ಶಿವಮೊಗ್ಗ ತಾಲ್ಲೂಕಿನ ಸೋಗಾನೆ ಗ್ರಾಮದ ಸುತ್ತಮುತ್ತ ಗ್ರಾಮಗಳ ಸೋಗಾನೆ ಸರ್ವೆ ನಂ 120ರಲ್ಲಿ ವಿಮಾನ ನಿಲ್ದಾಣಕ್ಕಾಗಿ ಭೂಮಿ ರೈ ತರು ಭೂ ತ್ಯಾಗ ಮಾಡಿದ್ದು ಅದರಂತೆ ಅಂದಿನ ಮಾನ್ಯ ಉಪ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರು ಮತ್ತು ರೈತರ ಸಮಕ್ಷಮದಲ್ಲಿ 23-06-2007 ರಂದು ಒಂದು ಸಭಾ ನಡವಳಿ ನಡೆಸಿ ವಿಮಾನ ನಿಲ್ದಾಣಕ್ಕಾಗಿ ಭೂಮಿಯನ್ನು ತ್ಯಾಗ ಮಾಡಿರುವ ಸಂತ್ರಸ್ತ ಕುಟುಂಬ ರೈತರಿಗೆ ಈ ಕೆಳಕಂಡಂತೆ
- ಎಕರೆ 2.00.000ಪರಿಹಾರ ಕೊಡುವುದು.
- ಭೂಮಿಯನ್ನು ಕಳೆದುಕೊಂಡ ರೈತರಿಗೆ ಒಂದು ಸುಸಜ್ಜಿತವಾದ 60/40 ನಿವೇಶನದಲ್ಲಿ ಒಂದು ಆಶ್ರಯ ಮನೆಯನ್ನು ಗೃಹ ಮಂಡಳಿಯ ಮೂಲಕ ಕಟ್ಟಿಕೊಡುವುದು.
- ಜಮೀನು ಮತ್ತು ಮನೆಯನ್ನು ಕಳೆದುಕೊಂಡ ಯುವಕರು ಮತ್ತು ಯುವತಿಯರಿಗೆ ಉದ್ಯೋಗ ನೀಡುವುದು.
- ಬೇರೆ ಬೇರೆ ಯೋಜನೆಗೆ ಪಡೆದಂತ ಸಂತ್ರಸ್ತ ರೈತರಿಗೆ ಹಿಂದಿನ ನಡವಳಿಯಂತೆ ನಡೆದುಕೊಳ್ಳುವುದು.
- ಇನ್ನು ಉಳಿದಂತೆ ಜಮೀನು ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವುದು.
ಈ ಮೇಲ್ಕಂಡ ಸಭಾ ನಡಾವಳಿಯಂತೆ ನಡೆದುಕೊಳ್ಳದೆ ಭೂಮಿ ನೀಡಿದ ರೈತರ ಜೀವನ ಈಗ ಮೂರಾಬಟ್ಟೆಯಾಗಿದೆ ಹಾಗೂ ರೈತರ ಕುಟುಂಬ ಗಳನ್ನು ಸರ್ಕಾರ ಹೀನವಾಗಿ ನಡೆಸಿಕೊಂಡಿದ್ದು ಆದರೆ ಇದರ ವಿರುದ್ಧ ಮಾನ್ಯ ಉಚ್ಚ ನ್ಯಾಯಾಲಯದಲ್ಲಿಯೂ ಸಹ ಸಂತ್ರಸ್ತ ರೈತರ ಮೊರೆ ಹೋದ ಕಾರಣ ಮಾನ್ಯ ನ್ಯಾಯಾಲಯವು ಹಿಂದಿನ ಸಭಾ ನಡಾವಳಿಯಂತೆ ನಡೆದುಕೊಳ್ಳುವಂತೆ ಆದೇಶ ಸಹ ಮಾಡಿರುತ್ತದೆ ಇದರಂತೆ ಇತ್ತೀಚಿನ ದಿನಗಳಲ್ಲಿ ವಿಮಾನ ನಿಲ್ದಾಣ ಗುದ್ದಲಿ ಪೂಜೆಯ ಸಮಯದಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಸಂಸತ್ ಸದಸ್ಯರಿಗೆ ಹಾಗೂ ಗ್ರಾಮಾಂತರ ಶಾಸಕರಿಗೆ ಸಮಿತಿಯಿಂದ ಒತ್ತಾಯಪೂರ್ವಕವಾಗಿ ಮನವಿ ಸಲ್ಲಿಸುತ್ತೇವೆ ಹಾಗೂ ಮಾನ್ಯ ಮುಖ್ಯಮಂತ್ರಿಗಳು ಸಹ ಬೆಂಗಳೂರಿಗೆ ಹೋಗಿ ಹಲವಾರು ಸಂತಸದ ಇತರ ಮತ್ತು ಸಮಿತಿಯವರು ಮನವಿ ಸಲ್ಲಿಸುತ್ತೇವೆ ಆದರೆ ನಮ್ಮ ಮನವಿ ಹಾಗೂ ಹಿಂದಿನ ಸಭಾ ನಡವಳಿ ಹಾಗೂ ಮಾನ್ಯ ಉಚ್ಚ ನ್ಯಾಯಾಲಯದ ಆದೇಶಕ್ಕೂ ಮನ್ನಣೆ ಕೊಡದೇ ಇರುವುದರಿಂದ ವಿಮಾನನಿಲ್ದಾಣ ಸಂತಸ ರೈತರು ಬದಿ ಕಾರಖಾನೆಗೆ ಭೂಮಿ ಕೊಟ್ಟ ರೈತ ಸಂತ್ರಸ್ತ ರೈತರು ಹಾಗೂ ವೈದ್ಯಕೀಯ ಆಯುರ್ವೇದ ಕಾಲೇಜು ಜಮೀನು ಕೊಟ್ಟ ಸಂತಸ್ತ್ರ ರೈತರು ಮತ್ತು ಆಹಾರ ಘಟಕ ಮತ್ತು ಗೃಹ ಮಂಡಳಿಗೆ ಜಮೀನು ನೀಡಿದ ಸಂತ್ರಸ್ತ ರೈತರು ಹಾಗೂ ಇನ್ನುಳಿದ ಸರ್ವೇ ನಂಬರ್ 120ರ ಬಗರ್ ಹುಕಂ ಸಾಗುವಳಿದಾರರು ಸರ್ಕಾರದ ವಿರುದ್ಧ 18-09-2021 ರ ಶನಿವಾರದಂದು ಬೆಳಿಗ್ಗೆ 9.00ಗಂಟೆಯಿಂದ ವಿಮಾನ ನಿಲ್ದಾಣ ಕಾಮಗಾರಿ ಕೆಲಸ ತಡೆಹಿಡಿದು ಮೇಲ್ಕಂಡ ಬೇಡಿಕೆ ಈಡೇರುವವರೆಗೂ ಧರಣಿ ಸತ್ಯಾಗ್ರಹಕ್ಕೆ ತಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಂತ್ರಸ್ತ ಎಲ್ಲಾ ರೈತರ ಕುಟುಂಬಗಳು ರೈತಪರ ಸಂಘಟನೆ ರೈತ ಹೋರಾಟಗಾರರು ರೈತ ಮುಖಂಡರು ಭಾಗವಹಿಸಿ ಈ ಸತ್ಯಾಗ್ರಹವನ್ನು ಯಶಸ್ವಿಗೊಳಿಸಬೇಕಾಗಿ ಸಮಿತಿಯಿಂದ ಕೋರಿದೆ.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ