ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಈಶ್ವರಪ್ಪನವರು ಶಿವಮೊಗ್ಗ ನಗರದಲ್ಲಿ 203 ಶಿವಮೊಗ್ಗ ಗ್ರಾಮಾಂತರದಲ್ಲಿ 254 ಕಂಟೋನ್ಮೆಂಟ್ ಜೂನ್ ಗಳಿದ್ದು ಜನರು ಪರಿಸ್ಥಿತಿಯ ತೀವ್ರತೆಯನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಹಾಗಾಗಿ ಮೇ 31 ರಿಂದ ಜೂನ್ 7 ರವರೆಗೆ ಲಾಕ್ ಡೌನ್ ಮಾಡಲು ಎಲ್ಲ ಶಾಸಕರು ಸಂಸದರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ. ಸೋಮವಾರದಿಂದ ಸರ್ಕಾರಿ ಕಚೇರಿಗಳು ಹಾಗೂ ಬ್ಯಾಂಕ್ ಗಳು ಕೂಡ ಇರುವುದಿಲ್ಲ. ಜನರು ವೈದ್ಯಕೀಯ ಕಾರಣ ಬಿಟ್ಟು ಬೇರೆ ಯಾವುದಕ್ಕೂ ಮನೆಯಿಂದ ಹೊರಬರಬಾರದು. ಹಾಗೇನಾದರೂ ಅನಗತ್ಯವಾಗಿ ಬಂದಲ್ಲಿ ವಾಹನವನ್ನು ಸೀಸ್ ಮಾಡಿ ಅಂಥವರನ್ನು ಅರೆಸ್ಟ್ ಕೂಡ ಮಾಡಲಾಗುತ್ತದೆ ಎಂದು ಎಚ್ಚರಿಸಿದರು. ಬೆಳಿಗ್ಗೆ 6 ರಿಂದ 8ಗಂಟೆ ತನಕ ತರಕಾರಿ ಹಾಗೂ ಸಣ್ಣ ಸಣ್ಣ ದಿನಸಿ ಅಂಗಡಿಗಳು ತೆರೆದಿರುತ್ತವೆ. ಯಾವುದೇ ಕಾರಣಕ್ಕೂ ತಮ್ಮ ಏರಿಯಾ ಬೇರೆಯ ಏರಿಯಾಕ್ಕೆ ಹೋಗುವಂತಿಲ್ಲ ಎಂದು ಹೇಳಿದರು. ಜಿಲ್ಲಾಧಿಕಾರಿಗಳು ಮಾತನಾಡಿ 1ವಾರದ ಈ ಲಾಕ್ ಡೌನ್ ಯಿಂದಾಗಿ ಪರಿಸ್ಥಿತಿ ಹತೋಟಿಗೆ ಬರುವ ಆಶಾದಾಯಕ ಕಾರಣದಿಂದ ತೀರ್ಮಾನಿಸಲಾಗಿದೆ ಎಂದರು. ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ ಉಸ್ತುವಾರಿ ಸಚಿವರಾದ ಈಶ್ವರಪ್ಪನವರು ಹಣಕಾಸು ಸಂಸ್ಥೆಗಳು ಸಾಲ ಮರುಪಾವತಿಗೆ ಕೇಳುವ ಸಮಯವೇ ಅಲ್ಲ. ಅಂಥ ಪ್ರಕರಣಗಳು ನಡೆದರೆ ನಿರ್ದಾಕ್ಷಿಣ್ಯವಾಗಿ ಸಂಸ್ಥೆಯ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದು ಹೇಳಿದರು.
ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ