ಭದ್ರಾವತಿ ನ್ಯೂಸ್…

ದಿನಾಂಕಃ-13-10-2021 ರಂದು ಬೆಳಗ್ಗೆ ತರೀಕೆರೆ ಕಡೆಯಿಂದ ಭದ್ರಾವತಿ ಕಡೆಗೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿಯ ಮೇರೆಗೆ ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಗೊಂದಿ ಚಾನೆಲ್ ಹತ್ತಿರ ಪಿಎಸ್ಐ ಪೇಪರ್ ಟೌನ್ ಮತ್ತು ಸಿಬ್ಬಂದಿಯ ತಂಡವು ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ ಅಲ್ಲಿಗೆ ಬಂದ ಸಿಲ್ವರ್ ಕಲರಿನ ಓಮಿನಿ ವಾಹನ ಸಂಖ್ಯೆ:KA37M1417 ಅನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ ಮಾದಕ ವಸ್ತು ಗಾಂಜಾ ಇರುವುದು ಕಂಡುಬಂದಿರುತ್ತದೆ.

ನಂತರ ಆರೋಪಿಯನ್ನು ವಶಕ್ಕೆ ಪಡೆದು ಅಂದಾಜು ಮೌಲ್ಯ 75,000/- ರೂಗಳ ಒಟ್ಟು 5 ಕೆಜಿ ತೂಕದ ಒಣ ಗಾಂಜಾ, 02 ಮೊಬೈಲ್ ಫೋನ್ ಮತ್ತು ಕೃತ್ಯಕ್ಕೆ ಬಳಸಿದ ಓಮಿನಿ ವಾಹನವನ್ನು ವಶಪಡಿಸಿಕೊಂಡು ಆರೋಪಿತನ ವಿರುದ್ದ ಗುನ್ನೆ ಸಂಖ್ಯೆ:0113/2021 ಕಲಂ 8(c),20(B)(ii)C,25 NDPS ಕಾಯ್ದೆ ರಿತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…