ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಟಿ.ಡಿ.ಮೇಘರಾಜ್ ಅವರು ಪತ್ರಿಕಾಗೋಷ್ಠಿ ನಡೆಸಿ ದೇಶದ ಹೆಮ್ಮೆಯ ಪ್ರದಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜೀಯವರ ಸೆಪ್ಟೆಂಬರ್ 17 ರಂದು ಹುಟ್ಟುಹಬ್ಬದ ಪ್ರಯುಕ್ತ ಜಿಲ್ಲಾ ಬಿಜೆಪಿ ಶಿವಮೊಗ್ಗ ವತಿಯಿಂದ ದಿನಾಂಕ 17.09.21 ರಿಂದ ಆಕ್ಟೊಬರ್ 07.10.21 ರ ವರೆಗೆ ಸೇವಾ ಮತ್ತು ಸಮಾರ್ಪಣ ಅಭಿಯಾನ 20 ದಿನಗಳ ಕಾರ್ಯಕ್ರಮದ ವಿವರಗಳನ್ನು ತಿಳಿಸಿದರು.
*ಸಮಯ ಬೆಳಿಗ್ಗೆ 8.00 , ಮೋದಿಜಿ ಅವರಿಗೆ ಶುಭವಾಗಲಿ ಎಂದು ಜಿಲ್ಲಾ ಬಿಜೆಪಿ ವತಿಯಿಂದ ಶ್ರೀ ಗಣಪತಿಗೆ ಪೂಜೆ .ಸ್ಥಳ :ಗಣಪತಿ ದೇವಸ್ಥಾನ ರವೀಂದ್ರನಗರ .
*ಬೆಳಗ್ಗೆ 9.00, ಜಿಲ್ಲಾ ಕಾರ್ಯಕಾರಿಣಿ ಸಭೆ,ಸ್ಥಳ : ಜಿಲ್ಲಾ ಬಿಜೆಪಿ ಕಾರ್ಯಾಲಯ.
*ಬೆಳಗ್ಗೆ 10.00, ಶಿವಮೊಗ್ಗ ನಗರ ಯುವ ಮೋರ್ಚಾ ವತಿಯಿಂದ ರಕ್ತದಾನ ಶಿಬಿರ ಆಯೋಜನೆ , .ಸ್ಥಳ : ರೋಟರಿ ಬ್ಲಡ್ ಬ್ಯಾಂಕ್ 100 ಅಡಿ ರಸ್ತೆ ಶಿವಮೊಗ್ಗ .
*ಬೆಳಿಗ್ಗೆ 10.30 ಗೌರವಾನ್ವಿತ ಪ್ರಧಾನಮಂತ್ರಿ ಯವರಿಗೆ ಶುದ್ಧ ಆರಿಸುವ ಅವರೊಂದಿಗೆ ದೇಶಕ್ಕೆ ಮತ್ತು ದೇಶದ ಜನತೆಗೆ ಕೈಗೊಂಡ ಕಾರ್ಯಗಳಿಗೆ ಸಮಾಜದ ಗಣ್ಯರಿಂದ ಧನ್ಯವಾದಗಳನ್ನು ತಿಳಿಸಿರುವ “ಪೋಸ್ಟ್ ಕಾರ್ಡ್ “ಅಭಿಯಾನ ,ಸ್ಥಳ : ಜಿಲ್ಲಾ ಬಿಜೆಪಿ ಕಾರ್ಯಾಲಯ.
*ಅಪರಾಹ್ನ 11.00, ಸೇವಾ ಕಾರ್ಯದ ಭಾಗವಾಗಿ ಹಣ್ಣುಹಂಪಲು ವಿತರಣೆ, .ಸ್ಥಳ : ವೃದ್ಧಾಶ್ರಮಗಳಲ್ಲಿ.
* ಅಪರಾಹ್ನ 11.30, ಖಾದಿ ಕೇಂದ್ರ ಸ್ಥಾಪನೆ ಮತ್ತು ಖರೀದಿ ,.ಸ್ಥಳ : ಜಿಲ್ಲಾ ಬಿಜೆಪಿ ಕಾರ್ಯಾಲಯದ ಹತ್ತಿರ.
- 12.30ರಿಂದ ಮಧ್ಯಾಹ್ನ 2.00, ಸಾಮಾಜಿಕ ಜಾಲತಾಣದ ವತಿಯಿಂದ ಕೇಂದ್ರ ಸರಕಾರದ ವಿವಿಧ ಜನಪರ ಯೋಜನೆಗಳ ಫಲಾನುಭವಿಗಳ ಹೇಳಿಕೆ ಮತ್ತು ಇನ್ಫೋಗ್ರಾಫಿಕ್ ಅನಾವರಣ. ಸ್ಥಳ : ರಾಯಲ್ ಆರ್ಕೇಡ್ ಹೋಟೆಲ್ .
- ಮಧ್ಯಾಹ್ನ 2.30ರಿಂದ ಮಧ್ಯಾಹ್ನ 3.30, ಲಸಿಕಾ ಕೇಂದ್ರದ ಸಿಬ್ಬಂದಿಗೆ (ವಾರಿಯರ್ )ಅಭಿನಂದನೆ. ಸ್ಥಳ : ಜಿಲ್ಲಾ ಬಿಜೆಪಿ ಕಾರ್ಯಾಲಯ.
- ಮಧ್ಯಾಹ್ನ 3.00, ನೂತನ ರಾಷ್ಟ್ರೀಯ ಶಿಕ್ಷಣ ನೀತಿ(NEP)ಕುರಿತು “ವಿಚಾರ ಸಂಕಿರಣ” ,ಸ್ಥಳ :ಚೇಂಬರ್ ಆಫ್ ಕಾಮರ್ಸ್ ಹಾಲ್ .
- ಸಂಜೆ 5.00, ಜಲಮೂಲ ಸ್ವಚ್ಚತೆ ಮತ್ತು ಗಂಗಾರತಿ .ಸ್ಥಳ: ಹೊಳೆಹೊನ್ನೂರು.
- ಸಂಜೆ 7.00 ಪಂಜಿನ ಮೆರವಣಿಗೆ ಶ್ರೀ ಶಿವಪ್ಪ ನಾಯಕ ಪ್ರತಿಮೆಯಿಂದ ಗೋಪಿ ವೃತ್ತದವರೆಗೆ.
ಈ ಸಂದರ್ಭದಲ್ಲಿ ರಾಜ್ಯ ಪ್ರಶಿಕ್ಷಣ ಪ್ರಕೋಷ್ಟದ ಸಹ ಸಂಚಾಲಕರಾದ ಆರ್.ಕೆ.ಸಿದ್ದರಾಮಣ್ಣ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಬಿ.ಆರ್.ಮಧುಸೂದನ್, ಪದ್ಮಿನಿ ರಾವ್, ಜಿಲ್ಲಾ ಬಿಜೆಪಿ ಪ್ರದಾನ ಕಾರ್ಯದರ್ಶಿಗಳಾದ ಬಿ.ಕೆ.ಶ್ರೀನಾಥ್, ಶಿವರಾಜ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ವಿದ್ಯಾ ಲಕ್ಷ್ಮೀಪತಿ, ಜಿಲ್ಲಾ ಮಾಧ್ಯಮ ಪ್ರಮುಖರಾದ ಕೆ.ವಿ.ಅಣ್ಣಪ್ಪ ಉಪಸ್ಥಿತರಿದ್ದರು.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153