ಶಿವಮೊಗ್ಗ ನ್ಯೂಸ್…
ಶಿವಮೊಗ್ಗ ನಗರದ ಬಿ ಹೆಚ್ ರಸ್ತೆಯ ಬೆಕ್ಕಿನ ಕಲ್ಮಠದ ಕೋಟೆ ಸಂಕೀರ್ಣದಲ್ಲಿ ಹಮ್ಮಿಕೊಂಡಿದ್ದ ಕೌಶಲ್ಯಾಭಿವೃದ್ಧಿ ಇಲಾಖೆ ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಬೀದಿ ಬದಿ ವ್ಯಾಪಾರಿಗಳಿಗಾಗಿ ಡಿಜಿಟಲ್ ಪೆಮೆಂಟ್ (Digital payment) ಆನ್ಲೈನ್ ನಲ್ಲಿ ವ್ಯವಹಾರಗಳು, ಹಾಗೂ ಸ್ವಚ್ಛತೆಯ ಮಾಹಿತಿ ಕಾರ್ಯಾಗಾರವನ್ನು ಶಿವಮೊಗ್ಗ ಜಿಲ್ಲಾ ಕೌಶಲ್ಯಾಭಿವೃದ್ಧಿ, ಜೀವನೋಪಾಯ ಅಧಿಕಾರಿಗಳಾದ ಶ್ರೀ ಸುರೇಶ್ HN ರವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸರ್ಕಾರಿ ಇಲಾಖೆಗಳು ಹಮ್ಮಿಕೊಳ್ಳುವ ಕಾರ್ಯಗಾರದಲ್ಲಿ ಎಲ್ಲಾರೂ ಭಾಗವಹಿಸಿ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರು
ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರು ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆ ಪಟ್ಟಣ ವ್ಯಾಪಾರ ಸಮಿತಿಯ ಸದಸ್ಯರಾದ ಶ್ರೀ ಚನ್ನವೀರಪ್ಪ ಗಾಮನಗಟ್ಟಿ ರವರು, ರೈತನಿದ್ದರೆ ನಾವುಗಳು ಅವರು ಬೆಳೆಯುವ ಹೂವು, ಹಣ್ಣು, ತರಕಾರಿ, ಸೊಪ್ಪು, ಹಾಗೂ ಇತರೆ ವಸ್ತುಗಳನ್ನು ನಾವುಗಳು ದಿನನಿತ್ಯವೂ ಅವರ ಶ್ರಮದ ಫಲವಾಗಿ ಬೀದಿ ಬದಿಗಳಲ್ಲಿ ವ್ಯಾಪಾರ ಮಾಡುತ್ತೇವೆ, ನಮಗೆ ಬೇಡವಾದ ಕೊಳೆತ ಹಣ್ಣು ತರಕಾರಿ ಸೊಪ್ಪುಗಳನ್ನು, ಸಂಗ್ರಹಿಸಿ ಗೋ ಶಾಲೆಗಳಿಗೆ ನೀಡಿ, ಅಥವಾ ಹಳ್ಳಿಗಳಲ್ಲಿ ಸಾಕುವ ಸಾಕು ಪ್ರಾಣಿಗಳಿಗೆ ನೀಡಿ, ಕಬ್ಬಿನ ಹಾಲನ್ನು ತೆಗೆದ ಸಿಪ್ಪೆಗಳನ್ನು ಎಲ್ಲೂ ಎಸೆಯದೆ ಹಾಲು ಮೊಸರು ನೀಡಲು ಬರುವ ರೈತರಿಗೆ ನೀಡಿ,
ತಿಂಡಿ ಗಾಡಿಗಳಲ್ಲಿ ಉಳಿಯುವ ಆಹಾರವನ್ನು ಮೊರಿಗೆ ಎಸೆಯದೆ, ದೇವಸ್ಥಾನದ ಬಳಿ, ತಂಗುದಾಣದ ಬಳಿ, ರಸ್ತೆಯ ಬದಿ ಇರುವ ನಿರಾಶ್ರಿತರಿಗೆ ನೀಡಿ, ಮುಸುರೆ ನೀರನ್ನು ಹಂದಿಗಳ ಸಾಕಾಣಿಕೆ ಮಾಡುವರಿಗೆ ನೀಡಿ,
ಅಂಗಡಿಗಳಲ್ಲಿ ಕರಿದಿಸುವ ಬಾಳೆ ಹಣ್ಣು, ಕುರ್ಕುರೆ ಪ್ಲಾಸ್ಟಿಕ್ ಕವರ್ ಗಳನ್ನು, ತಿಂದ ಮೇಲೆ ಎಲ್ಲೆಂದರಲ್ಲಿ ಎಸೆಯದೆ ಎರಡು ಡಬ್ಬವ ಇಡಿ, ಬಾಳೆಹಣ್ಣು ಸಿಪ್ಪೆಗಳನ್ನು ಧನಗಳ ತಿನ್ನಲು ಬಿಡಿ, ಪ್ಲಾಸ್ಟಿಕ್ ಕವರ್, ಟೀ ಕಫ್ ಗಳನ್ನು ಸಂಗ್ರಹಿಸಿ ಎಲ್ಲೂ ಎಸೆಯದೆ ಘಂಟೆ ಗಾಡಿಗಳಿಗೆ ನೀಡಿ ಎಂದು ಶಿವಮೊಗ್ಗ ಜಿಲ್ಲಾದ್ಯಂತ ಸ್ವಚ್ಛತಾ ಸಪ್ತಾಹ ಆಂದೋಲನ ಕಾರ್ಯಕ್ರಮದಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಕಸ ಮುಕ್ತ ಜನಜಾಗೃತಿ ಕಾರ್ಯ ಮಾಡಲಾಯಿತು ಎಂದರು.
ನಲ್ಮ್ ವಿಭಾಗದ ಸಿಎಓ ಶ್ರೀಮತಿ ಅನುಪಮಾ ರವರು, ಎಲ್ಲಾ ಬೀದಿ ಬದಿ ವ್ಯಾಪಾರಿಗಳು ಗುರುತಿನ ಚೀಟಿ ವ್ಯಾಪಾರ ಮಾಡುವ ಸ್ಥಳದಲ್ಲಿ ಕೊರಳಿನಲ್ಲಿ ಇರಬೇಕು, ಸ್ಥಿರ ಹಾಗೂ ಸಂಚಾರಿ ಎಂದು ಗುರುತಿನ ಚೀಟಿ ಪಾಲಿಕೆಯಿಂದ ನೀಡಲಾಗುತ್ತದೆ, ಸ್ಥಿರ ವ್ಯಾಪಾರಗಳಿಗೆ, ಯಾವ ಏರಿಯಾ, ಯಾವ ಸ್ಥಳ, ಯಾವ ವ್ಯಾಪಾರ, ಯಾವ ಸಮಯದಲ್ಲಿ ಎಂದು ಕಾರ್ಡ್ ನಲ್ಲಿ ನಿಯೋಜಿಸಲಾಗಿದೆ, ಬೆಳಿಗ್ಗೆ ಮತ್ತು ಸಂಜೆ ಮಾತ್ರ ಹೂವು, ತಿಂಡಿ ವ್ಯಾಪಾರ ಮಾಡಿದರೆ ಬೆಳಿಗ್ಗೆ ಯಿಂದ ಸಂಜೆಯವರೆಗೂ ಬೇರೆ ಬೇರೆ ವ್ಯಾಪಾರ ಮಾಡುವರು, ನಿವೂಗಳು ನಿಮ್ಮ ಸ್ಥಳ ಬಿಟ್ಟು ಬೇರೆಯವರ ಸ್ಥಳದಲ್ಲಿ ವ್ಯಾಪಾರ ಮಾಡಿದರೆ ಅವರುಗಳು ಎಲ್ಲಿಗೆ ಹೋಗಬೇಕು. ನಾವುಗಳು ನಿಮ್ಮ ಸ್ಥಳದಲ್ಲಿ ಬಂದು ಪರಿಶೀಲನೆ ಮಾಡಿದಾಗ ನಿವೂಗಳು ಇಲ್ಲದಿದ್ದರೆ ಅವರು ಇಲ್ಲಾ ವೆಂದು ಕಾರ್ಡ್ ರದ್ದು ಗೋಳಿಸಿ ಅ ಸ್ಥಳಗಳಲ್ಲಿ ಬೇರೆಯವರಿಗೆ ವ್ಯಾಪಾರ ಮಾಡಲು ಅವಕಾಶ ನೀಡಲಾಗುವುದು, ನಿವೂಗಳು ಗುರುತಿನ ಚೀಟಿಯ ಬಿಟ್ಟು ಬೇರೆ ಸ್ಥಳಗಳಲ್ಲಿ ವ್ಯಾಪಾರ ಮಾಡಿದರೆ ಕಾರ್ಡ್ ರದ್ದು ಗೋಳಿಸಲಾಗುವುದು, ಸಂಚಾರಿ ವ್ಯಾಪಾರ ಮಾಡುವರು ತಮ್ಮ ಕೊರಳಿನಲ್ಲಿ ಗುರುತಿನ ಚೀಟಿ ಇರಬೇಕು, ನಾಗರಿಕರು ಹಾಗೂ ಪೊಲೀಸ್ ಅಧಿಕಾರಿಗಳು ಕೇಳಿದಾಗ ತಪ್ಪದೆ ನಿಮ್ಮ ಮಾಹಿತಿ ಗುರುತಿನ ಚೀಟಿಯೊಂದಿಗೆ ನೀಡಬೇಕು, ಕಳ್ಳ ಕಾರರ ಅವಳಿ ಹೆಚ್ಚಾಗಿದೆ ಎಂದರು. ಡಿಜಿಟಲ್ ಪೆಮೆಂಟ್ ಬಗ್ಗೆ ಪೋನ್ ಪೈ ನ ಶ್ರೀ ರಾಘವೇಂದ್ರ ರವರು ಮಾಹಿತಿ ನೀಡಿದರು.
ಈ ಕಾರ್ಯಾಗಾರದಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯ ಶ್ರೀ ದೆವೇಂದ್ರನಾಯ್ಕ್, ಪಾಲಿಕೆಯ ಸಿಓಗಳಾದ ಶ್ರೀ ಲೊಕೇಶಪ್ಪ, ಶ್ರೀ ರತ್ನಾಕರ್, ಶ್ರೀಮತಿ ಗೀತಾ, ಶ್ರೀಮತಿ ರೇಣುಕಾ, ಹಾಗೂ ಬೀದಿ ಬದಿ ವ್ಯಾಪಾರಸ್ಥರು ಉಪಸ್ಥಿತರಿದ್ದರು.