ನಗರ ವ್ಯಾಪ್ತಿಯಲ್ಲಿ ಇದ್ದಂತಹ ಸೋಂಕು ಗ್ರಾಮೀಣ ಪ್ರದೇಶಕ್ಕೆ ಪ್ರಾರಂಭವಾಗಿದೆ ಮುಂದಿನ ತಿಂಗಳು ಮುಂಗಾರು ಪ್ರಾರಂಭವಾಗಿ ಕೃಷಿ ಚಟುವಟಿಕೆಗಳು ಆರಂಭವಾಗಲಿದ್ದು , ಈಗಾಗಲೇ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರುಗಳು 3 ಪಂಚಾಯ್ತಿ ವ್ಯಾಪ್ತಿಯಲ್ಲಿ 1 ಸೆಂಟರನ್ನು ತೆರೆಯುತ್ತೇನೆ ಎಂದು ಸಭೆಯಲ್ಲಿ ತಿಳಿಸಿದರು. ಆದರೆ ನಗರ ವ್ಯಾಪ್ತಿಯಲ್ಲಿ ಖಾಸಗಿ ಆಸ್ಪತ್ರೆಗಳು ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯಗಳು ಅತಿ ವೇಗವಾಗಿ ಸಿಗುತ್ತದೆ .ಆದರೆ ಗ್ರಾಮೀಣ ಪ್ರದೇಶದಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದು ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶದ ಆಸ್ಪತ್ರೆಗಳಿಗೆ ಸೋಂಕಿತ ರೋಗಿಯು ಬರುವುದರೊಳಗೆ ಚಿಂತಾಜನಕ ಸ್ಥಿತಿ ತಲುಪುತ್ತಿರುವುದು ದುರಾದೃಷ್ಟಕರ ಪರಿಸ್ಥಿತಿ ಉಂಟಾಗಿದ್ದು ಗ್ರಾಮಾಂತರ ಭಾಗದಿಂದ ಎಷ್ಟೋ ಜನ ಕೆಲಸವನ್ನು ಅರಸಿ ಬೆಂಗಳೂರು ಸೇರಿದಂತೆ ದೊಡ್ಡ ದೊಡ್ಡ ನಗರಗಳಿಗೆ ಗುಳೆ ಹೋಗಿದ್ದರು ನಗರ ಪ್ರದೇಶದಲ್ಲಿ ಸೊಂಕು ಹೆಚ್ಚಾದ ತಕ್ಷಣ ಅವರುಗಳು ತಮ್ಮ ತಮ್ಮ ಗ್ರಾಮಗಳಿಗೆ ವಾಪಸ್ ಆಗಿದ್ದು ಈಗಾಗಲೇ ಶಿವಮೊಗ್ಗ ತಾಲ್ಲೂಕಿನ ಹಲವು ಗ್ರಾಮಗಳು ರೆಡ್ ಜೋನ್ ಗ್ರಾಮಗಳಾಗಿದ್ದು , ಇಡೀ ಗ್ರಾಮ ಗ್ರಾಮವೇ ಸೀಲ್ ಡೌನ್ ಆಗಿರುತ್ತದೆ.ಇದರಿಂದ ಜಿಲ್ಲೆಯ ಎಲ್ಲ ಗ್ರಾಮಾಂತರ ಭಾಗದ ಎಲ್ಲಾ ಜನರು ಆತಂಕಕ್ಕೆ ಈಡಾಗಿದ್ದಾರೆ ಆದ್ದರಿಂದ ಪ್ರತಿ ಗ್ರಾಮದಲ್ಲಿ ಕೋವಿಂದ್ ಕೇರ್ ಸೆಂಟರ್ ತೆರೆಯಲು ಹೊಳೆಹೊನ್ನೂರು ಘಟಕ ಕಾಂಗ್ರೆಸ್ ಅಧ್ಯಕ್ಷರಾದ ನಿತಿನ್ ಅವರು ಮನವಿ ಮಾಡಿದರು ಈ ಸಂದರ್ಭದಲ್ಲಿ ವೆಂಕಟೇಶ್ ಗೋವಿಂದ್ ವರ್ಮಾ ಪುನೀತ್ ಕಾರ್ತಿಕ್ ಉಪಸ್ಥಿತರಿದ್ದರು
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ