ಶಿಕ್ಷಣದಿಂದ ಬದಲಾವಣೆ ಮತ್ತು ಕೈಗಾರಿಕೆಯಿಂದ ಅಭಿವೃದ್ಧಿಯನ್ನು ಸಾಧಿಸುವ ನಿಟ್ಟಿನಲ್ಲಿ ಸರಕಾರ ಹೊಸ ಶಿಕ್ಷಣ ನೀತಿ ಮತ್ತು ಕೈಗಾರಿಕಾ ನೀತಿಗಳನ್ನು ಜಾರಿಗೆ ತಂದಿದ್ದು ಪರಿಣಾಮಕಾರಿ ಅನುಷ್ಠಾನಗೊಳಿಸಬೇಕಿದೆ ಎಂದು ಸಂಸದರಾದ ಬಿ. ವೈ ರಾಘವೇಂದ್ರ ತಿಳಿಸಿದರು. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಕರ್ನಾಟಕ ಸರ್ಕಾರ ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ‘ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದ ವಾಣಿಜ್ಯ ಸಪ್ತಾಹ ಅಂಗವಾಗಿ ಇಂದು ನಗರದ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಏರ್ಪಡಿಸಲಾಗಿದ್ದ 1ದಿನದ ರಫ್ತುದಾರರ ಸಮಾವೇಶ ಮತ್ತು ರಫ್ತು ಅಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕೇವಲ ಶಿಕ್ಷಣದ ಮೂಲಕ ಮಾತ್ರ ಉತ್ತಮ ಬದಲಾವಣೆ ಸಾಧ್ಯ ಎಂದು ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ ಅದರೊಂದಿಗೆ ಆರ್ಥಿಕ ಸಹಕಾರ ಮತ್ತು ಆರ್ಥಿಕ ಶಕ್ತಿಯನ್ನು ಯಾವ ರೀತಿ ಹೆಚ್ಚಿಸಬೇಕೆಂಬ ನಿಟ್ಟಿನಲ್ಲಿ ಚಿಂತನೆ ಮಾಡುತ್ತಿದೆ ಜತೆಗೆ 2020-25 ರ ಕೈಗಾರಿಕಾ ನೀತಿಯನ್ನು ಜಾರಿಗೆ ತಂದಿದ್ದು ಈ ನೀತಿಗಳನ್ನು ಅರಿತು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕಾಗಿದೆ ಎಂದರು. ಕೊರೋನಾ ಸಂಕಷ್ಟದ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಭಿರುಚಿಗೆ ಕೊರತೆ ಆಗದಂತೆ ಎಲ್ಲರ ಸಹಕಾರದೊಂದಿಗೆ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ರೈಲು ರಸ್ತೆ ಮತ್ತು ವಾಯು ಮಾರ್ಗಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಉತ್ತಮ ಅಭಿವೃದ್ಧಿಯಾಗಿದೆ ಕೈಗಾರಿಕೋದ್ಯಮಿಗಳಿಗೆ ಹೆಚ್ಚಿನ ಸಹಕಾರ ದೊರಕಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಪ್ರಯತ್ನಗಳು ಆಗುತ್ತಿದ್ದು ನಿಮಗೇನಾದರೂ ಸಲಹೆಗಳಿದ್ದರೆ ತಿಳಿಸಬಹುದು ಎಂದರು. ಬೆಂಗಳೂರು- ಮುಂಬೈ ಇಂಡಸ್ಟ್ರಿಯಲ್ ಕಾರಿಡಾರ್ ಆಗಿದ್ದು ಶಿವಮೊಗ್ಗವನ್ನು ಕಾರಿಡಾರ್ ವ್ಯಾಪ್ತಿಗೆ ಸೇರಿಸಿ ಮೂಲಭೂತ ಸೌಕರ್ಯ ಅಭಿವೃದ್ಧಿ ಉದ್ದೇಶದಿಂದ ಸೇರ್ಪಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರಫ್ತು ಮತ್ತು ಕೈಗಾರಿಕಾ ಅಭಿವೃದ್ಧಿಗೆ ಅತಿ ಅವಶ್ಯಕವಾಗಿರುವ ವಿಮಾನ ನಿಲ್ದಾಣ ಕಾಮಗಾರಿ ಆರಂಭವಾಗಿದ್ದು ಬೆಂಗಳೂರು ಬಿಟ್ಟರೆ ಶಿವಮೊಗ್ಗದಲ್ಲಿ ಅಂದರೆ 3200ಮೀಟರ್ ಅತಿ ಉದ್ದನೆಯ ರನ್ವೇ ನಿರ್ಮಾಣ ಬರುವ ಏಪ್ರಿಲ್ ನಲ್ಲಿ ಪೂರ್ಣಗೊಂಡು ಜೂನ್ ಹೊತ್ತಿಗೆ ಏರ್ ಪೋರ್ಟ್ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸ ಇದ್ದು ಆ ನಿಟ್ಟಿನಲ್ಲಿ ಕಾರ್ಯಗಳು ನಡೆಯುತ್ತಿವೆ. ಉಡಾನ್ ಯೋಜನೆಯಡಿ ಶೇ 50 ಸಬ್ಸಿಡಿ ಜಿಲ್ಲೆಯ ವಿಮಾನ ನಿಲ್ದಾಣದ ಮಂಗಳೂರು ಶಿವಮೊಗ್ಗ ದೆಹಲಿ ಶಿವಮೊಗ್ಗ ಒಂಬೈ ಶಿವಮೊಗ್ಗ ಸೇರಿದಂತೆ 5ರೂ ಗಳನ್ನು ನೀಡಲಾಗಿದೆ ಜತೆಗೆ ಇತರೆ ರೈಡ್ ಗಳಿಗೆ ಸಹ ಅವಕಾಶ ಮಾಡಿಕೊಡಲಾಗಿದೆ ಎಂದು ಮಾಹಿತಿ ನೀಡಿದರು ಶಿವಮೊಗ್ಗದಲ್ಲಿ ವಿಶೇಷವಾಗಿ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು ಇದರ ನಂತರ ಕೈಗಾರಿಕೆಗೆ ನೀಡಲಾಗಿದೆ ಕೈಗಾರಿಕಾ ಇತಿಹಾಸವನ್ನೇ ಹೊಂದಿರುವ ಶಿವಮೊಗ್ಗದಲ್ಲಿ ಬೃಹತ್ ಮಧ್ಯಮ ಮತ್ತು ಸಣ್ಣ ಕೈಗಾರಿಕಾ ಘಟಕಗಳು ಇದ್ದು ಜಿಲ್ಲೆಯಲ್ಲಿ ಒಟ್ಟಾರೆ 20,294ಕೈಗಾರಿಕೆಗಳು ಘಟಕಗಳು 2646ಕೋಟಿ ಬಂಡವಾಳ ಹೂಡಿಕೆ 1ಲಕ್ಷಕ್ಕೂ ಹೆಚ್ಚು ಕುಶಲ ಕಾರ್ಮಿಕರಿಗೆ ಕೆಲಸ ನೀಡುವುದು ಹೆಮ್ಮೆಯ ವಿಚಾರವಾಗಿದೆ ಕೈಗಾರಿಕಾ ನೀತಿ ಮತ್ತು ನಿಯಮಗಳು ಕೈಗಾರಿಕೋದ್ಯಮಿಗಳಿಗೆ ಸುಲಭವಾಗಿರಬೇಕು ಆರ್ಥಿಕ ನೆರವು ಮತ್ತು ಉತ್ತೇಜನದ ಬಗ್ಗೆಯೂ ಚರ್ಚೆ ನಡೆಯಲಿದೆ ಕಾರ್ಖಾನೆಗಳ ಪುನಾರರಂಭಕ್ಕೆ ಪ್ರಯತ್ನ ಸರ್ ಎಂ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಂಪನಿ ಎಂಪಿಎಂ ಪೇಪರ್ ಮಿಲ್ ಗಳನ್ನು ಪುನರಾರಂಭಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ ಸಾಕಷ್ಟು ಸಭೆಗಳನ್ನು ನಡೆಸಿದ್ದು ನೀತಿ ಆಯೋಗ ಸಹ ವಿಶ್ವೇಶ್ವರಯ್ಯ ಕಬ್ಬಿಣ ಕಾರ್ಖಾನೆ ಪುನರಾರಂಭದ ಕುರಿತು ಧನಾತ್ಮಕ ಸೂಚನೆ ನೀಡಿದ್ದು ಎಂಪಿಎಂ ಕಾರ್ಖಾನೆ ಪುನಾರಂಭಕ್ಕೆ ಸಹ ಪ್ರಯತ್ನಿಸಲಾಗುತ್ತಿದೆ . 400- 500 ಕೋಟಿ ಅಡಮಾನ ಸಾಲದಿಂದ ಕಾರ್ಖಾನೆ ಹೊರಬರಲು ನಿಕಟ ಪೂರ್ವ ಮುಖ್ಯಮಂತ್ರಿಗಳು ಶ್ರಮಿಸಿದ್ದಾರೆ ಎಂದ ಅವರು ಹೀಗೆ ಮುಖ್ಯವಾದ ಕಾರ್ಖಾನೆಗಳು ಸಂಕಷ್ಟದಲ್ಲಿರುವ ಸಮಯದಲ್ಲಿ ಶಿವಮೊಗ್ಗಾದ ಶಾಹಿ ಕಂಪೆನಿ ಯವರು ಸುಮಾರು ಹದಿನೆಂಟು ಸಾವಿರ ಉದ್ಯೋಗಗಳಿಗೆ ಉದ್ಯೋಗ ನೀಡಿದ್ದಾರೆ ಜಿಲ್ಲೆಯ ಕೈಗಾರಿಕೆ ಉದ್ಯಮಿಗಳು ಉತ್ತಮ ಸಾಧನೆ ತೋರಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು ಬೈಂದೂರಿನಲ್ಲಿ ಬಂದರು ನಿರ್ಮಾಣ ಶಿವಮೊಗ್ಗಾದಿಂದ 80ರಿಂದ 90ಕೀ. ಮೀ ದೂರದಲ್ಲಿರುವ ಬೈಂದೂರು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸೇರಿದ್ದು ಅಲ್ಲಿ ಬಂದರೂ ನಿರ್ಮಿಸಿ ದೇಶಾಂತರಗಳಿಂದ ರಫ್ತು ವಿಶೇಷ ಕ್ರೂಸ್ ಗಳ ಓಡಾಟಕ್ಕೆ ಅವಕಾಶ ಮಾಡುವ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ ನಡೆಯುತ್ತಿದ್ದು ಮಂಗಳೂರು ಬಿಟ್ಟರೆ ಬೈಂದೂರಿನಲ್ಲಿ ಮಾತ್ರ ಈ ವ್ಯವಸ್ಥೆ ಇರಲಿದೆ ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಡಿ ಎಸ್ ಅರುಣ್ ಮಾತನಾಡಿ ಇದೆಲ್ಲ ಕೈಗಾರಿಕಾ ಕೇಂದ್ರಗಳು ಎಂದರೆ ಲಾಭ ಮಾಡಿಕೊಳ್ಳುವ ಸಮಸ್ಯೆಗಳೆಂದು ನೋಡಲಾಗುತ್ತಿತ್ತು ಕೈಗಾರಿಕೆಗೆ ಸಂಬಂಧಿಸಿದಂತೆ ಸರ್ಕಾರ ಯೋಜನೆಗಳನ್ನು ರೂಪಿಸಿದ್ದರು ಅದರ ಪರಿಣಾಮಕಾರಿ ಅನುಷ್ಠಾನದ ಕೊರತೆ ಹೆಚ್ಚಿದ್ದು ಕೈಗಾರಿಕೆಗಳಿಗೆ ಅತಿ ಮುಖ್ಯವಾಗಿ ಬೇಕಿರುವುದು ಆರ್ಥಿಕ ಸಹಕಾರ ಸರ್ಕಾರ ಮತ್ತು ಹಣಕಾಸಿನ ಸಂಸ್ಥೆಗಳು ಇದನ್ನು ಒದಗಿಸಿದ್ದಲ್ಲಿ ಕೈಗಾರಿಕಾ ಅಭಿವೃದ್ಧಿ ಅಕ್ಷರಶಃ ಸಾಧ್ಯವಾಗುತ್ತದೆ ಆದರೆ ಇತ್ತೀಚಿನ ದಿನಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಕೈಗಾರಿಕೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಉತ್ತಮ ಯೋಜನೆಗಳು ಜಾರಿಗೆ ತಂದಿದ್ದು ಅನುಷ್ಠಾನಕ್ಕೆ ಶ್ರಮಿಸುತ್ತಿದೆ ನಗರದಲ್ಲಿ ಏರ್ ಪೋರ್ಟ್ ಇಲ್ಲದ ಕಾರಣ ರಫ್ತಿಗೆ ಉತ್ತೇಜನ ಕಡಿಮೆ ಇತ್ತು ಆದರೆ ತಮ್ಮ ಕ್ಷೇತ್ರದ ಸಂಸದರ ಕೃಪೆಯಿಂದ ಎಂಟರಿಂದ ಹತ್ತು ತಿಂಗಳಲ್ಲಿ ನಗರದ ಏರ್ ಪೋರ್ಟ್ ಕಾರ್ಯಾರಂಭಗೊಳಿಸಿದ್ದು ಇದರಿಂದ ಕೈಗೊಂಡ ಅಭಿವೃದ್ಧಿ ರಫ್ತು ಇದಕ್ಕೆ ಸಂಬಂಧಿತ ಚಟುವಟಿಕೆಗಳು ಚುರುಕು ಪಡೆಯಲಿವೆ. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಆರ್ ಗಣೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ಭಾರತ ಸರ್ಕಾರ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸೆಪ್ಟೆಂಬರ್ ಇಪ್ಪತ್ತ ರಿಂದ ಇಪ್ಪತ್ತ ರವರೆಗೆ ವಾಣಿಜ್ಯ ಸಪ್ತಾಹವನ್ನು ಪ್ರತಿ ಜಿಲ್ಲೆಯಲ್ಲಿ ಏರ್ಪಡಿಸಲಾಗಿದ್ದು ಅದರಲ್ಲಿ 1ದಿನ ರಫ್ತು ಉತ್ತೇಜನ ಕುರಿತು ಕಾರ್ಯಕ್ರಮ ಆಯೋಜಿಸಲು ಸೂಚಿಸಿರುವ ಅನ್ವಯ ಕಾರ್ಯ ಕ್ರಮಗಳು ಆಯೋಜಿಸಿದ್ದು ಸರ್ಕಾರದ ಆಶಯದಂತೆ ಪ್ರತಿ ಜಿಲ್ಲೆ ಕೂಡ ರಫ್ತು ಕೇಂದ್ರವಾಗುವ ನಿಟ್ಟಿನಲ್ಲಿ ಕೆಲಸಗಳನ್ನು ಕೈಗೊಳ್ಳೋಣ ಎಂದರು ಕಾರ್ಯಕ್ರಮದಲ್ಲಿ ಕೈಗಾರಿಕೆಯಲ್ಲಿ ಉತ್ತಮ ಸಾಧನೆ ತೋರಿದ ಶಾಂತಲಾ ಮತ್ತು ಮಲೆನಾಡು ಅಲಾಯನ್ಸ್ ಕಂಪೆನಿಯ ಪದಾಧಿಕಾರಿಗಳನ್ನು ಗೌರವಿಸಲಾಯಿತು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜೆ ಆರ್ ವಾಸುದೇವ್ , ಎಮ್ ಎ ರಮೇಶ್ ಹೆಗ್ಡೆ ಘೆವರ್ ಚಂದ್ ವಿ ಉಮೇಶ ಶಾಸ್ತ್ರಿ ಮತ್ತು ಇತರರು ಉಪಸ್ಥಿತರಿದ್ದರು.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ