ಕೋವಿಡ 19 ಸಾಂಕ್ರಾಮಿಕ ಎರಡನೇ ಅಲೆ ಆಡುತ್ತಿರುವ ಈ ಸಂದರ್ಭದಲ್ಲಿ ಅದರ ನಿಯಂತ್ರಣಕ್ಕಾಗಿ ಸರ್ಕಾರವು ಅನಿವಾರ್ಯವಾಗಿ ಕಟ್ಟುನಿಟ್ಟಿನ ಆಗಿರುವುದರಿಂದ ಕೈಗಾರಿಕೆಗಳನ್ನು ಪೂರ್ಣ ಮಟ್ಟದಲ್ಲಿ ನಡೆಸುವ ಬಹಳಷ್ಟು ಕೈಗಾರಿಕೆಗಳು ಈಗಾಗಲೇ ಮುಚ್ಚಿವೆ ಹಾಗೂ ಉಳಿದ ಕೈಗಾರಿಕೆಗಳಿಗೆ ಅವಶ್ಯಕತೆ ಅನುಗುಣವಾಗಿ ಕೇವಲ ಶೇಕಡಾ 50 ರಷ್ಟು ಕಾರ್ಮಿಕರನ್ನು ಇಟ್ಟುಕೊಂಡು ಉತ್ಪಾದನೆಯನ್ನು ನಡೆಸುವಂತೆ ಅನುಮತಿ ನೀಡಿದೆ . ಕೈಗಾರಿಕಾ ಆಕ್ಸಿಜನ್ ಕೊರತೆ ಉಂಟಾಗಿ ಹೆಚ್ಚಿನ ಫೌಂಡ್ರಿ ಘಟಕಗಳು ಕಾರ್ಯ ನಿರ್ವಹಣೆ ಮಾಡುತ್ತಿಲ್ಲ ಹೀಗಾಗಿ ಕೈಗಾರಿಕಾ ಉತ್ಪನ್ನ ಕುಂಟಿತಗೊಂಡು Break even ವಹಿವಾಟನ್ನು ನಡೆಸಲು ಸಾಧ್ಯವಾಗುತ್ತಿಲ್ಲ ವಿದ್ಯುತ್ ಬಳಕೆಯೂ ಕೂಡ ಕಡಿಮೆಯಾಗಿದೆ ಕಳೆದ ವರ್ಷ ಕೂಡ ಇದೆ ಕೋವಿಡ 19 ಮೊದಲಾದ ಸಂದರ್ಭದಲ್ಲಿ ಇದೇ ಕಾರಣಕ್ಕಾಗಿ M.D Charges ನು ಮನ್ನಾ ಮಾಡಲಾಗಿದ್ದು ವಿದ್ಯುತ್ ವಿತರಣಾ ಕಂಪನಿಗಳು ಈಗ ವಿಧಿಸುತ್ತಿರುವ Minimum demand charges ಹಾಗೂ ರಾಜ್ಯ ಸರ್ಕಾರ ನಡೆಸುತ್ತಿರುವ ಶೇಕಡಾ 9ರ ವಿದ್ಯುತ್ ತೆರಿಗೆಯನ್ನು ಸಾಂಕ್ರಾಮಿಕ ರೋಗ ಹತೋಟಿಗೆ ಬಂದಿದ್ದು ಉತ್ಪಾದನೆ ಸಾಮಾನ್ಯವಾಗುವವರೆಗೆ ವಿಧಿಸುದಿರುವಂತೆ ಈ ಮೂಲಕ ತಮ್ಮನ್ನು ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ