ಶಿವಮೊಗ್ಗ ನ್ಯೂಸ್…
ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶ ಅ,30 ರಂದು ಸಡೆಯಲಿದ್ದು.ಮಾಜಿ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಾಗವಹಿಸುವ ಹಿನ್ನೆಲೆಯಲ್ಲಿ ಪೂರ್ವಬಾವಿಯಾಗಿ ನಗರದ
ಪ್ರವಾಸಿ ಮಂದಿರದಲ್ಲಿ ಇಂದು ಶಿವಮೊಗ್ಗ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ
ಕಾರ್ಯಕಾರಿ ಮಂಡಳಿ ಹಾಗೂ ಪ್ರಮುಖರ ಸಭೆ ನಡೆಯಿತು.
ಸಭೆಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ,
ರಾಜ್ಯಕಾರ್ಯದರ್ಶಿ ವೇಂಕಟ್ ರಾವ್, ವಿಧಾನಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್,
ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್, ಒಕ್ಕೂಟದ ಜಿಲ್ಲಾಧ್ಯಕ್ಷ
ವಿ.ರಾಜು, ಪ್ರಮುಖರಾದ ಕಲಗೋಡು ರತ್ನಾಕರ್, ಗಿರಿಯಪ್ಪ, ಎಸ್.ಬಿ ಅಶೋಕ್ ಕುಮಾರ್,
ಜಿ.ಡಿ ಮಂಜುನಾಥ್, ಎನ್ ರಮೇಶ್, ಹಾಲಪ್ಪ, ರಾಮಚಂದ್ರಪ್ಪ, ಧರ್ಮರಾಜ್, ನಗರದ
ಮಹದೇವಪ್ಪ, ಗೋಣಿ ಮಾಲತೇಶ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.