ಶಿವಮೊಗ್ಗ ನ್ಯೂಸ್…

ಶಿವಮೊಗ್ಗ ಜಿಲ್ಲಾ sqay ಅಸೋಸಿಯೇಶನ್ ವತಿಯಿಂದ ಪದವಿಪೂರ್ವ ಶಿಕ್ಷಣ ಇಲಾಖೆಯ ಕ್ರೀಡಾ ಪಟ್ಟಿಗೆ Sqay ಕ್ರೀಡೆಯನ್ನು ಸೇರಿಸುವಂತೆ ಶಿಫಾರಸು ಮಾಡಲು ಮನವಿ ಮಾಡಲಾಯಿತು.

Sqay ಕ್ರೀಡೆಯು ಜಮ್ಮು ಮತ್ತು ಕಾಶ್ಮೀರದ ಪಾರಂಪರಿಕ ಕ್ರೀಡೆಯಾಗಿದು ಈ ಕ್ರೀಡೆಯು ಭಾರತದ ಕ್ರೀಡಾ ಮಂತ್ರಾಲಯದಿಂದ ಮಾನ್ಯತೆಯನ್ನು ಪಡೆದಿದ್ದು ಹಾಗೂ ಖೇಲೋ ಇಂಡಿಯಾ ಏಕ್ ಭಾರತ್ ಶ್ರೇಷ್ಠ ಭಾರತ್ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದ ಈ ಪಾಠಶಾಲಾ ದಲ್ಲೂ ಇರುವ ಪ್ರಮುಖ ಕ್ರೀಡೆಯಾಗಿದು ಎಸ್ ಜಿಎಫ್ ಐ ಪಟ್ಟಿಯಲ್ಲೂ ಸಹ ಇದೆ ಎಂದು ಇಲಾಖೆ ಗಮನಕ್ಕೆ ತಿಳಿಸುತ್ತಾ ಪ್ರಸ್ತುತ ಈ ಕ್ರೀಡೆಯು ನಮ್ಮ ಸಂಸ್ಥೆಯ ವತಿಯಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 5 ವರ್ಷಗಳಿಂದ ನಡೆಯುತ್ತಿದು.

ಶಿವಮೊಗ್ಗ ನಗರದ ಪದವಿಪೂರ್ವ ಕಾಲೇಜು ಓದುತ್ತಿರುವ ವಿದ್ಯಾರ್ಥಿಗಳು ಸಹ sqay ಕ್ರೀಡೆ ಅಭ್ಯಾಸ ಮಾಡುತ್ತಿದ್ದು ಹಾಗೂ ವಿವಿಧ ಪಂದ್ಯಾವಳಿಗಳಲ್ಲಿ ಬಹುಮಾನವನ್ನು ಪಡೆದಿದು ಹಾಗೆಯೇ ಶಿವಮೊಗ್ಗ ಜಿಲ್ಲೆಯ ಸಾಗರ ಭದ್ರಾವತಿ ತಾಲ್ಲೂಕಿನಲ್ಲೂ ಸಹ sqay ಕ್ರೀಡಾಪಟುಗಳು ಇದು ತಿಳಿಸಿ ಕ್ರೀಡೆಯನ್ನು ರಾಜ್ಯದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಕ್ರೀಡಾ ಪಟ್ಟಿಗೆ ಸೇರ್ಪಡಿಸುವಂತೆ ಇಲಾಖೆ ಶಿಫಾರಸು ಮಾಡುವ ಮುಖಾಂತರ ಜಿಲ್ಲೆಯ ಕ್ರೀಡಾಪಟುಗಳಿಗೆ ಕ್ರೀಡಾ ಭವಿಷ್ಯ ರೂಪಿಸಲು ಸಹಕರಿಸಬೇಕಾಗಿ ವಿನಂತಿಸಲಾಯಿತು.

ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ sqay ಅಸೋಸಿಯೇಷನ್ ನ ಅಧ್ಯಕ್ಷರಾದ ಶ್ರೀ ಶಿವಮೊಗ್ಗ ವಿನೋದ್ ಉಪಸ್ಥಿತರಿದ್ದರು

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…