ಶಿವಮೊಗ್ಗ ನ್ಯೂಸ್…

ಶ್ರೀಮತಿ ಕೌಸರ್ ಫಿಜಾ, 19 ವರ್ಷ, ಆಯನೂರು ಗ್ರಾಮ ಶಿವಮೊಗ್ಗ ರವರನ್ನು ಈ ಹಿಂದೆ ಶಿವಮೊಗ್ಗ ನಗರದ ಟಿಪ್ಪುನಗರ ವಾಸಿಯೊಬ್ಬರಿಗೆ ಮದುವೆ ಮಾಡಿಕೊಟ್ಟಿರುತ್ತಾರೆ. ನಂತರದಲ್ಲಿ ಕೌಸರ್ ಫಿಜಾರವರ ಮನೆಯವರು ಅವಳ ಗಂಡನಿಗೆ ಗುಜರಿ ವ್ಯಾಪಾರ ಮಾಡಲು ಅಂಗಡಿ ಹಾಕಿಕೊಟ್ಟಿದ್ದು, ಆದರೆ ವ್ಯಾಪಾರದಿಂದ ಬಂದ ಹಣವನ್ನೆಲ್ಲಾ ಖರ್ಚು ಮಾಡುತ್ತಿದ್ದ ವಿಚಾರವಾಗಿ ಕೌಸರ್ ಫಿಜಾ ರವರು ಹಣವನ್ನು ಖರ್ಚು ಮಾಡಿದರೆ ಮುಂದಿನ ಜೀವನ ಹೇಗೆ ಎಂದು ಕೇಳಿದಾಗ ಅವಳೊಂದಿಗೆ ಗಲಾಟೆ ತೆಗೆದು, ಆಕೆಯನ್ನು ಅನುಮಾನಿಸಿ ಗಲಾಟೆ ಮಾಡಿ ಕಿರುಕುಳ ನೀಡುತ್ತಿರುತ್ತಾನೆ. ಆದ್ದರಿಂದ ಆಕೆಯು ತನ್ನ ತಂದೆಯ ಮನೆಗೆ ಹೋಗಿ ವಾಸವಿದ್ದಳು.

ದಿನಾಂಕ-16-10-2021 ರಂದು ಕೌಸರ್ ಫಿಜಾಳ ಗಂಡನು ಬೇರೆ ಬಾಡಿಗೆ ಮನೆಯನ್ನು ನೋಡಿದ್ದೇನೆ, ಕಂಪ್ಯೂಟರ್ ಕ್ಲಾಸ್ ಗೆ ಹೋಗುವಾಗ ಮನೆಯನ್ನು ನೋಡಿಕೊಂಡು ಹೋಗುವಂತೆ ಬಾ ಎಂದು ಕರೆದು ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗಾಡಿಕೊಪ್ಪ ಗ್ರಾಮದ ಹತ್ತಿರ ಆಕೆಗೆ ಚಾಕುಯಿಂದ ಚುಚ್ಚಿ, ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುತ್ತಾನೆಂದು ಮೃತೆಯ ತಾಯಿ ನೀಡಿದ ದೂರಿನ ಮೇರೆಗೆ ಗುನ್ನೆ ನಂ 0341/2021 ಕಲಂ 498(ಎ), 302 ಐಪಿಸಿ ರಿತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು, ಆರೋಪಿಯಾದ ಕೌಸರ್ ಫಿಜಾ ರವರ ಗಂಡನನ್ನು ದಸ್ತಗಿರಿ ಮಾಡಲಾಗಿದೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…