ಕಳೆದ ವರ್ಷ 2020-2021 ನೇ ಸಾಲಿನಲ್ಲಿ ಅತಿ ಹೆಚ್ಚು ಮಳೆಯಾಗಿರುವುದು ಅತಿವೃಷ್ಟಿ ಸಂಭವಿಸಿದ ಸಾಕಷ್ಟು ಸಂಖ್ಯೆಯಲ್ಲಿ ಮನೆಗಳು ಕುಸಿದು ಬಡವರ ನಿರ್ಗತಿಕರ ಮನೆಯನ್ನು ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವ ಬಡವರಿಗೆ ಕನಿಷ್ಠ 5.00 ಲಕ್ಷ ರೂ ಗಳನ್ನು ನೀಡುವುದಾಗಿ ಸರ್ಕಾರ ಘೋಷಿಸಿದೆ ಇದು ಕೇವಲ ಬಡವರ ಕಣ್ಣೊರೆಸುವ ತಂತ್ರವಾಗಿದ್ದು ಯಾವುದೇ ರೀತಿಯ ಸಹಾಯವನ್ನೂ ಮಾಡದೆ ಬಡವರನ್ನು ಬೀದಿಯಲ್ಲಿ ಮಲಗಿಸುವಂತೆ ಮಾಡಿದೆ. ಕಳೆದ ವರ್ಷ ಮನೆಯನ್ನು ಕಳೆದುಕೊಂಡಿರುವವರು ಅರ್ಜಿಸಲ್ಲಿಸಲು ಹೋದಾಗ ತಾಂತ್ರಿಕ ದೋಷದ ನೆಪಹೇಳಿ ಅರ್ಜಿಗಳನ್ನು ಸ್ವೀಕರಿಸಿ ತಾಂತ್ರಿಕ ದೋಷ ಸರಿಯಾದ ಮೇಲೆ ಅರ್ಜಿಗಳನ್ನು ಒಂದನೇ ಮಾಡುವುದಾಗಿ ನಂತರ ಪರಿಹಾರ ಕೊಡುವುದನ್ನು ಕೊಟ್ಟು ಅರ್ಜಿಗಳನ್ನು ಸ್ವೀಕರಿಸುತ್ತಾರೆ.
ಪ್ರಸಕ್ತ 2021-2022 ನೇ ಸಾಲಿನಲ್ಲಿ ಆನ್ಲೈನ್ನಲ್ಲಿ ಸರ್ಕಾರವು ಅರ್ಜಿ ಹಾಕಲು ಅವಕಾಶ ಕೊಟ್ಟಾಗ ಕಳೆದ ವರ್ಷದ ಅರ್ಜಿಗಳನ್ನು ಈ ವರ್ಷ ನೊಂದಣೆ ಮಾಡಲು ಅವಕಾಶ ಇಲ್ಲ ಎಂದು ಪ್ರಸಕ್ತ ಸಾಲಿನಲ್ಲಿ ಅರ್ಜಿಗಳನ್ನು ಮಾತ್ರ ತೊಂದರೆ ನೊಂದಣಿ ಮಾಡಿಕೊಳ್ಳುತ್ತಿದ್ದಾರೆ. ಶಿವಮೊಗ್ಗ ತಾಲ್ಲೂಕು ಕಚೇರಿಯಲ್ಲಿ 150 ರಿಂದ 200 ಅರ್ಜಿಗಳು ಬಾಕಿ ಉಳಿದಿರುತ್ತದೆ. ಕಳೆದ ಬಾರಿ ಮನೆಯನ್ನು ಕಳೆದುಕೊಂಡು ಬಡವರನ್ನು ಕಡೆಗಣಿಸಿ ಮತ್ತಷ್ಟು ಸಂಕಷ್ಟಕ್ಕೆ ಹೇಳುತ್ತಿದ್ದಾರೆ. ಸರ್ಕಾರದ ನಡೆಯುವ ಅತ್ಯಂತ ಕ್ರೂರವಾಗಿದ್ದು ಅತಿವೃಷ್ಟಿಯಿಂದ ಮನೆಯನ್ನು ಕಳೆದುಕೊಂಡು ಎಲ್ಲಾ ಬಡವರಿಗೂ ಪ್ರಾಮಾಣಿಕವಾಗಿ ಪರಿಹಾರ ನೀಡಬೇಕು ಹಾಗೂ 2017-18 ನೇ ಸಾಲಿನಿಂದಲೂ ಗ್ರಾಮ ಪಂಚಾಯತ್ ಗಳಲ್ಲಿ ಕೂಡ ಇದುವರೆಗೆ ಒಂದು ಮನೆಯನ್ನು ನೀಡಿರುವುದಿಲ್ಲ. ಹೀಗಾಗಿ ಸಾಮಾನ್ಯ ಬಡವರ ಮನೆಯನ್ನು ಕಟ್ಟಲು ಅಸಹಾಯಕರಾಗಿದ್ದಾರೆ.
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ