ನಮ್ಮ ರಾಜ್ಯದ 6ಸಾವಿರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚು ಗ್ರಾಮಗಳಿದ್ದು ಹದಿನೈದು ಸಾವಿರ ಗ್ರಾಮಗಳಲ್ಲಿ ಅಂತ್ಯಸಂಸ್ಕಾರ ನಡೆಸಲು ಸ್ಮಶಾನಗಳಿಲ್ಲ. ಗ್ರಾಮಗಳಲ್ಲಿ ವಾಸಿಸುವ 70% ರೈತರಿಗೆ ಬಡ ನಾಗರಿಕರಿಗೆ ಅಂತ್ಯಸಂಸ್ಕಾರ ನಡೆಸಲು ಸ್ವಂತ ಜಾಗ ಜಮೀನು ಇರುವುದಿಲ್ಲ ಜಮೀನು ಮತ್ತು ಜಾಗ ಇರುವವರು ಮೃತಪಟ್ಟರೆ ಅಂಥವರು ತಮ್ಮ ಸ್ವಂತ ಜಾಗದಲ್ಲಿ ಅಥವಾ ತೋಟಗಳಲ್ಲಿ ಅಂತ್ಯಸಂಸ್ಕಾರ ನಡೆಸುತ್ತಾರೆ. ಜಾಗವೇ ಇಲ್ಲದ ಬಡ ನಾಗರಿಕರು ಮೃತಪಟ್ಟರೆ ರಸ್ತೆಗಳ ಮಧ್ಯೆ ಕೆರೆಗಳ ಪಕ್ಕ ಚಾನೆಲ್ಗಳ ಪಕ್ಕಾ ಅಂತ್ಯಸಂಸ್ಕಾರ ಮಾಡುವಂತಹ ಪರಿಸ್ಥಿತಿ ಇದೆ. ಎಲ್ಲೆಂದರಲ್ಲಿ ಅಂತ್ಯಕ್ರಿಯೆ ನಡೆಸಿದಾಗ ಹೂತಿಟ್ಟ ಶವಗಳನ್ನು ಅರೆಬೆಂದ ಶವಗಳನ್ನು ನಾಯಿಗಳು ಎಳೆದಾಡಿಕೊಂಡು ತಿನ್ನುತ್ತಿರುವ ದೃಶ್ಯ ಗಳನ್ನು ನಮ್ಮ ಸುದ್ದಿ ಮತ್ತು ದೃಶ್ಯ ಮಾಧ್ಯಮಗಳು ಪ್ರಸಾರ ಮಾಡಿರುತ್ತಾರೆ ಪ್ರತಿ ಗ್ರಾಮದಲ್ಲಿ ಗ್ರಾಮ ಠಾಣಾ ಗುಂಡುತೋಪು ಇನ್ನಿತರ ಸರ್ಕಾರಿ ಜಾಗಗಳನ್ನು ಜಾತಿಬಲ ಹಣಬಲ ಇರುವ ಪ್ರಬಲ ವ್ಯಕ್ತಿಗಳು ವಶಪಡಿಸಿಕೊಂಡು ತೋಟ ಮತ್ತು ಜಮೀನು ಮಾಡಿಕೊಂಡಿರುತ್ತಾರೆ ಇಂತಹ ಸರ್ಕಾರಿ ಜಾಗಗಳಲ್ಲಿ ಮುಖ್ಯಮಂತ್ರಿಗಳಾದ ತಾವುಗಳು ಜಿಲ್ಲಾಡಳಿತ ತಾಲ್ಲೂಕು ಅಧಿಕಾರಿಗಳು ಗ್ರಾಮ ಪಂಚಾಯಿತಿ ಅಧಿಕಾರಿಗಳು ಸೂಚಿಸಿ ತಕ್ಷಣ ಆ ಜಾಗಗಳಲ್ಲೇ ವಶಪಡಿಸಿಕೊಂಡು ರಾಜ್ಯದ ಪ್ರತಿ ಗ್ರಾಮದಲ್ಲೂ ಸ್ಮಶಾನ ನಿರ್ಮಿಸಬೇಕೆಂದು ಕೇಳಿಕೊಳ್ಳುತ್ತೇವೆ. ಅದೇ ರೀತಿ ಅತಿವೃಷ್ಟಿ ಅನಾವೃಷ್ಟಿಯಿಂದ ಜಮೀನು ಮನೆ ಕಳೆದುಕೊಂಡ ಶೇಕಡಾ 70% ರೈತರಿಗೆ ಹಾಗೂ ಬಡ ನಾಗರಿಕರಿಗೆ 2018 ರಿಂದ ಇಲ್ಲಿಯವರೆಗೂ ಕೂಡ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪರಿಹಾರ ದೊರಕುವುದಿಲ್ಲ ತಾವು ರಾಜ್ಯದ ಬಡ ನಾಗರಿಕರು ಮೃತಪಟ್ಟರೆ ಸರ್ಕಾರದಿಂದ ಅಂತ್ಯಕ್ರಿಯೆ ನಡೆಸಲು ಮೃತಪಟ್ಟ ಸಂಬಂಧಿಕರಿಗೆ ತಕ್ಷಣ 5000ರೂ ನೀಡುವಂತೆ ಸರ್ಕಾರದ ಸ್ಪಷ್ಟ ಆದೇಶವಿದೆ ಆದರೂ ಕೂಡ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪ್ರತಿ ಜಿಲ್ಲೆ ತಾಲ್ಲೂಕು ಸಾವಿರಾರು ಅರ್ಜಿಗಳು ವಿಲೇವಾರಿ ಆಗದೆ ಹಾಗೇ ಉಳಿದುಕೊಂಡಿದೆ. ಮತ್ತು 2019 ರಿಂದ ಇಲ್ಲಿಯ ತನಕ ವಿಧವಾ ವೇತನ ವೃದ್ಯಾಪ ವೇತನ ಅಂಗವಿಕಲರ ವೇತನವನ್ನು ಸರ್ಕಾರ ಆಯಾ ತಿಂಗಳಲ್ಲಿ ಬಿಡುಗಡೆ ಮಾಡುತ್ತಿದ್ದು ತಾಲ್ಲೂಕು ಕಚೇರಿಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರ್ವರ್ ಸಮಸ್ಯೆ ತಾಂತ್ರಿಕ ಸಮಸ್ಯೆ ಹಾಗೂ ಇನ್ನಿತರ ಸಮಸ್ಯೆಗಳನ್ನು ಹೇಳಿ ವೃದ್ಧರಿಗೆ ಅಂಗವಿಕಲರಿಗೆ ವಿಧವೆಯರಿಗೆ ಜೀವನ ನಿರ್ವಹಣೆ ಮಾಡಲು ಕಷ್ಟವಾಗಿರುತ್ತದೆ. ತಾವುಗಳು ಅಧಿವೇಶನದಲ್ಲಿ ಚರ್ಚೆ ಮಾಡಿ ರಾಜ್ಯದ ಬಡ ನಾಗರಿಕರಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ನಮ್ಮ ಪಕ್ಷದ ವತಿಯಿಂದ ತಮ್ಮಲ್ಲಿ ಕೇಳಿಕೊಳ್ಳುತ್ತೇವೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153