30/9/21 ಶಿವಮೊಗ್ಗ ನಗರದ ಶೇಷಾದ್ರಿ ಪುರ ಬಡಾವಣೆಯ ಶ್ರೀಪ್ಲೇಗಮ್ಮ, ಶ್ರೀಕಾಳಿಕಾ ದೇವಾಲಯದಲ್ಲಿ 5ನೇ ದಿನದ ಶಿವಮೊಗ್ಗ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸ್ವಚ್ಛತಾ ಸಪ್ತಾಹ ಆಂದೋಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಚನ್ನವೀರಪ್ಪ ಗಾಮನಗಟ್ಟಿ ರವರು, ಈ ಸ್ವಚ್ಛತಾ ಕಾರ್ಯ ಬರಿ ಒಂದು ದಿನಕ್ಕೆ ಸೀಮಿತವಾಗದೆ ದಿನನಿತ್ಯವೂ ನಮ್ಮ ಸುತ್ತ ಮುತ್ತಲಿನ ಪ್ರದೇಶವನ್ನು ಸ್ವಚ್ಛತೆಯಿಂದ ಇಡಬೇಕು. ಸಂಗ್ರಹ ವಾಗುವ ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ಗೊಬ್ಬರ ಮಾಡಿ. ಇತರೆ ರಾಜ್ಯಗಳಲ್ಲಿ ಉಸಿರಾಡುವ ಗಾಳಿಗೆ ಒಂದು ನಿಮಿಷಕ್ಕೆ ಐದು ನೂರು ರೂಪಾಯಿಯಿಂದ ಹೆಚ್ಚಿನ ಹಣ ನೀಡಬೇಕು. ನಮ್ಮ ಮನೆಯ ಅಂಗಳದಲ್ಲಿ ಒಂದು ಗಿಡವ ನೆಟ್ಟು ಶುದ್ಧ ಗಾಳಿಯ ಸೇವಿಸಿ ಆರೋಗ್ಯ ಕಾಪಾಡಿಕೋಳ್ಳಿ. ಅಸಂಘಟಿತ ಕಾರ್ಮಿಕರಿಗೆ ಇ-ಶ್ರಮ್ ಕಾರ್ಡ್ ನ್ನು (CSC) ಸೇವಾ ಸಿಂಧುವಿನಲ್ಲಿ ಉಚಿತವಾಗಿ ಮಾಡಿಕೊಡಲಾಗುತ್ತಿದೆ. ಆಧಾರ್ ಕಾರ್ಡ್ ಮತ್ತು ಪೋನ್ ನಂಬರ್ ಇದ್ದರೆ ಸಾಕು, ನಿಮಗೆ ಗೋತ್ತಿರುವ ವೃತ್ತಿಯ ನಮೋದಿಸಿದರೆ ಸಾಕು. ಇನ್ನೂ ಹಲವು ಸರಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ಬೂತ್ ಅಧ್ಯಕ್ಷರಾಗಿ ಶ್ರೀಮತಿ ಯಶೋಧ ರಮೇಶ್ ರವರನ್ನು ನೇಮಕ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ವಾರ್ಡ್ ಅಧ್ಯಕ್ಷರಾದ ಶ್ರೀಮತಿ ರಂಗಮ್ಮ ಹನುಮಂತಪ್ಪ ಹಾಗೂ ಇತರರೂ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ