ಶಿವಮೊಗ್ಗ ನ್ಯೂಸ್…
ಕನ್ನಡದ ನೆಲೆಗಟ್ಟು ಕನ್ನಡದ ಸಂಸ್ಕøತಿ ಕನ್ನಡ ಭಾಷೆಯ ಸೊಬಗನ್ನು
ಬಿಂಬಿಸುವ ನಿಟ್ಟಿನಲ್ಲಿ ಸರ್ಕಾರ ಕನ್ನಡಕ್ಕಾಗಿ ನಾವು ಅಭಿಯಾನವನ್ನು ಹಮ್ಮಿಕೊಂಡಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ನಾಗೇಂದ್ರ ಹೊನ್ನಳ್ಳಿ ಹೇಳಿದ್ದಾರೆ.
ಅವರಿಂದು ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ
ಇಲಾಖೆ ಶಿವಮೊಗ್ಗ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ‘ಜಲಗಾರ’ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.ಜಲಗಾರ ನಾಟಕ ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡಿದೆ. ಸಾಮಾಜಿಕ ವ್ಯವಸ್ಥೆಯ ಲೋಪದೋಷಗಳನ್ನು ಬಿಂಬಿಸುವ ಈ ನಾಟಕದ ಅಂಶಗಳನ್ನು ವಿದ್ಯಾರ್ಥಿಗಳು ಮುಂಬರುವ ಅವರ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.ವಿದ್ಯಾರ್ಥಿಗಳು ಮುಂದಿನ ದೇಶ ಕಟ್ಟುವ ನಾಯಕರು. ದೇಶದ ಭವಿಷ್ಯ ಅವರ ಕೈಯಲ್ಲಿದೆ.ಸಮಾಜದಲ್ಲಿ ನಡೆಯುವ ಪ್ರತಿ ವಿಷಯವನ್ನು ವಿದ್ಯಾರ್ಥಿಗಳು ಸೂಕ್ಷ್ಮವಾಗಿ ಗಮನಿಸಬೇಕು.ನಮ್ಮ ದೇಶದ ಪ್ರಾಚೀನ ಗತ ಇತಿಹಾಸದ ವೈಭವವನ್ನು ಮೊದಲು ಅರಿತುಕೊಳ್ಳಬೇಕು.
ನಂತರ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದು ಕೇವಲ ಕಲೆಯ ಪ್ರದರ್ಶನವಲ್ಲ. ಕಲೆಯ ಜೊತೆಗೆ
ಸಾಮಾಜಿಕ ಸಂದೇಶ ನೀಡಿ, ವೈಚಾರಿಕತೆಯೆಡೆಗೆ ಈ ನಾಟಕ ತೆಗೆದುಕೊಂಡು ಹೋಗುತ್ತದೆ ಎಂದರು.ರಂಗ ಸಮಾಜದ ನಿರ್ದೇಶಕ ಆರ್.ಎಸ್. ಹಾಲಸ್ವಾಮಿ ಮಾತನಾಡಿ, ಕುವೆಂಪು ಅವರಂತಹ ಮಹಾಸಾಹಿತಿಗಳು ಸಾಮಾಜಿಕ ಸಾಮರಸ್ಯದ ಸಂದೇಶಕ್ಕಾಗಿ ಅನೇಕ ಸಾಹಿತ್ಯವನ್ನು ಬರೆದಿದ್ದಾರೆ.ಅನೇಕ ಕವಿಗಳು ತಮ್ಮ ಸಾಹಿತ್ಯದ ಮೂಲಕ ಉತ್ತಮ ಸಂದೇಶ ನೀಡಿದ್ದಾರೆ.
ಯುವಪೀಳಿಗೆ ಯ್ಯೂಟ್ಯೂಬ್‍ನಲ್ಲಿ ಅಥವಾ ಪುಸ್ತಕದಲ್ಲಿ ಅದನ್ನು ಓದುವ ಹವ್ಯಾಸ ಬೆಳೆಸಿಕೊಂಡರೆ ಬದುಕು ಹಸನು ಮಾಡಿಕೊಳ್ಳಬಹುದು ಎಂದರು.
ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಎಸ್. ರಾಮಕೃಷ್ಣ,
ಡಿವಿಎಸ್ ಸಂಸ್ಥೆ ಅಧ್ಯಕ್ಷ ಕೆ.ಎಸ್. ರುದ್ರಪ್ಪ ಕೊಳಲಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್. ಉಮೇಶ್, ಡಿವಿಎಸ್ ಪಿಯು ಕಾಲೇಜಿನ ಪ್ರಾಂಶುಪಾಲ ಎ.ಸಿ. ಶೇಷಗಿರಿ, ನಾಟಕದ ನಿರ್ದೇಶಕ ಕಾಂತೇಶ್ ಕದರಮಂಡಲಗಿ ಉಪಸ್ಥಿತರಿದ್ದರು.