ಶಿವಮೊಗ್ಗ ನಗರದ ಸೈನ್ಸ್ ಮೈದಾನದಲ್ಲಿ ಬಿ.ಹೆಚ್. ರಸ್ತೆಯ ಕಾನ್ವೆಂಟ್ ಸರ್ಕಲ್, ಸೆಕ್ರೇಟ್ ಹಾರ್ಟ್ ಚರ್ಚ್, DHO ಕಛೇರಿ, ಮೀನಾಕ್ಷಿ ಭವನ ಹೋಟೆಲ್, ಬಾಪೂಜಿ ನಗರ ಪ್ರಥಮ ದರ್ಜೆ ಕಾಲೇಜು ರಸ್ತೆ, ಪದವಿ ಪೂರ್ವ ಕಾಲೇಜು ರಸ್ತೆಯ ಬೀದಿ ಬದಿ ವ್ಯಾಪಾರಸ್ಥರನ್ನು ಭೇಟಿ ಮಾಡಿದ ಜಿಲ್ಲಾಧ್ಯಕ್ಷರಾದ ಚನ್ನವೀರಪ್ಪ ಗಾಮನಗಟ್ಟಿ ರವರು ವ್ಯಾಪಾರಿಗಳು ಪುಟ್ ಪಾತ್ ಆಕ್ರಮಿಸಬೇಡಿ ರಸ್ತೆಯಲ್ಲಿ ತಳ್ಳುವ ಗಾಡಿಗಳ ಇಟ್ಟು ವಾಹನಗಳ ಸಂಚಾರಕ್ಕೆ ತೊಂದರೆ ಮಾಡಬೇಡಿ, ನಿಮ್ಮ ವ್ಯಾಪಾರದ ಸ್ಥಳವನ್ನು ಸ್ವಚ್ಛತೆಯಿಂದ ಇಟ್ಟಿಕೊಂಡು ವ್ಯಾಪಾರ ಮಾಡಿ, ಎಲ್ಲರೂ ರಸ್ತೆಯನ್ನು ಬಿಟ್ಟು ಫುಟ್ ಪಾತ್ ಒಂದು ಬದಿಯಲ್ಲಿ ವ್ಯಾಪಾರ ಮಾಡಿ ವ್ಯಾಪಾರಿಗಳ ಮಧ್ಯೆ ಮೂರು ಅಡಿ ಅಂತರ ವಿರಲಿ ಬಂದ ಗ್ರಾಹಕರಿಗೆ ಪುಟ್ ಪಾತ್ ಆಕ್ರಮಿಸಿ ಕೊಂಡು ವ್ಯವಹಾರ ಮಾಡಿದೆ ಒಂದು ಬದಿಗೆ ಬರುವಂತೆ ಅವರ ವಾಹನಗಳು ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗದ ರೀತಿಯಲ್ಲಿ ಒಂದು ಬದಿ ನಿಲ್ಲಿಸಲು ಹೇಳಬೇಕು.

ವ್ಯಾಪಾರದ ಸಮಯದಲ್ಲಿ ಗುರುತಿನ ಚೀಟಿ ತಮ್ಮ ಬಳಿ ಇರಬೇಕು. ಮಹಾನಗರ ಪಾಲಿಕೆಯ ನಿಯಮ ಪಾಲನೆ ಪೊಲೀಸ್ ಇಲಾಖೆ ನೀಡಿದ ನಿಗದಿತ ಸಮಯದ ಒಳಗಾಗಿ ವ್ಯಾಪಾರ ವಹಿವಾಟು ಬಂದು ಮಾಡಬೇಕು. ನಿಮ್ಮಲ್ಲಿ ಸಂಗ್ರಹವಾಗುವ ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ಘಂಟೆ ಗಾಡಿಗೆ ನೀಡಬೇಕು. ಕಸವನ್ನು ಗಾಡಿಗಳಿಗೆ ಹಾಕಲು ನೀರಾಕರಿಸಿದರೆ ಪಾಲಿಕೆಯ ಹೆಲ್ತ್ ಇನ್ಸ್ಪೆಕ್ಟರ್ ರವರ ಗಮನಕ್ಕೆ ತರಬೇಕು, ತಿಂಡಿ ತಿನಿಸು ವ್ಯಾಪಾರಿಗಳು ಪುಟ್ ಸೇಫ್ಟಿ ಪ್ರಮಾಣ ಪತ್ರ ಪಡೆಯಬೇಕು. ನಿಮ್ಮ ವ್ಯಾಪಾರಕ್ಕೆ ಹತ್ತ ರಿಂದ ಇಪ್ಪತ್ತು ಸಾವಿರದ ವರೆಗೆ ಕಿರುಸಾಲ ಸರ್ಕಾರ ನೀಡುತ್ತಿದೆ ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಹೂವು, ಹಣ್ಣು,
ತರಕಾರಿ, ತಿಂಡಿ ತಿನಿಸು ವ್ಯಾಪಾರಿಗಳ ಬೂತ್ ಅಧ್ಯಕ್ಷರ ನೇಮಕ ಮಾಡಲಾಯಿತು.
ವಲಯ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಶರತ್ ಸಿಂಗ್, ಬೂತ್ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಶ್ರೀಧರ್ ಮಾಧವ ನಾಯ್ಕ, ಶ್ರೀ ಜೆ.ಸಿ.ನಾಗರಾಜ್, ಶ್ರೀ ನೂರುಲ್ಲಾ ಖಾನ್ ರವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ಬೀದಿ ಬದಿ ವ್ಯಾಪಾರಸ್ಥರು ಹಾಗೂ ಇತರರೂ ಉಪಸ್ಥಿತರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ