ಶಿವಮೊಗ್ಗ ನ್ಯೂಸ್…

ಲಡಾಕ್ ಚಾರಣ ಮಾಡಿದಾಗ ಸಿಕ್ಕ ಅಧ್ಬುತ ಅನುಭವ ಮತ್ತೆಲ್ಲೂ ಸಿಕ್ಕಿಲ್ಲ. ಎಂದು ಅರುಣಾಚಲ ಪ್ರದೇಶಕ್ಕೆ ಚಾರಣಹೊರಟ ವ್ಯದ್ಯರ ತಂಡಕ್ಕೆ ಬೀಳ್ಕೊಡುಗೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸೂಡ ಅಧ್ಯಕ್ಷ ಜ್ಯೋತಿ ಪ್ರಕಾಶ್ ತಮ್ಮ ಅನುಭವ ಹಂಚಿಕೊಂಡರು.

ಅಲ್ಲಿಯ ಜನರ ಕಷ್ಟದ ಬದುಕು, ಅವರ ಆಹಾರ ಪದ್ದತಿ ನಮಗೆ ಒಗ್ಗಿ ಕೊಳ್ಳಲು ಸ್ವಲ್ಪ ಕಷ್ಟ ಎನಿಸಬಹುದು. ಆದರೆ, ಆ ಪ್ರಕೃತಿ ಸೌಂಧರ್ಯದ ಸವಿಯುತ್ತಾ ಬೇರೆ ಎಲ್ಲದೂ ಮರೆತುಹೋಗುತ್ತದೆ. ಮತ್ತೆ ಮತ್ತೆ ಹೋಗಬೇಕೆಂಬ ಹಂಬಲ ಇದ್ದರೂ ಕಾರ್ಯದೊತ್ತಡದ ನಡುವೆ ಸಾಧ್ಯವಾಗಿಲ್ಲ.
ಚಾರಣದಿಂದ ದೇಹಕ್ಕೆ ಕಸುವು ದೊರಕುತ್ತದೆ. ಆರೋಗ್ಯ ವೃದ್ಧಿಯಾಗುತ್ತದೆ ಎಂದರು.

ಚಾರಣಕ್ಕೆ ಹೊರಟಿರುವ ಡಾ.ಪರಮೇಶ್ವರ್, ಉಷಾಪರಮೇಶ್ವರ್, ಡಾ.ಶ್ರೀಕಾಂತ್ ಹೆಗ್ಡೆ, ಡಾ.ಅನುಪಮ, ಡಾ.ಕೆ.ಬಿ.ಶೇಖರ್, ಡಾ.ಶಾಂತಾಶೇಖರ್, ಡಾ.ಉಷಾರಮೇಶ್,
ಭಾರತಿಗುರುಪಾದಪ್ಪ ಇವರಿಗೆ ಪುಷ್ಪಗುಚ್ಚ ನೀಡಿ ಅಭಿನಂದಿಸಿದರು.

ನಮ್ಮ ಘಟಕದಲ್ಲಿ ಈಗ ಸಾವಿರಕ್ಕಿಂತ ಹೆಚ್ಚು ಸದಸ್ಯರಿರುವುದರಿಂದ ಒಂದೇ ದಿನದಲ್ಲಿ ಒಂದು ಬಸ್ಸಿಗೆ ಸಾಕಾಗುವಷ್ಟು ಚಾರಣಿಗರು ಹೆಸರು ನೊಂದಾಯಿಸಿಕೊಂಡು, ಮೊನ್ನೆ ಕುದರೆಮುಖಕ್ಕೆ ಎರಡು ಬ್ಯಾಚ್ ನಲ್ಲಿ ಕಳಿಸುವಂತಾಯಿತು. ನಮ್ಮ ಘಟಕದ ನಿರ್ಧೇಶಕರು, ಸದಸ್ಯರು ಹೆಚ್ಚು ಸದಸ್ಯತ್ವ ಮಾಡಿರುವುದರಿಂದ, ಇಂದು ರಾಜ್ಯದಲ್ಲಿ ದ್ವಿತಿಯ ಸ್ಥಾನದಲ್ಲಿದ್ದೇವೆ ರಾಷ್ಟ್ರಮಟ್ಟದಲ್ಲಿ, ನಮ್ಮ ರಾಜ್ಯ ದ್ವಿತೀಯ ಸ್ಥಾನದಲ್ಲಿದ್ದೇವೆ.

ಮುಂದಿನ ನಮ್ಮ ಗುರಿ ರಾಜ್ಯ ಮಟ್ಟದಲ್ಲಿ ಹಾಗೂ ರಾಷ್ಟ್ರಮಟ್ಟದಲ್ಲಿಯೂ ಪ್ರಥಮ ಸ್ಥಾನ ಗಳಿಸುವುದು. ಇದಕ್ಕೆ ಎಲ್ಲರ ಸಹಕಾರವನ್ನು ಛೇರ್ಮನ್ ಎಸ್.ಎಸ್.ವಾಗೇಶ್ ಕೋರಿದರು.
ಚಾರಣಕ್ಕೆ ಹೊರಟಿರುವವರಿಗೆ ಯಾವುದೇ ರೀತಿಯ ನೆರವಿನ ಅವಶ್ಯಕತೆ ಇದ್ದರೆ ತಕ್ಷಣ ಸಂಪರ್ಕಿಸುವಂತೆ ಜಿ.ವಿಜಯಕುಮಾರ್ ತಿಳಿಸಿದರು. ಹಲವು ಹಿಮಾಲಯ ಚಾರಣ ಪ್ರಾರಂಭಗೊಂಡಿದ್ದು ಸಮಾನ ಮನಸ್ಕರು ಈ ರೀತಿ ಹೊರಡುವುದಾದರೆ ಅವರಿಗೆ ಎಲ್ಲಾ ರೀತಿಯ ಅನುಕೂಲ ಮಾಡಿ ಕೊಡಲಾಗುವುದು ಎಂದರು.

ಅರುಣಾಚಲ ಪ್ರದೇಶದ ಚಾರಣದ ಅನುಭವಗಳನ್ನು ಹಾಗೂ ಅಲ್ಲಿ ಬೇಟಿ ಕೊಡಬಹುದಾದ ಸ್ಥಳಗಳಬಗ್ಗೆ ವಿವರವನ್ನು ವೇಣುಗೋಪಾಲ್ ರವರು ಚಾರಣಾರ್ಥಿಗಳಿಗೆ ತಿಳಿಸಿದರು.
ರಂಜನಿದತ್ತಾತ್ರಿ ಸ್ವಾಗತಿಸಿದರು, ಡಾ.ಕೌಸ್ತುಬಾ ಪ್ರಾಸ್ತಾವಿಕವಾಗಿ ನುಡಿದರು. ವೈದ್ಯ ಹವಾಲ್ದಾರ್, ಮಲ್ಲಿಕಾರ್ಜುನ್, ಡಾ.ಗುರುಪಾದಪ್ಪ ಉಪಸ್ಥಿತರಿದ್ದರು, ಕಾರ್ಯದರ್ಶಿ ಸುರೇಶ್ ಕುಮಾರ್ ವಂದಿಸಿದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…