- ಕೋವಿಡ್ ಸೇವೆಗೆ ನೇಮಿಸಲ್ಪಟ್ಟಿರುವ ಎಲ್ಲ ಸ್ಕೀಂ ವರ್ಕರ್ ಗಳನ್ನು ಫ್ರಂಟ್ರೈನ್ ನೌಕರರೆಂದು ಘೋಷಿಸಿ ಎಲ್ಲರಿಗೂ ಈ ಕೂಡಲೇ ಉಚಿತ ಮತ್ತು ಸಾರ್ವಜನಿಕ ಲಸಿಕೆ ಅಭಿಯಾನ ಕೈಗೊಳ್ಳಲು ಹಾಗೂ ಫ್ರಂಟ್ರೈನ್ ನೌಕರರಿಗೆ ಮೊದಲ ಆದ್ಯತೆ ನೀಡಿ ವ್ಯಾಕ್ಸಿನ್ ಉತ್ಪಾದನೆ ಹೆಚ್ಚಿಸಿ ಹಾಗೂ ನಿಗದಿತ ಅವಧಿಯೊಳಗೆ ಸಾರ್ವತ್ರಿಕ ಮತ್ತು ಉಚಿತ ಲಸಿಕಾ ಕಾರಣವನ್ನು ಖಾತ್ರಿಪಡಿಸಲು ಮ್ಯಾಕ್ಸಿಮ್ ಹಂಚಿಕೆಯನ್ನು ಸರ್ಕಾರದ ಹಿಡಿತಕ್ಕೆ ಒಳಪಡಿಸಿ.
- ಎಲ್ಲ ಆರೋಗ್ಯ ಸಿಬ್ಬಂದಿ ನೌಕರರು ಹಾಗೂ ಸ್ಕೀಂ ವರ್ಕರ್ ಗಳು ಸೇರಿದಂತೆ ಮಹಾಮಾರಿ ನಿರ್ವಹಣೆಯಲ್ಲಿ ತೊಡಗಿರುವ ಪ್ರತಿಯೊಬ್ಬರಿಗೂ ಸುರಕ್ಷಾ ಸಾಧನ ಸಲಕರಣೆ ಇತ್ಯಾದಿಗಳನ್ನು ಖಾತ್ರಿಪಡಿಸಿ ಎಲ್ಲಾ ನೌಕರರಿಗೂ ನಿಯತಕಾಲಿಕವಾಗಿ ಉಚಿತ ಕೋವಿಡ್ ಪರೀಕ್ಷೆ ನಡೆಸಿ ಸೋಂಕಿತ ನೌಕರರಿಗೆ ಆಸ್ಪತ್ರೆ ಸೇವೆಯಲ್ಲಿ ಮೊದಲ ಆದ್ಯತೆ ನೀಡಿ .
- 6% ಜಿಡಿಪಿಯನ್ನು ಆರೋಗ್ಯ ಕ್ಷೇತ್ರಕ್ಕೆ ಒದಗಿಸಿ ಸಮಪರ್ಕ ಪ್ರಮಾಣದ ಬೆಡ್ಗಳು ಆಮ್ಲಜನಕ ಮತ್ತಿತರ ಆರೋಗ್ಯ ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಸಾರ್ವಜನಿಕ ಆರೋಗ್ಯ ಕೇಂದ್ರ ಮತ್ತು ಆರೋಗ್ಯ ಸಂಪನ್ಮೂಲಗಳನ್ನು ಬಲಪಡಿಸಿ ಸಮಪರ್ಕ ಪ್ರಮಾಣದ ಆರೋಗ್ಯ ಸಿಬ್ಬಂದಿಯನ್ನು ನೇಮಿಸಿಕೊಳ್ಳಿ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಪರಿಣಾಮಕಾರಿ ಚಿಕಿತ್ಸೆ ಖಾತ್ರಿಪಡಿಸಿ.
- ಸೇವಾವಧಿಯಲ್ಲಿ ಮೃತಪಟ್ಟ ಎಲ್ಲ ನೌಕರರಿಗೆ ಐವತ್ತು ಲಕ್ಷ ರೂಪಾಯಿಗಳ ವಿಮೆ ಸುರಕ್ಷೆ ಒದಗಿಸಬೇಕು ಕೋವಿಡ್ ಅಂಕಿತ ನೌಕರರು ಹಾಗೂ ಅವರ ಕುಟುಂಬಸ್ಥರಿಗೆ ಗರಿಷ್ಠ ವೆಚ್ಚವನ್ನು ಸರ್ಕಾರವೇ ಭರಿಸಬೇಕು.
- ಹೆಚ್ಚುವರಿಯಾಗಿ ಕೋವಿಡ್ -19 ಸೇವೆಯಲ್ಲಿ ನಿರತರಾಗಿರುವ ಎಲ್ಲಾ ಗುತ್ತಿಗೆ ನೌಕರರು ಮತ್ತು ಸ್ಕೀಂ ವರ್ಕರ್ ಗಳಿಗೆ ಮಾನಸಿಕ ಹತ್ತು ಸಾವಿರಗಳ ಅವಘಡ ಭತ್ಯೆ ಒದಗಿತ್ತು.
- ಸೇವಾ ಅವಧಿಯಲ್ಲಿ ಸೋಂಕಿತರಾದ ಪ್ರತಿಯೊಬ್ಬರಿಗೂ ಕನಿಷ್ಠ ಹತ್ತು ಲಕ್ಷ ರೂಪಾಯಿಗಳ ಪರಿಹಾರ ಒದಗಿಸಿ .
- ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ಹಿಂಪಡೆ ವರ್ಕರ್ ಗಳನ್ನು ಕಾರ್ಮಿಕರೆಂದು ಪರಿಗಣಿಸಿ ಎಲ್ಲ ಸ್ಕೀಂ ವರ್ಕರ್ ಗಳಿಗೂ ಇ ಶ್ರಮ್ ಪೋರ್ಟ್ನಲ್ಲಿ ನೋಂದಾಯಿಸಿಕೊಳ್ಳಲು ಅವಕಾಶ ಒದಗಿಸಿ.
- ಕೇಂದ್ರ ಪ್ರಾಯೋಜಿತ ಯೋಜನೆಗಳಾದ ಐಸಿಡಿಎಸ್ ಎನ್ ಹೆಚ್ ಎಂ ಎಂಡಿಎಂ ಎಸ್ ಯೋಜನೆಗಳನ್ನು ಖಾಯಂಗೊಳಿಸಿ ಹಾಗೂ ಬಜೆಟ್ ನಲ್ಲಿ ಸಮಪರ್ಕ ನಿಧಿಯನ್ನು ಒದಗಿಸಿ. ಐ ಡಿ ಎಸ್ ಮತ್ತು ಎಂ ಡಿ ಎಂ ಎಸ್ ಫಲಾನುಭವಿಗಳಿಗೆ ಈ ಕೂಡಲೇ ಉತ್ತಮ ಗುಣಮಟ್ಟದ ಹೆಚ್ಚುವರಿ ಪಡಿತರ ವಿತರಿಸಿ ವಲಸಿಗರಲ್ಲಿ ಈ ಯೋಜನೆಗೆ ಸೇರಿಸಿಕೊಳ್ಳಿ.
- ಸ್ಕೀಂ ವರ್ಕರ್ ಗಳನ್ನು ಕಾರ್ಮಿಕರೆಂದು ಪರಿಗಣಿಸಿ ಅವರ ಕಾಯಮಾತಿಗಾಗಿ 45 ಮತ್ತು 46 ನೇ ಭಾರತೀಯ ಕಾರ್ಮಿಕರ ಸಮಾವೇಶ ಮಾಡಿರುವ ಶಿಫಾರಸುಗಳನ್ನು ಅನುಷ್ಠಾನಗೊಳಿಸಿ ತಿಂಗಳಿಗೆ ಕನಿಷ್ಠ ಇಪ್ಪತ್ತು ಸಾವಿರ ವೇತನ ಹಾಗೂ ಪಿಂಚಣಿ ಪಾವತಿಸಿ ಎಲ್ಲ ಸ್ಕೀಂ ವರ್ಕರ್ ಗಳಿಗೆ ಇಎಸ್ಐ ಮತ್ತು ಪಿಎಫ್ ಒದಗಿಸಿ .
- ಈಗಿರುವ ವಿಮಾ ಯೋಜನೆಗಳಾದ ಪ್ರಧಾನಮಂತ್ರಿ ಜೀವನಜ್ಯೋತಿ ವಿಮಾ ಯೋಜನೆ ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ ಅಂಗನವಾಡಿ ನೌಕರರ ವಿಮಾ ಯೋಜನೆಯನ್ನು ಸರಿಯಾಗಿ ಜಾರಿಗೆ ತಂದು ಎಲ್ಲ ಸ್ಕೀಂ ವರ್ಕರ್ ಗಳು ಅವರ ಪ್ರಯೋಜನ ಸಿಗುವಂತಾಗ ಬೇಕು.
- ಇಡೀ ಅವಧಿಯಲ್ಲಿ ದೇಶದ ಪ್ರತಿ ವ್ಯಕ್ತಿಗೂ ತಿಂಗಳಿಗೆ ತಲಾ ಹತ್ತು ಕೆಜಿ ಆಹಾರಧಾನ್ಯ ಒದಗಿಸುವ ಬೆಲೆ ಏರಿಕೆ ನಿಯಂತ್ರಿಸಿ ತೆರಿಗೆ ಪಾವತಿಸಲಾದ ಕುಟುಂಬಗಳಿಂದ 6ತಿಂಗಳ ಕಾಲ ಮಾಸಿಕ 7500 ಸಹಾಯಧನ ನೀಡಿ ಎಲ್ಲರಿಗೂ ಉದ್ಯೋಗ ವರಮಾನ ಖಚಿತಪಡಿಸಿ.
- ಆರೈಕೆ ಪೌಷ್ಠಿಕತೆ ಹಾಗೂ ಶಿಕ್ಷಣ ಮೂಲಭೂತ ಸೇವೆಗಳ ಖಾಸಗೀಕರಣ ಪ್ರಸ್ತಾವನೆಯನ್ನು ಹಿಂಪಡೆಯಿರಿ ಸಾರ್ವಜನಿಕ ಉದ್ದಿಮೆಗಳು ಸೇವಾ ವಲಯಗಳ ಖಾಸಗೀಕರಣ ನಿಲ್ಲಿಸಬೇಕು.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ