ಶಿವಮೊಗ್ಗ ನ್ಯೂಸ್…

ಮಹಾನಗರ ಪಾಲಿಕೆಯ ಅವೈಜ್ಞಾನಿಕ ಆಸ್ತಿ ತೆರಿಗೆಯ ವಿರುದ್ಧ ಕಾನೂನು ಸಮರ ನಡೆಸಲು ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ನಿರ್ಧರಿಸಿದೆ.ಈ ಬಗ್ಗೆ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಸಂಚಾಲಕ ಕೆ.ವಿ ವಸಂತ ಕುಮಾರ್ 2021-22 ಆಸ್ತಿ ತೆರಿಗೆ ಸಂಗ್ರಹಣೆ ಕಾನೂನು ಬಾಹಿರವಾಗಿದೆ, ಅವೈಜ್ಞಾನಿಕವಾಗಿದೆ ಮತ್ತು ಪಾಲಿಕೆಯ ಸಭೆಯಲ್ಲಿ ಈ ಬಗ್ಗೆ ಚರ್ಚೆಯು ಆಗಿಲ್ಲ ಜನಪ್ರತಿನಿಧಿಗಳ ಸಂಪೂರ್ಣ ಒಪ್ಪಿಗೆಯು ಸಿಕ್ಕಿಲ್ಲ ಯಾವ ಆಸ್ತಿಗೆ  ಎಷ್ಟು ತೆರಿಗೆ ವಿಧಿಸಬೇಕು ಎಂಬ ತಿರ್ಮಾನವನ್ನು ಈ ಸಭೆಯಲ್ಲಿ ಕೈಗೊಂಡಿಲ್ಲ ಇದು ಕೇವಲ ಅಧಿಕಾರಿಗಳು ತೆಗೆದಿಕೊಂಡ ಬೇಕಾಬಿಟ್ಟಿ ತೀರ್ಮಾನವಾಗಿದೆ ತೆರಿಗೆದಾರರ ಹಿತಕಾಪಾಡುವಲ್ಲಿ ಪಾಲಿಕೆ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.ಆದ್ದರಿಂದ ತೆರಿಗೆ ದಾರರು ಈಗಾಗಲೆ ತೆರಿಗೆ ಕಟ್ಟಿದ್ದರೆ ಅದನ್ನು ವಪಾಸ್ಸು ಕೊಡುವಂತೆ ಮತ್ತು ಕಟ್ಟದಿದ್ದವರು ಹೆಚ್ಚುವರಿ ತೆರಿಗೆಯನ್ನು ಕಟ್ಟಲಿ ಆಗುವುದಿಲ್ಲ ನಮಗೆ ಹಿಂದಿನ ಸಾಲಿನಂತೆ ತೆರಿಗೆ ಪಾವತಿಸಲು ಅವಕಾಶನೀಡಬೇಕು ಎಂದು ಅರ್ಜಿಗಳನ್ನು ಪಾಲಿಕೆಗೆ ಸಲ್ಲಿಸುವಂತೆ ಅವರು ಮನವಿ ಮಾಡಿದರು.

ಈ ಎರೆಡು ಬಗೆಯ ಅರ್ಜಿಗಳನ್ನು ನಾಗರೀಕ ಹಿತ ರಕ್ಷಣೆಗಳ ವೇದಿಕೆಗಳ ಒಕ್ಕೂಟವೆ ತಯಾರು ಮಾಡಿದೆ ನಗರದ ಎಂಟು ಕಡೆ ಅಂದರೆ ಶ್ರೀ ನಿಧಿ ಟೆಕ್ಸಟೈಲ್ಸ್, ಗಾಂಧಿ ಭಜಾರಿನ ಸಾಕ್ರೆ ಟೆಕ್ಸಟೈಲ್ಸ್, ಶಂಕರ ಮಠದ ಓಂ ಗಣೇಶ್ ಮೋಟರ್ಸ, ಗಜಾನನ ಕಾಫೀ ವರ್ಕ್ಸ, ಪವರ್ ಗ್ಲಾಸ್ ಅಂಡ್ ಪ್ಲೇವುಡ್ಸ್, ಗೋಪಾಳದ ದೇವಕೆ ಜರಾಕ್ಸ್, ರವೀಂದ್ರ ನಗರದ 7ನೇ ತಿರುವಿನಲ್ಲಿರುವ ಕೆ.ವಿ ವಸಂತಕುಮಾರ ಕಚೇರಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕ ಸಂಘದಲ್ಲಿ ಅರ್ಜಿಗಳು ಲಭ್ಯವಿದ್ದು ಅದನ್ನು ಪಡೆದು ವಿವರಗಳ ಭರ್ತಿ ಮಾಡಿ ಪಾಲಿಕೆಗೆ ಅಥವ ಈ 8 ಸ್ಥಳಗಳಲ್ಲಿಯೆ ನೀಡಬೇಕು ಎಂದರು.ಇದರಿಂದ ನಮ್ಮ ಕಾನೂನು ಸಮರಕ್ಕೆ ಅನುಕೂಲವಾಗುತ್ತದೆ ಮತ್ತು ಅವೈಜ್ಞಾನಿಕ ಆಸ್ತಿ ತೆರಿಗೆಯ ವಿರುದ್ಧ ಹೋರಾಟ ನಡೆಸಿದರೆ ತೆರಿಗೆದಾರರಿಗು ಕೂಡಾ ಅನುಕೂಲವಾಗುತ್ತದೆ ಆದ್ದರಿಂದ ತೆರಿಗೆದಾರರು ಈ ಅರ್ಜಿಯನ್ನ ಭರ್ತಿಮಾಡಿ  ನೀಡಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಪದಾಧಿಕಾರಿಗಳಾ ಎಸ್.ಬಿ.ಅಶೋಕ್ ಕುಮಾರ್, ಡಾ.ಸತೀಶ್ ಕುಮಾರ್ ಶೆಟ್ಟಿ,ಅಶ್ವಥ್ ನಾರಾಯಣ ಶೆಟ್ಟಿ, ವೆಂಕಟ ನಾರಾಯಣ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…