“ಸಂಘಟನೆಯ ಚತುರ”ಯುವ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಬಿ.ಗುಣರಂಜನ್ ಶೆಟ್ಟಿರವರ ಸಾರಥ್ಯದ “ಜಯಕರ್ನಾಟಕ ಜನಪರ ವೇದಿಕೆ”ಯು ಉದಯವಾಗಿ ಇಂದಿಗೆ “365ದಿನಗಳು”(1ವರ್ಷ) ಹಾಗೂ “ಗಾಂಧಿಜಯಂತಿ” ಅಂಗವಾಗಿ “ಮನೆಗೊಂದು ಮರ ಊರಿಗೊಂದು ಕೆರೆ” “ಜಯಕರ್ನಾಟಕ ಜನಪರ ವೇದಿಕೆಯ ನಡೆ ನಿಸರ್ಗದ ಕಡೆ” ಎಂಬ ಅಭಿಯಾನದಡಿಯಲ್ಲಿ ವಿಶೇಷವಾಗಿ ಬೆಂಗಳೂರು ಜಿಲ್ಲೆಯ,ಆನೇಕಲ್ ತಾಲ್ಲೂಕಿನ,ಮರಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ,ಮಡಿವಾಳ ಗ್ರಾಮದಲ್ಲಿ “ಭೈರವ ವನ ನಿರ್ಮಿಸಿ”365 ಹಣ್ಣಿನ ಹಾಗೂ ವಿವಿಧ ಬಗೆಯ ಗಿಡಗಳನ್ನು ನೆಡುವ ಮೂಲಕ “1ನೇವಾರ್ಷಿಕೋತ್ಸವ” ಕಾರ್ಯಕ್ರಮ ಮತ್ತು “ಗಾಂಧಿ ಜಯಂತಿ” ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಜಯಕರ್ನಾಟಕ ಜನಪರ ವೇದಿಕೆಯು ಉದಯವಾಗಿ 365ನೇ ದಿನವಾದ ನೆನ್ನೆ (02.10.2020 — 02.10.2021)ಪ್ರಾಣಿ-ಪಕ್ಷಿಗಳಿಗೆ ಹಾಗೂ ಆರೋಗ್ಯದ ದೃಷ್ಟಿಯಿಂದ ಜನರಿಗೆ ಉಪಯುಕ್ತವಾದ 365🌳🌴ಗಿಡಗಳನ್ನು ನೆಡುವುದರ ಮೂಲಕ 1ನೇ ವಾರ್ಷಿಕೋತ್ಸವವನ್ನು ಆಚರಿಸಿದ ಸಂದರ್ಭದಲ್ಲಿ ಜಯಕರ್ನಾಟಕ ಜನಪರ ವೇದಿಕೆಯ ಸದಸ್ಯತ್ವದ ಗುರುತಿನ ಚೀಟಿಯನ್ನು ಬಿಡುಗಡೆಗೊಳಿಸಲಾಯಿತು.
ಈ ಕಾರ್ಯಕ್ರಮಗಳಿಗೆ ಜಯ ಕರ್ನಾಟಕ ಜನಪರ ವೇದಿಕೆ ಕುಟುಂಬದ ಸದಸ್ಯರುಗಳು ಸಾವಿರ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ