ಶಿವಮೊಗ್ಗ ನಗರದ ಹೊರವಲಯದ ಹುಣಸೋಡು ಬಳಿ ದಿನಾಂಕ :21-01-2021 ರ ರಾತ್ರಿ 10.20 ರ ಸುಮಾರಿಗೆ ಕಲ್ಲು ಕ್ವಾರೆಗಳಿಗೆ ಉಪಯೋಗಿಸಲು ಅಕ್ರಮವಾಗಿ ತಂದಿದ್ದ ಜೆಲೆಟಿನ್ ಕಡ್ಡಿಗಳು ಮತ್ತು ಸಿಡಿಮದ್ದುಗಳು ಸ್ಫೋಟಗೊಂಡು 6ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು ಶಿವಮೊಗ್ಗ ಜಿಲ್ಲೆ ಸೇರಿ ಗ್ರಾಮಗಳಾದ ಗೆಜ್ಜೇನಹಳ್ಳಿ ಹನುಮಂತನಗರ ಹುಣಸೋಡು ಅಬ್ಬಲಗೆರೆ ಮೊಜಪ್ಪ ಹೊಸೂರು ಬಸವನಗಂಗೂರು ಬೊಮ್ಮನಕಟ್ಟೆ ಕಲ್ಲಗಂಗೂರು ಸೇರಿದಂತೆ ಸುತ್ತಮುತ್ತಲಿನ ಅನೇಕ ಗ್ರಾಮಗಳ ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದು ಕೆಲ ಮನೆಗಳ ಮೇಲ್ಚಾವಣೆ ಮತ್ತೆ ಕೆಲವು ಅನೇಕ ಟಿವಿ ಎಲೆಕ್ಟ್ರಾನಿಕ್ ಉಪಕರಣಗಳು ಹಾನಿಗೊಳಗಾಗಿದ್ದು ಅನೇಕ ಗ್ರಾಮಸ್ಥರ ಕಿವಿಯ ತಮಟೆಗಳೂ ಹಾಳಾಗಿದೆ ಜಿಲ್ಲಾಡಳಿತ ಪೊಲೀಸ್ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ಲಕ್ಷ್ಯದಿಂದ ತಮ್ಮದಲ್ಲದ ತಪ್ಪಿನಿಂದ ನೂರಾರು ಗ್ರಾಮಸ್ಥರು ಲಕ್ಷಾಂತರ ರೂಪಾಯಿಗಳ ನಷ್ಟ ಅನುಭವಿಸುವಂತಾಗಿದೆ.ಮೇಲ್ಕಂಡ ಗ್ರಾಮಗಳ ಸುಮಾರು 850ಸಂತಸ್ತ್ರರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡಲು ಜಿಲ್ಲಾಧಿಕಾರಿಗಳಿಗೆ ತಹಸೀಲ್ದಾರರಿಗೆ ಅರ್ಜಿ ಸಲ್ಲಿಸಿದ್ದು ನವ ಕರ್ನಾಟಕ ನಿರ್ಮಾಣ ವೇದಿಕೆಯು ಘಟನೆ ನಡೆದಾಗಿನಿಂದಲೂ ಹಲವಾರು ಬಾರಿ ಭೀಕರ ಹಾಗೂ ಇತರೆ ಆರೋಪಿಗಳ ದೂರವಾಣಿ ಕರೆಗಳನ್ನು ಆಧರಿಸಿ ಪ್ರತಿಯೊಬ್ಬರಲ್ಲೂ ತನಿಖೆಗೆ ಒಳಪಡಿಸಿ ನೈಜ ತಪ್ಪಿಸ್ಥರ ಎಲ್ಲರ ಮೇಲೂ ಆರೋಪ ಪಟ್ಟಿಯನ್ನು ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದು ಹಾನಿಗೊಳಗಾದ ಸದಸ್ಯರೂ ಸಹ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮೊಬೈಲ್ ಕರೆ ಆಧರಿಸಿ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ದೂರನ್ನು ನೀಡಿದ್ದಾರೆ ಆದರೆ ಈ ಪ್ರಕರಣದಲ್ಲಿ ಸ್ಥಳೀಯ ಪೊಲೀಸರು ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿಯು ನಿಜವಾದ ಆರೋಪಿಗಳನ್ನು ಕಾನೂನು ಕ್ರಮದಿಂದ ಹೊರಗಿಟ್ಟು ವ್ಯವಸ್ಥಿತವಾಗಿ ಪ್ರಕರಣದ ಸತ್ಯಾಂಶವನ್ನು ಮುಚ್ಚಿಡಲಾಗಿದೆ ಮತ್ತು ಈ ಪ್ರಕರಣದ ಸಂಪೂರ್ಣ ಮಾಹಿತಿ ಇರುವ ಮೃತರಾದ ಪ್ರವೀಣ್ ಕುಮಾರ್ ಮತ್ತು ಇತರೆ ಆರೋಪಿಗಳ ಮೊಬೈಲ್ ಕರೆಗಳ ಮಾಹಿತಿಯನ್ನು ಪಡೆದು ತನಿಖೆ ನಡೆಸದೆ ಇರುವುದು ಮತ್ತು ಹಲವು ಕ್ರಷರ್ ಮತ್ತು ಕ್ವಾರೆ ಮಾಲೀಕರ ನೇರ ಸಹಭಾಗಿತ್ವ ಇರುವುದು ಮೇಲ್ನೋಟಕ್ಕೆ ಕಂಡು ಬಂದರೂ ಪ್ರಭಾವಿಗಳ ಒತ್ತಡಕ್ಕೆ ಮಣಿದು ಅನೇಕ ನೈಜ ಆರೋಪಿಗಳ ಹೆಸರನ್ನು ಕೈಬಿಟ್ಟು ಅಪರಿಪೂರ್ಣವಾದ ದೋಷಾರೋಷ ದುರ್ಬಲ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತಾರೆ ಅಲ್ಲದೆ ಪ್ರಕರಣದಲ್ಲಿ ಕಾಣೆಯಾಗಿದ್ದಾನೆ ಎಂದು ಹೇಳಲ್ಪಡುವ ದೇವೇಂದ್ರ ಯಾನೆ ಶಶಿ ಬೀನ್ ಚಿಕ್ಕಬೋರೇಗೌಡ ಕೆಂಗಲ್ ಹನುಮಂತಯ್ಯ ನಗರ ಸುಣ್ಣದಹಳ್ಳಿ (ಪೊ)ಭದ್ರಾವತಿ (ತಾ) ದೂರವಾಣಿ ಸಂಖ್ಯೆ 9448686027 ಇಂದ ಸ್ಫೋಟ ನಡೆದ ಗಂಟೆಗಳ ನಂತರವೂ ಇದೇ ಪ್ರಕರಣ ದಲ್ಲಿ ಕಣ್ಮರೆಯಾಗಿರುವ ಅಂತರಗಂಗೆ ಗ್ರಾಮದ ಪುನೀತ್ ಇವರ ದೂರವಾಣಿ ಸಂಖ್ಯೆ 8722222098ಗೆ ಕರೆ ಮಾಡಿ ಮಾತನಾಡಿರುವುದಾಗಿ ಗೌಡರ ದೂರವಾಣಿಯೂ ಸಾಗರ ರಸ್ತೆಯ ಚೋರಡಿ ಗ್ರಾಮದ ಆಸು ಪಾಸಿನ ವರೆಗೂ ಚಾಲನೆಯಲ್ಲಿದ್ದು ನಂತರ ಸ್ವಿಚ್ ಆಫ್ ಆಗಿರುವುದಾಗಿ ಹುಲಿ ಸ್ನೇಹಿತರು ಮಾತನಾಡಿಕೊಳ್ಳುತ್ತಿದ್ದಾರೆ ಹಾಗೂ ದೇವೇಂದ್ರ ತಂದೆ ಚಿಕ್ಕಬೋರೇಗೌಡ ರವರು ತಮ್ಮ ಮಗನ ದೂರವಾಣಿ ಸಂಖ್ಯೆ 9448686027ಸಂಖ್ಯೆಯನ್ನು ಮತ್ತು ಪ್ರಕರಣದಲ್ಲಿ ಖಾಲಿಯಾಗಿರುವ ಮತ್ತೊಬ್ಬ ಪುನೀತ್ ದೂರವಾಣಿ ಸಂಖ್ಯೆ ಕಾಣೆಯಾಗಿರುವ ನಾಗರಾಜ್ ದೂರವಾಣಿ ಸಂಖ್ಯೆ ಹಾಗೂ ಮೃತರಾಗಿರುವ ಪ್ರವೀಣ್ ಮಂಜುನಾಥ್ ಇವರ ದೂರವಾಣಿ ಸಂಖ್ಯೆಗಳನ್ನು ಸಹ ಕುಟುಂಬಸ್ಥರು ಪೊಲೀಸರಿಗೆ ನೀಡಿದ್ದಾರೆ. ಸದರಿ ಪ್ರಕರಣದಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದ ಆರೋಪಿಗಳು ಸದರಿ ಪ್ರಕರಣದಲ್ಲಿ ಸ್ಥಳೀಯ ತನಿಖಾ ತಂಡವು ನೈಜ ಆರೋಪಿಗಳಿಂದ ಹಣ ಪಡೆದು ಪ್ರಭಾವಕ್ಕೊಳಗಾಗಿ ಅವರನ್ನು ಕೈಬಿಟ್ಟಿರುತ್ತಾರೆ ಮತ್ತು ತಮ್ಮಿಂದಲೂ ಹಣ ಪಡೆದು ನಮ್ಮಲ್ಲೂ ಪ್ರಕರಣದಲ್ಲಿ ಆರೋಪಿಗಳಾಗಿ ಸೇರಿಸಿದ್ದಾರೆ ಎಂದು ಸಾರ್ವಜನಿಕವಾಗಿ ಮಾತನಾಡುತ್ತಿದ್ದಾರೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ ನವ ಕರ್ನಾಟಕ ನಿರ್ಮಾಣ ವೇದಿಕೆಯು ಈಗಾಗಲೇ ಪ್ರಕರಣದ ತನಿಖೆ ಹಾದಿ ತಪ್ಪಿಸುವ ಬಗ್ಗೆ ಗಮನಿಸಿ ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮಾನ್ಯ ಐಜಿಪಿ ರವರು ಪೂರ್ವವಲಯ ದಾವಣಗೆರೆ ಗೃಹ ಇಲಾಖೆ ಕಾರ್ಯದರ್ಶಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸ್ಥಳೀಯ ಶಾಸಕರಿಗೆ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಗೃಹ ಸಚಿವರಿಗೆ ಮುಖ್ಯಮಂತ್ರಿಗಳಿಗೆ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಗಳಿಗೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಮನವಿ ಸಲ್ಲಿಸಲಾಗಿದೆ ಆದರೆ ಈವರೆಗೆ ಪ್ರಕರಣ ನೈಜ ತನಿಖೆ ಕ್ರಮ ಕೈಗೊಂಡಿರುವುದಿಲ್ಲ . ಇದೆಲ್ಲ ಗಮನಿಸಿದಾಗ ಸ್ಥಳೀಯ ಪೊಲೀಸರ ತನಿಖೆಯಲ್ಲಿ ನ್ಯೂನ್ಯತೆಗಳು ಇರುವುದು ಸ್ಪಷ್ಟವಾಗಿ ಕಂಡು ಬಂದಿದ್ದು ಈ ಮೇಲಿನ ಎಲ್ಲ ಅಂಶಗಳನ್ನು ಪರಿಗಣಿಸಿ ನಿಷ್ಪಕ್ಷಪಾತ ಪಾರದರ್ಶಕ ತನಿಖೆ ನಡೆಸುವ ಉದ್ದೇಶದಿಂದ ಪ್ರಕರಣದ ತನಿಖೆಯನ್ನು ಸರ್ಕಾರ ಸಿಬಿಐಗೆ ವಹಿಸಿ ಬದುಕಿರುವ ಮತ್ತು ಮೃತರಾಗಿರುವ ಆರೋಪಿಗಳೆಲ್ಲ ಮೊಬೈಲ್ ಕರೆ ಆಧರಿಸಿ ತನಿಖೆ ನಡೆಸಿ ಭಾರಿ ದೊಡ್ಡ ಪ್ರಮಾಣದ ಸ್ಫೋಟಕ್ಕೆ ಕಾರಣವಾದ ಮತ್ತು ನಿರಂತರವಾಗಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ ಎಲ್ಲ ನೈಜ ಆರೋಪಿಗಳನ್ನು ಶಿಕ್ಷೆಗೆ ಗುರಿಪಡಿಸಿ ಸ್ಫೋಟದಿಂದ ಅಣಿಯಾಗಿರುವ ಎಲ್ಲ ಮನೆಗಳ ಸಂ ತಸ್ರ ರಿಗೆ ಸೂಕ್ತ ಪರಿಹಾರ ನೀಡಿ ಮುಂದಿನ ದಿನಗಳಲ್ಲಿ ಈ ರೀತಿಯ ಅಕ್ರಮಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂದು ನವ ಕರ್ನಾಟಕ ನಿರ್ಮಾಣ ವೇದಿಕೆ ಆಗ್ರಹಿಸುತ್ತಿದ್ದು ಒಂದು ವೇಳೆ ಪ್ರಕರಣವನ್ನು ಸಿಬಿಐಗೆ ವಹಿಸಿದ್ದಾರೆ ವೇದಿಕೆಯು ತಪ್ಪಿಸ್ತಾ ಬೇಜವಾಬ್ದಾರಿತನದ ಅಧಿಕಾರಿಗಳ ವಿರುದ್ಧ ಕಾನೂನು ಹೋರಾಟ ನಡೆಸುತ್ತದೆ ಎಂದು ಈ ಮೂಲಕ ಎಚ್ಚರಿಸುತ್ತೇವೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ