ಆಧುನಿಕತೆ ಮತ್ತು ತಂತ್ರಜ್ಞಾನ ಇಲ್ಲದೇ ಇರುವ ಕಾಲದಲ್ಲಿಯೂ ದೊಡ್ಡ ಅಣೆಕಟ್ಟೆಗಳು ಹಾಗೂ ಕಟ್ಟಡಗಳ ವಿನ್ಯಾಸವನ್ನು ಮಾಡಿ ನಿರ್ಮಿಸುವಲ್ಲಿ ಯಶಸ್ವಿಯಾದವರು ಸರ್ ಎಂ.ವಿಶ್ವೇಶ್ವರಯ್ಯ ಎಂದು ಲೋಕೊಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಎಂ.ಸಪತ್‌ಕುಮಾರ್ ಪಿಂಗ್ಳೆ ಹೇಳಿದರು.
ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯಿAದ ಇಂಜಿನಿರ‍್ಸ್ ಡೇ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಸ್ಥೆಯ ಇಂಜಿನಿರ‍್ಸ್ ಸದಸ್ಯರಿಗೆ ಸನ್ಮಾನಿಸಿ ಮಾತನಾಡಿದರು.
ಸರ್ ಎಂ.ವಿಶ್ವೇಶ್ವರಯ್ಯ ಅವರ ಜನುಮ ದಿನವನ್ನು ಇಂಜಿನಿರ‍್ಸ್ ಎಂದು ಆಚರಿಸಲಾಗುತ್ತಿದ್ದು, ಎಲ್ಲ ಇಂಜಿನಿರ‍್ಸ್ಗೂ ಸರ್ ಎಂವಿ ಸ್ಫೂರ್ತಿ ಹಾಗೂ ಪ್ರೇರಣಾ ಶಕ್ತಿ. ಸ್ವತಂತ್ರಪೂರ್ವ ಕಾಲದಲ್ಲಿ ಆಧುನಿಕತೆ ಇಲ್ಲದೆ ದೊಡ್ಡ ಅಣೆಕಟ್ಟುಗಳು ಹಾಗೂ ಕಟ್ಟಡಗಳ ವಿನ್ಯಾಸ ಮಾಡಿ ನಿರ್ಮಿಸಿದ್ದರು ಎಂದು ತಿಳಿಸಿದರು.
ಸರ್ ಎಂ.ವಿಶ್ವೇಶ್ವರಯ್ಯ ಅವರು ವಿಶ್ವವೇ ಬೆರಗಾಗುವಂತಹ ಕೆಲಸಗಳನ್ನು ಮಾಡಿದ್ದಾರೆ. ಆಗಿನ ಕಾಲದಲ್ಲಿ ಅವರು ಮಹಿಳೆಯರಿಗಾಗಿ ಕಾಲೇಜುಗಳು ಹಾಗೂ ಯೂನಿವರ್ಸಿಟಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಭದ್ರಾವತಿಯ ವಿ.ಐ.ಎಸ್.ಎಲ್ ಸಂಸ್ಥೆ ಸ್ಥಾಪಿಸಿ ಲಕ್ಷಾಂತರ ಜನರಿಗೆ ಉದ್ಯೋಗ ಕಲ್ಪಿಸಲು ಕಾರಣರಾಗಿದ್ದರು. ಆಗಿನ ಕಾಲದಲ್ಲಿ ಭದ್ರಾವತಿ ನಗರದಲ್ಲಿ ಪ್ರಥಮವಾಗಿ ಯುಜಿಡಿ ಡ್ರೆöÊನೇಜ್ ಸಿಸ್ಟಮ್ ಮಾಡಿದ್ದಾರೆ. ನಗರದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಅಳವಡಿಸಿದ್ದಾರೆ ಎಂದರು.
ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷ ಮಂಜುನಾಥ್ ಕದಂ ಮಾತನಾಡಿ, ಈ ದಿನ ಸರ್ ಎಂ.ವಿಶ್ವೇಶ್ವರಯ್ಯನವರ ಜನ್ಮದಿನ ಪ್ರಯುಕ್ತ ರೋಟರಿ ಇಂಜಿನಿಯರ್ ಸದಸ್ಯರಿಗೆ ಗೌರವಪೂರ್ವ ಸನ್ಮಾನಿಸಿ ಅವರು ಸಲ್ಲಿಸಿದ ಕ್ಷೇತ್ರಗಳಲ್ಲಿ ಹೆಮ್ಮೆ ತರುವಂತಹ ಕೆಲಸವನ್ನು ಮಾಡಿರುವುದರಿಂದ ಅವರುಗಳಿಗೆ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯು ಅಭಿನಂದನೆಗಳನ್ನು ತಿಳಿಸಿದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಎಂ.ಸAಪತ್ ಕುಮಾರ್ ಪಿಂಗಳೆ ಅವರಿಗೆ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಸದಸ್ಯರಾದ ಕಡಿದಾಳ್ ಗೋಪಾಲ್, ಕೆ.ಜಿ.ರಾಮಚಂದ್ರರಾವ್, ರಾಘವೇಂದ್ರ ಹೆಚ್.ಎ., ಆದಿಮೂರ್ತಿ, ಪುರುಷೋತ್ತಮ್.ಕೆ.ಎಸ್, ರತ್ನಾಕರ್, ಅನುಷ್ಕ ಗೌಡ, ಸುರೇಂದ್ರ ಕಸಲ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್, ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಸತೀಶ್ ಚಂದ್ರ, ವಸಂತ್ ಹೋಬಳಿದಾರ್, ಮಂಜುನಾಥ್‌ರಾವ್ ವಿ, ಕುಮಾರಸ್ವಾಮಿ, ಚಂದ್ರಹಾಸ್ ಶೆಟ್ಟಿ, ಬಿಂದು ವಿಜಯಕುಮಾರ್ ಮತ್ತು ಇತರರು ಉಪಸ್ಥಿತರಿದ್ದರು.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ