9/9/2021 ರಂದು ಹೈದರಾಬಾದಿನ ಸಲಿಬಾನ್ ನಲ್ಲಿ 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರದ ಪ್ರಕರಣ ದಾಖಲಾಗಿದ್ದು. ಅತ್ಯಾಚಾರ ಎಸಗಿದ ಆರೋಪಿಯನ್ನು ತಕ್ಷಣವೇ ಬಂದಿಸಿ ಮರಣದಂಡನೆಗೆ ಗುರಿ ಮಾಡಬೇಕೆಂದು ಹಾಗೂ ಶಿವಮೊಗ್ಗ ನಗರದಲ್ಲಿ ಚಾಲ್ತಿಯಲ್ಲಿ ಇರುವ ಓಬವ್ವ ಪಡೆಯನ್ನು ಮತ್ತಷ್ಟು ಚುರುಕುಗೊಳಿಸಲು ಮತ್ತು ದೇಶಾದ್ಯಂತ ಹೆಣ್ಣುಮಕ್ಕಳಿಗೆ ಹಾಗೂ ಮಹಿಳೆಯರಿಗೆ ಸುರಕ್ಷತೆ ಇಲ್ಲದ ಕಾರಣ ನಮ್ಮ ಕಾನೂನಿನ ಅಡಿಯಲ್ಲಿ ಹೊಸದೊಂದು ಕಾನೂನು ಕಾಯ್ದೆ ಸೃಷ್ಟಿಸಿ ಹೆಣ್ಣುಮಕ್ಕಳು ಹಾಗೂ ಯುವತಿಯರ ರಕ್ಷಣೆಗೋಸ್ಕರ ಕೇಂದ್ರ ಸರ್ಕಾರವು ಆದೇಶ ಹೊರಡಿಸುವಂತೆ ಕೋರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತಿಭಟನೆ ಮಾಡಿ ಜಿಲ್ಲಾಧಿಕರಿಯವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಚಿನ್ಮಯ್ ಸಿಎಂ,ಅಶ್ವಿನ್ ಎಂ, ಅಂಕಿತ್, ಅಜಾದ್, ಗಗನ್, ಮತ್ತು ಹಲವು ಕಾರ್ಯಕರ್ತರು ಮತ್ತು ವಿಧ್ಯಾರ್ಥಿಗಳು ಉಪಸ್ಥಿತಿ ಇದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153