ಶಿವಮೊಗ್ಗ ನ್ಯೂಸ್…

ಠಾಣಾ ಸರಹದ್ದಿನಲ್ಲಿ ದಿನದಿಂದ ದಿನಕ್ಕೆ ಕಾನೂನುಬಾಹಿರ ಚಟುವಟಿಕೆಗಳು ಅತಿಯಾಗಿ ನಡೆಯುತ್ತಿದ್ದು ತಮ್ಮ ಇಲಾಖೆಯು ತಿಳಿದೂ ತಿಳಿಯದಂತಿರುವುದು ತುಂಬಾ ವಿಷಾದಕರ ಸಂಗತಿಯಾಗಿದೆ.

ಸರ್ಕಾರವು ಸಾರ್ವಜನಿಕ ಸ್ಥಳಗಳಲ್ಲಿ ಬೀಡಿ, ಸಿಗರೇಟು ಹಾಗೂ ತಂಬಾಕು ಉತ್ಪನ್ನಗಳನ್ನು ನಿಷೇಧ ಮಾಡಿದ್ದರೂ ಕೂಡ ಎಲ್ಲಾ ದಿನಸಿ ಅಂಗಡಿ, ಗೂಡಂಗಡಿಗಳು ಹಾಗೂ ಟೀ ಶಾಪ್ ಗಳಲ್ಲಿ ಸಿಗರೇಟು ತಂಬಾಕು ಉತ್ಪನ್ನಗಳನ್ನು ಸೇವನೆ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ತುಂಬಾ ಅಸಹ್ಯ ಮತ್ತು ಮುಜುಗರ ಪಡುವಂತಾಗಿದೆ ಈ ವಿಚಾರಗಳು ತಮ್ಮ ಇಲಾಖೆಯಲ್ಲಿರುವ ಸಿಬ್ಬಂದಿಗಳಿಗೆ ತಿಳಿದಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಸ್ಪಷ್ಟ ಕಾನೂನು ಉಲ್ಲಂಘನೆಯಾಗಿರುತ್ತದೆ ಹಾಗೂ ಮಾನ್ಯ ಗೃಹ ಸಚಿವರ ತವರೂರಲ್ಲೇ ಇಂತಹ ಘಟನೆಗಳು ನಡೆಯುತ್ತಿರುವುದು ತುಂಬಾ ವಿಷಾದಕರ ವಿಚಾರವಾಗಿದ್ದು.

ತಾವುಗಳು ಈ ಕೂಡಲೇ ಇದರ ಬಗ್ಗೆ ಕಾನೂನು ಕ್ರಮ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಸಂಘಟನೆಯು ಇಲಾಖೆ ವಿಫಲತೆ ಬಗ್ಗೆ ಮುಂದಿನ ದಿನಗಳಲ್ಲಿ ಹೋರಾಟ ಅನಿವಾರ್ಯ ಎಂದು ಹೇಳಿದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…