ಹಾವು ಕಡಿದವರಿಗೆ ಹರನನ್ನು ಗೆಲ್ಲುವ ಹಾವು ಕಡಿದವರಿಗೆ ನೀಡಿ ಸಾವಿರಾರು ಜನರ ಜೀವನವನ್ನೆ ಗೆಲ್ಲಿಸಿದ ಕಿರ್ತಿ ಕೊಪ್ಪಳ ಜಿಲ್ಲೆಯ ಭಿಮನೂರಿನ ಶಿಕ್ಷಕರಾದ ಶೈಲಾನಿಭಾಷಾ ವಾಲಿಕಾರ ಕುಟುಂಬಕ್ಕೆ ಸಲ್ಲುತ್ತದೆ ತಲಾ ತಲಾಂತರದಿಂದ ಬಂದ ನಾಟಿ ಔಷಧಿ ಕೊಡುವಂತ ಪದ್ದತಿಯನ್ನ ಮುಂದುವರೆಸಿಕೊಂಡು ತಮ್ಮದೆ ಅಳಿಲು ಸೇವೆಯನ್ನ ಶಿಕ್ಷಕ ವೃತ್ತಿಯ ಜೊತೆಗೆ ಹಾವು ಚೇಳು ವಿಷಜಂತುಗಳು ಕಚ್ಚಿದರೆ ಔಷದಿಯನ್ನು ಉಚಿತವಾಗಿ ನೀಡಿ ಯಾವದೆ ಫಲಾಪೆಕ್ಷಗಳನ್ನು ಬಯಸದೆ ತಮ್ಮದೆ ರೀತಿಯಲ್ಲಿ ಅದ್ಬುತವಾದ ಸಾಮಾಜಿಕ ಸೇವೆಯನ್ನ ಮಾಡುತ್ತಿದ್ದಾರೆ.ಕೊಪ್ಪಳ ಜಿಲ್ಲೆಯ ಹಿಟ್ನಾಳ ಗ್ರಾಮದ ಮೈಲಾರಿ ಹನುಮಂತಪ್ಪ ಬನ್ನಿಕಲ್ ಎಂಬ ವಿದ್ಯಾರ್ಥಿಗೆ ಎಡಗಾಲು ಮೊಣಕಾಲು ಕೆಳಗಡೆ… ಮೀನು ಹಿಡಿಯಲು ಹೋಗಿ ಹಾವು ಕಚ್ಚಿತ್ತು… ಶೈಲಾನ್ ಬಾಷಾ ಅವರು ಔಷಧೊಪಚಾರದ ನಂತರ ಆ ವಿಧ್ಯಾರ್ಥಿಯು ಪ್ರಣಾಯಾಪಾಯದಿಂದ ಪಾರಾಗಿದ್ದಾನೆ.
ವಿಶೇಷ ಏನೆಂದರೆ ರಂಜಾನ್ ತಿಂಗಳಿನಲ್ಲಿ ಅವರು ಉಪವಾಸ ಇದ್ದರು ಕೂಡಾ ಅಂತಹ ಬಿಸಿಲಿನ ಧಗೆಯಲ್ಲು ಗುಡ್ಡದ ಕಡೆಹೋಗಿ ಹರ ಸಾಹಸ ಪಟ್ಟು ಔಷಧಿ ತಂದು ಕೊಡುವಲ್ಲಿ ಯಶಸ್ವಿಯಾಗಿ. ಜೀವ ಕಾಪಾಡುವಲ್ಲಿಯೂ ಯಶಸ್ವಿಯಾಗಿದ್ದಾರೆ
ಅಷ್ಟೆ ಅಲ್ಲದೆ ಭಿಮನೂರಿನ ಸುತ್ತ ಇಪ್ಪತ್ತು ಹಳ್ಳಿಗಳಲ್ಲಿ ಯಾರಿಗಾದರು ವಿಷಜಂತು ಕಚ್ಚಿದರೆ ತಕ್ಷಣ ನೆನಪಾಗುವದು ಭಿಮನೂರಿನ ವಾಲಿಕಾರ ಅವರ ಕುಟುಂಬ.

ಯಾವದಾದರು ಒಂದು ವಿಧ್ಯೆ ಗೊತ್ತಿದ್ದರೆ ಸಾಕು ಇವಾಗಿನ ಕಾಲದಲ್ಲಿ ಅದನ್ನೆ ಪ್ರಚಾರ ಮಾಡಕೊಂಡು ಅದನ್ನೆ ದೊಡ್ಡ ಬಂಡವಾಳ ಮಾಡಿಕೊಂಡು ವ್ಯಾಪಾರಿಕರಣ ಮಾಡಿ ಸಾಕಷ್ಟು ದುಡ್ಡು ಮಾಡಿಕೊಳ್ಳುವಂತ ಸ್ವಾರ್ಥ ಜಗತ್ತಿನಲ್ಲಿ ಯಾವದೆ ಪ್ರಚಾರ ಬಯಸದೆ ಆಸೆ ಆಕಾಂಕ್ಷೆ ಗಳನ್ನು ನೀರಿಕ್ಷಿಸದೆ ನಿಸ್ವಾರ್ಥ ಸೇವೆ ಮಾಡುವವರು ಬಹಳ ವಿರಳ ಅಂತವರ ಗುಂಪಿಗೆ ನಮ್ಮ ವಾಲಿಕಾರ ಕುಟುಂಬ ಸೇರುತ್ತದೆ ನಿಜವಾಗಲು ಹೆಮ್ಮೆ ಅನಿಸುತ್ತೆ ಶಿಕ್ಷಕ ವೃತ್ತಿಯ ಜೊತೆಗೆ ನಾಟಿ ಔಷಧಿಯನ್ನು ಕೊಡುವಂತ ಪೃವೃತ್ತಿ ಬೆಳೆಸಿಕೊಂಡು ಮುಂದುವರೆಸಿಕೊಂಡು ಹೊಗುತ್ತಿರುವ ಗುರುವೈದ್ಯ ಕುಟುಂಬಕ್ಕೆ ಅಲ್ಲಾಹನು ಕರುಣೆ ಅವರ ಮೆಲಿರಲಿ.

*ಹಾವು ಕಚ್ಚಿದವರಿಗೆ ಉಚಿತ ಔಷಧಿ ನೀಡುವ ಈ ಸೇವಾ ಕಾರ್ಯ ಮಾಡುತ್ತಾರೆ.

ಸುಗಂಧಿ ಪ್ರಜಾಶ್ರೀ ಸಂಪಾದಕರು ಹೈಕೋರ್ಟ್ ವಕೀಲರು ಬೆಂಗಳೂರು