- ಪರೀಕ್ಷಾ ಶುಲ್ಕ ಹೆಚ್ಚಳ ಮತ್ತು ಪೂರ್ಣ ಪರೀಕ್ಷಾ ಶುಲ್ಕವನ್ನು ತೆಗೆದುಕೊಳ್ಳುವುದನ್ನು ಖಂಡಿಸಿ : ವಿಶ್ವವಿದ್ಯಾಲಯದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಹೆಚ್ಚಳವಾಗಿರುತ್ತದೆ ಕೊರೊನಾದ ಈ ಸಂದರ್ಭದಲ್ಲಿ ಪರೀಕ್ಷಾ ಶುಲ್ಕ ಹೆಚ್ಚಳ ಮಾಡಿರುವುದು ಖಂಡನೀಯ ವಾಗಿರುತ್ತದೆ. ಇದಷ್ಟೆ ಅಲ್ಲದೆ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಕ್ರಮವಾಗಿ 2.4ಮತ್ತು 2ನೇ ಸೆಮಿಸ್ಟರ್ ವಿದ್ಯಾರ್ಥಿಗಳು ಕೊರೋನದ ಸಂದರ್ಭದಲ್ಲಿ ಪ್ರಮೋಟ್ ಆಗಿರುತ್ತಾರೆ. ಆದ್ದರಿಂದ ಈ ಸೆಮಿಸ್ಟರ್ ನ ಪರೀಕ್ಷೆಗಳು ನಡೆಯುತ್ತಿಲ್ಲವಾದ್ದರಿಂದ ವಿಶ್ವವಿದ್ಯಾಲಯವು ಇದನ್ನು ಪರಿಗಣಿಸಿ ಪಡೆದ ಪೂರ್ಣಪ್ರಮಾಣದ ಪರೀಕ್ಷಾ ಶುಲ್ಕವನ್ನು ಮುಂದಿನ ಸೆಮಿಸ್ಟರ್ ನ ಪರೀಕ್ಷೆ ಗಳಿಗೆ ಪರಿಗಣಿಸಬೇಕೆಂದು ನಿಮ್ಮನ್ನು ಆಗ್ರಹಿಸುತ್ತದೆ.
- ಮರು ಮೌಲ್ಯಮಾಪನ ಅವ್ಯವಸ್ಥೆಯನ್ನು ಖಂಡಿಸಿ : ವಿಶ್ವವಿದ್ಯಾಲಯದ ಹಲವಾರು ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಅಂಕಗಳು ಸಮಾಧಾನ ಇಲ್ಲದೆ ಪಕ್ಷದಲ್ಲಿ ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಿರುತ್ತಾರೆ ಅದರ ಮರು ಮೌಲ್ಯಮಾಪನದ ಫಲಿತಾಂಶವನ್ನು ಪ್ರಕಟಿಸಿದೆ ಮುಂದಿನ ಸೆಮಿಸ್ಟರ್ ನ ಪರೀಕ್ಷಾ ಶುಲ್ಕವನ್ನು ಕಟ್ಟಿಸಿಕೊಳ್ಳುತ್ತಿರುವುದು ವಿದ್ಯಾರ್ಥಿಗಳನ್ನು ಗೊಂದಲಕ್ಕೀಡು ಮಾಡಿದೆ ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯವು ಜಾವ 1ಅದನ್ನು ಬೇಗನೆ ಮರು ಮೌಲ್ಯಮಾಪನದ ಫಲಿತಾಂಶವನ್ನು ಕೊಡಬೇಕೆಂದು ವಸ್ತು ಪಾಸಾದ ವಿದ್ಯಾರ್ಥಿಗಳ ಕಟ್ಟಿದ ಪರೀಕ್ಷಾ ಶುಲ್ಕವನ್ನು ಪುನಃ ಹರಿಸಬೇಕೆಂದು ಈ ನಿಟ್ಟಿನಲ್ಲಿ ಆಗ್ರಹಿಸುತ್ತಿದೆ.
- ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಪರೀಕ್ಷೆಯನ್ನು ಮುಂದೂಡುವಂತೆ ಆಗ್ರಹಿಸಿ : ಕೊರೊನಾ ಕಾರಣದಿಂದಾಗಿ ಬಹುತೇಕ ಪಠ್ಯಕ್ರಮದ ಪಾಠಗಳು ಆನ್ ಲೈನ್ ನಲ್ಲೇ ನಡೆದಿದ್ದು ವಿದ್ಯಾರ್ಥಿಗಳಿಗೆ ಆಫ್ ಲೈನ್ ತರಗತಿಗಳು ಕೆಲವು ದಿನಗಳಷ್ಟೇ ನಡೆದಿರುವುದರಿಂದ ಪಠ್ಯಕ್ರಮವು ಸಂಪೂರ್ಣವಾಗಿ ಮುಗಿದಿರುವುದಿಲ್ಲ ಆದ್ದರಿಂದ ಅಂತಿಮ ವರ್ಷದ ಪದವಿ ಪರೀಕ್ಷೆಗಳನ್ನು ಮುಂದೂಡಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸುತ್ತೇವೆ.
ಈ ಮೇಲ್ಕಂಡ ಸಂಸ್ಥೆಗಳಷ್ಟೇ ಅಲ್ಲದೆ ವಿದ್ಯಾಲಯದ ವಿದ್ಯಾರ್ಥಿಗಳು ಸ್ಟೂಡೆಂಟ್ ಪೋರ್ಟಲ್ ಸಂಬಂಧಪಟ್ಟಂತೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಆದ್ದರಿಂದ ವಿಶ್ವವಿದ್ಯಾಲಯ ಆದಷ್ಟು ಬೇಗನೆ ಎಲ್ಲ ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ನೀಡಬೇಕೆಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಶಿವಮೊಗ್ಗ ಶಾಖೆ ತಮ್ಮನ್ನು ಆಗ್ರಹಿಸುತ್ತದೆ ಸೂಕ್ತ ಪರಿಹಾರವನ್ನು ಆದಷ್ಟು ಬೇಗ ನೀಡದಿದ್ದಲ್ಲಿ ಉಗ್ರ ಹೋರಾಟದ ಎಚ್ಚರಿಕೆಯಲ್ಲಿ ನೀಡುತ್ತೇವೆ.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153