಯಕ್ರಮ ನಡೆಸಿರುವುದು ಅತ್ಯಂತ ಅಭಿನಂದನೀಯ. ಕಾಲೇಜಿನ ವಿದ್ಯಾರ್ಥಿಗಳು ಭಾರತ ದೇಶದ ಪುರಾತನ ಸಂಸ್ಕೃತಿಯ ಬಗ್ಗೆ ಅರಿತುಕೊಳ್ಳಬೇಕು ಎಂದು ಹೇಳಿದರು.
ರೈತ ಮಹಿಳೆ, ಆಶಾ ಕಾರ್ಯಕರ್ತೆ, ಸಮಾಜ ಸೇವಕಿ, ವೈದ್ಯೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕಿಯರಿಗೆ ಬಾಗಿನ ಸಮರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲ ಮಹಿಳೆಯರಿಗೆ ಬಾಗಿನ ನೀಡಲಾಯಿತು.
ಎಟಿಎನ್‌ಸಿಸಿ ಕಾಲೇಜಿನ ಪ್ರಾಚಾರ್ಯ ಪ್ರೊ. ಎಚ್.ಎಂ.ಸುರೇಶ್, ರೋಟರಿ ವಲಯ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್, ಡಾ. ಪರಿಸರ ನಾಗರಾಜ್, ಪ್ರೊ. ಕೆ.ಎಂ.ನಾಗರಾಜು, ಡಾ. ಸ್ಮೀತಾ ರೂಪೇಶ್ ಉಪಸ್ಥಿತರಿದ್ದರು.
.

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ