ದೇವಾಲಯಗಳ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ಅಖಿಲ ಭಾರತ ಹಿಂದೂ ಮಹಾ ಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಅವರು ಮಹಾತ್ಮ ಗಾಂಧೀಜಿಯವರ ಅನುಯಾಯಿಗಳಿಗೆ ಜೀವ ಬೆದರಿಕೆ ಹಾಕಿದ್ದಾರೆಯಲ್ಲದೆ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಗಾಂಧೀಜಿಯವರನ್ನೇ ನಾವು ಬಿಟ್ಟಿಲ್ಲ ಅವರ ಅನುಯಾಯಿಗಳಿಗೂ ಇದೇ ಗತಿಯಾಗುತ್ತದೆ ಎಂದು ಧರ್ಮೇಂದ್ರ ಹೇಳಿರುವುದು ಖಂಡನೀಯ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ ಇಡೀ ಜಗತ್ತಿಗೆ ಅಹಿಂಸೆಯ ಸಂದೇಶ ಸಾರಿದ ಮಹಾನ್ ವ್ಯಕ್ತಿ ಗಾಂಧೀಜಿ ಇವರ ಹಾಗೂ ಇವರ ಅನುಯಾಯಿಗಳ ಬಗ್ಗೆ ಹಿಂಸಾತ್ಮಕ ಹೇಳಿಕೆ ನೀಡುವ ಮೂಲಕ ಶಾಂತಿ ಭಂಗ ಮಾಡಲು ಮುಂದಾಗಿದ್ದಾರೆ. ಕೋಮು ಸೌಹಾರ್ದತೆಗೆ ಸಂಬಂಧಿಸಿದಂತೆ ಜಿಲ್ಲೆಯು ಅತ್ಯಂತ ಸೂಕ್ಷ್ಮ ಪ್ರದೇಶವಾಗಿದೆ ಈ ಹಿಂದೆ ರಾಜ್ಯಮಟ್ಟದ ಕನ್ನಡ ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ಲೇಖನದ ಹಿನ್ನೆಲೆಯಲ್ಲಿ ಕೋಮು ಗಲಭೆ ಉಂಟಾಗಿ ಜೀವನಶೈಲಿಯಾಗಿತ್ತು ಮಹಾತ್ಮ ಗಾಂಧೀಜಿಯವರ ತತ್ವ ಸಾರಿದ ಸಂದೇಶಗಳು ಸರ್ವಕಾಲಿಕ ಇಂತಹ ಮಹಾನ್ ವ್ಯಕ್ತಿಯ ಬಗ್ಗೆ ಮಾತನಾಡಲು ಅರ್ಹತೆ ಯೋಗ್ಯತೆ ಬೇಕು ಆದರೆ ಸಂಘಟನೆಯ ನಾಯಕರೆನಿಸಿಕೊಂಡವರು ಈ ಬಗ್ಗೆ ಕಿಂಚಿತ್ತು ಆಲೋಚಿಸದೆ ಮನಬಂದಂತೆ ಹೇಳಿಕೆ ನೀಡುವುದು ನಿಲ್ಲಿಸಬೇಕು ಸೌಹಾರ್ದತೆಯನ್ನು ಹಾಳು ಮಾಡುವ ಸಾಮಾಜಿಕ ಸಾಮರಸ್ಯವನ್ನು ಕದಡುವಂತಹ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವಂತಹ ಹೇಳಿಕೆ ನೀಡಿರುವ ಧರ್ಮೇಂದ್ರರವರ ವಿರುದ್ಧ ಶಿವಮೊಗ್ಗದಲ್ಲಿ ಸಹ ಮೊಕದ್ದಮೆ ದಾಖಲಿಸಿ ಅವರನ್ನು ಬಂಧಿಸಬೇಕೆಂದು ಒತ್ತಾಯಿಸುತ್ತೇವೆ ಈ ಈ ಸಂದರ್ಭದಲ್ಲಿ ಆರ್ .ಮೋಹನ್ ರಾಮಚಂದ್ರನಾಯಕ್, ಭದ್ರಾವತಿ ಗಣೇಶ್, ಆನಂದ್ ರಾವ್ ,ರಮೇಶ್ ಗೌಡ, ತೀರ್ಥಹಳ್ಳಿ ವೆಂಕಟೇಶ್, ಸತ್ಯನಾರಾಯಣ್, ಲಕ್ಷಾದಿ, ಶಿವು ,ರವಿ ,ಗೋವಿಂದರಾಜ್, ಪರಮೇಶ್ ,ಸಿದ್ಧಪ್,ಪ ಇನ್ನಿತರರಿದ್ದರು .
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ