ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ಕಳೆದ ಒಂದು ವರ್ಷದಲ್ಲಿ ಗಣನೀಯ ಪ್ರಗತಿ ಸಾಧಿಸಿದ್ದು, 2020-21ನೇ ಸಾಲಿನಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ನಿವ್ವಳ ಲಾಭ ರೂ.18.46 ಕೋಟಿ ಗಳಿಸಿರುವುದು ನಿಮಗೆ ಈಗಾಗಲೇ ತಿಳಿದಿರುವ ವಿಷಯವಾಗಿದೆ.
ಇದೀಗ ನಬಾರ್ಡ್ ನವರು ಬ್ಯಾಂಕಿನ ಪರಿವೀಕ್ಷಣೆಯನ್ನು ನಡೆಸಿ, ಮೌಲ್ಯಮಾಪನವನ್ನು ಮಾಡಿ ಬ್ಯಾಂಕಿಗೆ “ಎ” ಶ್ರೇಣಿಯನ್ನು ನೀಡಿರುವುದಾಗಿ ಹಾಗೂ ಬ್ಯಾಂಕು ಆರ್ಥಿಕವಾಗಿ ಅತ್ಯಂತ ಬಲಿಷ್ಟವಾಗಿದೆ ಎಂದು ತಿಳಿಸಿ, ಪತ್ರ ಬರೆದಿರುತ್ತಾರೆ.
2011-12ನೇ ಸಾಲಿನಿಂದ ಈಚೆಗೆ ಇದೇ ಪ್ರಥಮ ಬಾರಿಗೆ ಬ್ಯಾಂಕಿಗೆ ನಬಾರ್ಡ್ ನಿಂದ “ಎ” ಶ್ರೇಣಿ ದೊರೆತಿರುವುದನ್ನು ಅತ್ಯಂತ ಸಂತೋಷದಿಂದ ಈ ಮೂಲಕ ತಿಳಿಸುತ್ತಿದ್ದೇವೆ.