ವಿದ್ವತ್ ಭಾರತ ಉಪನ್ಯಾಸ ಕಾರ್ಯಕ್ರಮ…
ಶಿವಮೊಗ್ಗ: ವಿದ್ವತ್ ಭಾರತ ವತಿಯಿಂದ ಶ್ರೀ ಡಾ, ವಿಶ್ವಸಂತೋಷ ಭಾರತೀ ಶ್ರೀಪಾದಂಗಳವರಿಂದ ವಿದ್ವತ್ ಭಾರತ ವಿಶೇಷ ಉಪನ್ಯಾಸ ಮಾಲೆ ಹಾಗೂ ಗುರುವಂದನಾ ಕಾರ್ಯಕ್ರಮ ಅ,16 ರಿಂದ 19 ರವರೆಗೆ ನಾಲ್ಕು ದಿನಗಳ ಕಾಲ ಪ್ರತಿದಿನ ಸಂಜೆ 5:30 ಕ್ಕೆ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ.ಈ ಕುರಿತು ಇಂದು ಪತ್ರಿಕಾಗೋಷ್ಠಿಯಲ್ಲಿ ವಿವರಣೆ ನೀಡಿದ ವಿದ್ವತ್ ಭಾರತದ ಸಂಚಾಲಕ ಎಸ್.ಕೆ ಶೇಷಾಚಲ, ಹಾಗೂ ಅಧ್ಯಕ್ಷ ಟಿ.ಆರ್ ಅಶ್ವಥ್ ನಾರಾಯಣ ಶೆಟ್ಟಿ. ವಿಶ್ವ ಸಂತೋಷ ಭಾರತಿಯವರ 50ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಗುರುವಂದನ ಮತ್ತು ಉಪನ್ಯಾಸ ಮಾಲೆ ಕಾರ್ಯಕ್ರಮ ಆಯೋಜಿಸಲಾಗಿದೆ ಇದೊಂದು ಸಂಸ್ಕೃತಿ, ಸಾಹಿತ್ಯ, ಸಂಗೀತ ಮತ್ತು ಗುರುವಂದನಾ ಕಾರ್ಯಕ್ರಮದ ಸಮ್ಮಿಲನವಾಗಿದೆ ಎಂದರು. ಅ,16 ರಂದು ಸಂಜೆ 5:30ಕ್ಕೆ ಕಾರ್ಯಕ್ರಮವನ್ನು ಬೆಕ್ಕಿನಕಲ್ಮಠದ ಶ್ರೀ ಡಾ, ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಉದ್ಘಾಟಿಸುವರು. ಡಾ, ವಿಶ್ವಸಂತೋಷ ಭಾರತೀ ಯವರು ಸಾನಿಧ್ಯವಹಿಸಲಿದ್ದು ಮುಖ್ಯಅಥಿತಿಗಳಾಗಿ ಸಚಿವ ಕೆ.ಎಸ್.ಈಶ್ವರಪ್ಪ, ಭಾಗವಹಿಸಲಿದ್ದಾರೆ.
ಡಾ. ವಿಶ್ವಸಂತೋಷ ಭಾರತಿ ಶ್ರೀಪಾದಂಗಳವರು ಸಾನಿಧ್ಯದಲ್ಲಿ…
ಗುರುಗುಹದ ವಿದ್ವಾನ್ ಶೃಂಗೇರಿ ಹೆಚ್.ಎಸ್. ನಾಗರಾಜ್ ಅವರನ್ನು ಸನ್ಮಾನಿಸಲಾಗುವುದು ಎಂದರು.ಪ್ರತಿದಿನ ಉಪನ್ಯಾಸ ನಸೆಯಲಿದೆ ಅ,16 ರಂದು ಭೀಷ್ಮಾಚಾರ್ಯ, ಅ,17 ರಂದು ಪ್ರಾಚೀನ ಭಾರತದಲ್ಲಿ ಗಣಿತ ವಿಜ್ಞಾನ, ಅ,18 ರಂದು ಪ್ರಾಚೀನ ಭಾರತ ವಿದ್ವತ್ ಕುರಿತು ಉನ್ಯಾಸಗಳು ನಡೆದರೆ ಇದೆ ಸಂದರ್ಭದಲ್ಲಿ ನೃತ್ಯಗುರು ಗೀತಾದಾತರ್, ಎಸ್.ಎಸ್.ಶಿವಾನಂದ ಸ್ವಾಮಿ ಅವರನ್ನು ಸನ್ಮಾನಿಸಲಾಗುವುದು ಹಾಗೆಯೇ ಪ್ರತಿದಿನ ವಿವಿಧ ಭಜನಾ ಮಂಡಳಿಗಳಿಂದ ಭಜನೆ ಕಾರ್ಯಕ್ರಮ ನಡೆಯಲಿದೆ ಎಂದರು.ಅ,19 ರಂದು ಗುರುವಂದನಾ ಕಾರ್ಯಕ್ರಮ ನಡೆಯಲಿದೆ. ಅಂದು ಡಾ, ವಿಶ್ವ ಸಂತೋಷ ಭಾರತೀ ಶ್ರೀ ಪಾದಂಗಳವರನ್ನು ಅಭಿನಂದಿಸಲಾಗುವುದು ಈ ಕಾರ್ಯಕ್ರಮದ ಸಾನಿಧ್ಯವನ್ನು ಬಸವಕೇಂದ್ರದ ಡಾ, ಬಸವ ಮರುಳ ಸಿದ್ದ ಸ್ವಾಮೀಜಿ ವಹಿಸಲಿದ್ದಾರೆ.ಮುಖ್ಯಅಥಿತಿಗಳಾಗಿ ಸಚಿವರುಗಳಾದ ಅರಗ ಜ್ಞಾನೇಂದ್ರ, ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶ್ರೀ ರಾಮ ಸೇನೆಯ ಪ್ರಮೋದ್ ಮುತಾಲಿಕ್ ಉಪಸ್ಥಿತರಿರುವರು ಎಂದರು.
ಕುವೆಂಪು ರಂಗಮಂದಿರದಲ್ಲಿ ದಿನಾಂಕ 16,17,18 ರಂದು ಪ್ರತಿದಿನ ಸಂಜೆ ಸಮಯ 5.30…
ಪತ್ರಿಕಾಗೋಷ್ಠಿಯಲ್ಲಿ ವಿದ್ವತ್ ಭಾರತದ ಪದಾಧಿಕಾರಿಗಳಾದ ಡಾ.ಸತೀಶ್ ಕುಮಾರ್ ಶೆಟ್ಟಿ ಎಸ್.ಬಿ ಅಶೇಕ್ ಕುಮಾರ್, ಶಾಂತ ಶೆಟ್ಟಿ, ಎನ್.ಡಿ ಸತೀಶ್ ಇದ್ದರು.