ಇಂದು ನಡೆದ ಬಿಜೆಪಿ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ
ಸೇವೆ ಮತ್ತು ಸಮರ್ಪಣ ಅಭಿಯಾನವನ್ನು ಜಗಮೆಚ್ಚಿದ, ಜನಮೆಚ್ಚಿದ ನಾಯಕರಾದ ನಮ್ಮೆಲ್ಲರ ಹೆಮ್ಮೆಯ ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರ 71 ನೇ ವರ್ಷದ ಹುಟ್ಟುಹಬ್ಬದ ಮತ್ತು ಗಾಂಧಿ ಜಯಂತಿಯ ಹಾಗೂ ಲಾಲ ಬಹದ್ದೂರ ಶಾಸ್ತ್ರಿ ಜಯತಿ ಪ್ರಯುಕ್ತ ಕೂಡ್ಲಿಯಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ನ ನಿಕಟಪೂರ್ವ ಸದಸ್ಯರಾದ ಕಾಂತೇಶ್ ಹಾಗೂ ಬಿಜೆಪಿ ಶಿವಮೊಗ್ಗ ಗ್ರಾಮಾಂತರ ಅಧ್ಯಕ್ಷರಾದ ರತ್ನಾಕರ ಶೆಣೈ ರವರು ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಡಿ.ಎಂ. ಗಿರೀಶ್, ಎಸ್.ಎಸ್. ಗೋಪಾಲ್ ಮಾಮ್ಕೋಸ್ ನಿರ್ದೇಶಕರಾದ ವಿರುಪಾಕ್ಷಪ್ಪ, ಹಾಗೂ ಎಸ್ ಸಿ ಮೋರ್ಚಾ ಅಧ್ಯಕ್ಷರಾದ ಮಂಜುನಾಥ್ ಚನ್ನಮುಂಭಾಪುರ ಹಾಗೂ ಗ್ರಾಮಾಂತರ ಯುವ ಮೋರ್ಚಾದ ಅಧ್ಯಕ್ಷರಾದ ಪವನ್ ಪ್ರಧಾನ ಕಾರ್ಯದರ್ಶಿಗಳಾದ ಅಭಿಲಾಶ್, ಅನಿಲ್ ಕುಮಾರ್, ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಮು ಕೋಹಳ್ಳಿ, ಪ್ರಕಾಶ್ ಸೂಗೂರು ,ಯುವಮೋರ್ಚಾ ಖಜಾಂಚಿ ನಿಶಾಂತ್, ಉಪಾಧ್ಯಕ್ಷರಾದ ಗೌತಮ್ ಸದಸ್ಯರಾದ ದಿವಾಕರ್ ಗೋಪಿ ಕೂಡ್ಲಿ ಶಕ್ತಿಕೇಂದ್ರ ಸಂಚಾಲಕರಾದ ಶ್ರೀನಿವಾಸ್ ಅಯ್ಯರ್ ಹಾಗೂ ಗ್ರಾಮದ ಎಲ್ಲಾ ಸದಸ್ಯರು ಮುಖಂಡರು ಉಪಸ್ಥಿತರಿದ್ದರು.
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ