ಸಾಗರ ನ್ಯೂಸ್…
ಸನ್ಮಾನ್ಯ ಪ್ರದಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ, ದೇಶದಲ್ಲಿ 100 ಕೋಟಿ ಜನರಿಗೆ ಕೋವಿಡ್ ಲಸಿಕೆ ತಲುಪಿಸಿದ ಹಿನ್ನಲೆಯಲ್ಲಿ,
ಇಂದು (21-10-2021) ಶಾಸಕರಾದ ಹೆಚ್.ಹಾಲಪ್ಪ ನವರು, ಸಾಗರ ಪಟ್ಟಣದಲ್ಲಿ ಕಾರ್ಯಕರ್ತರೊಂದಿಗೆ ಮಾನವ ಸರಪಣಿ ನಿರ್ಮಿಸುವುದರ ಮೂಲಕ, ಪಟಾಕಿ ಸಿಡಿಸಿ, ಸಂಭ್ರಮಾಚರಣೆ ನೆಡೆಸಿ, ಪ್ರಧಾನ ಮಂತ್ರಿಯವರಿಗೆ ಅಭಿನಂದನೆ ಸಲ್ಲಿಸಿ, ನಂತರ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಮೇಘರಾಜ್ ಸಾಗರ ನಗರ ಹಾಗೂ ಗ್ರಾಮಾಂತರ ಮಂಡಲದ ಅಧ್ಯಕ್ಷರು, ಪದಾಧಿಕಾರಿಗಳು, ಪಕ್ಷದ ವಿವಿಧ ಹಂತದ ನಾಯಕರು ಉಪಸ್ಥಿತರಿದ್ದರು.