ಆಧಾರ್ ಜೊತೆ ಪಾನ್ ಕಾರ್ಡ್ ಜೋಡಣೆ ಮಾಡುವ ಗಡುವು ಸೆಪ್ಟೆಂಬರ್ 30,2021 ರಿಂದ ಮಾರ್ಚ್ 31,2022 ರ ತನಕ ವಿಸ್ತರಿಸಲಾಗಿದೆ. ಕೋವಿಡ್ 19 ಬಿಕ್ಕಟ್ಟಿನಿಂದ ಎದುರಿಸುತ್ತಿರುವ ಸಂಕಷ್ಟವನ್ನು ಪರಿಹರಿಸಲು ನಿಯಮಾವಳಿಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕಾಲಾವಧಿಯನ್ನು ವಿಸ್ತರಿಸಲಾಗಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ಹೇಳಿದೆ. ಆದಾಯ ತೆರಿಗೆ ಕಾಯ್ದೆಯಡಿ ದಂಡ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅಂತಿಮ ದಿನಾಂಕವನ್ನು ಸೆಪ್ಟೆಂಬರ್ 30,2021 ರಿಂದ ಮಾರ್ಚ್ 31, 2022ರವರೆಗೆ ವಿಸ್ತರಿಸಲಾಗಿದೆ ಬೇನಾಮಿ ಆಸ್ತಿ ವಹಿವಾಟು ನಿಷೇಧ ಕಾಯಿದೆ 1988ರ ಅಡಿಯಲ್ಲಿ ತೀರ್ಪು ನೀಡುವ ಪ್ರಾಧಿಕಾರದಿಂದ ಸೂಚನೆ ನೀಡುವ ಮತ್ತು ಆದೇಶವನ್ನು ಜಾರಿಗೊಳಿಸುವ ಕಾಲಮಿತಿಯನ್ನು ಮಾರ್ಚ್ 2022ರವರೆಗೆ ವಿಸ್ತರಿಸಲಾಗಿದೆ.ಆಧಾರ ಕಾರ್ಡ್ ಮತ್ತು ಪಾನ್ ಕಾರ್ಡ್ ಜೋಡಣೆಯನ್ನು 31ಮಾರ್ಚ್ 2022 ರ ತನಕ ವಿಸ್ತರಿಸಲಾಗಿದೆ.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ