ಶಿವಮೊಗ್ಗ ನ್ಯೂಸ್…
ದಿನಾಂಕಃ-12-10-2021 ರಂದು ಮದ್ಯಾಹ್ನ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ರಾಜೀವಗಾಂಧಿ ಬಡಾವಣೆಯ ರೋಟರಿ ಚಿತಾಗಾರದ ಹತ್ತಿರ ಯಾರೋ 04 ಜನ ವ್ಯಕ್ತಿಗಳು ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪಿ.ಐ ಕೋಟೆ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳ ತಂಡವು ದಾಳಿ ನಡೆಸಿ ರಾಯಚೂರು ಜಿಲ್ಲೆಯ ಇಬ್ಬರು ಆರೋಪಿತರು ಹಾಗೂ ಶಿವಮೊಗ್ಗ ನಗರದ ಇಬ್ಬರು ಆರೋಪಿತರು ಸೇರಿ ಒಟ್ಟು 04 ಜನರನ್ನು ಬಂಧಿಸಿ ಆರೋಪಿತರ ವಶದಿಂದ ಅಂದಾಜು ಮೌಲ್ಯ 1,65,000/- ರೂಗಳ ಒಟ್ಟು 2 ಕೆಜಿ 782 ಗ್ರಾಂ ತೂಕದ ಒಣ ಗಾಂಜಾ ಹಾಗೂ 02 ದ್ವಿ ಚಕ್ರ ವಾಹನಗಳನ್ನು ವಶಪಡಿಸಿಕೊಂಡು ಆರೋಪಿತರ ವಿರುದ್ದ ಗುನ್ನೆ ಸಂಖ್ಯೆ:0129/2021 ಕಲಂ 20(b) NDPS ಕಾಯ್ದೆ ರಿತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.