ಶಿವಮೊಗ್ಗ ನ್ಯೂಸ್…
ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟವರು ಇನ್ನೂ 2 ಲಕ್ಷ ಜನರು ಕೊರೋನಾ ಲಸಿಕೆ ಪಡೆಯಲು ಬಾಕಿ ಇದ್ದು, ಎಲ್ಲರೂ ಲಸಿಕಾ ಕೇಂದ್ರದಲ್ಲಿ ತೆರಳಿ ಲಸಿಕೆ ಪಡೆಯುವಂತೆ ಸಚಿವ ಕೆ.ಎಸ್. ಈಶ್ವರಪ್ಪ ಮನವಿ ಮಾಡಿದರು.
ಕನ್ನಡ ರಾಜ್ಯೋತ್ಸವ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 13,19000 ಜನರಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು. ಇದರಲ್ಲಿ ಸುಮಾರು 11,61,988 ಜನರು ಮದಲ ಡೋಸ್ ಪಡೆದಿದ್ದಾರೆ. ಸುಮಾರು5,35,410 ಜನರು 2ನೇ ಡೋಸ ಪಡೆದಿದ್ದಾರೆ. ಮೊದಲ ಡೋಸ್ ಪಡೆಯದೆ ಇರುವವರು ತಕ್ಷಣ ಪಡೆಯುವಂತೆ ಹೇಳಿದರು.ಜಿಲ್ಲೆಯ 141 ಲಸಿಕಾ ಕೇಂದ್ರಗಳಲ್ಲಿ ಪ್ರತಿನಿತ್ಯ ಲಸಿಕೆ ನೀಡಲಾಗುತ್ತಿದೆ. ಪ್ರತೀ ಬುಧವಾರ ಲಸಿಕೆ ಮೇಳ ಮಾಡಲಾಗುತ್ತಿದೆ. ಹೀಗಾಗಿ ಲಸಿಕೆ ಪಡೆಯದೆ ಇರುವವರು ಇದರ ಪ್ರಯೋಜನ ಪಡೆಯುವಂತೆ ಹೇಳಿದರು.ಈ ಬಾರಿ ಜಿಲ್ಲೆಯ ನಾಲ್ವರಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಅತ್ಯಂತಹೆಮ್ಮೆ ಹಾಗೂ ಸಂಭ್ರಮದ ವಿಷಯವಾಗಿದೆ. ನಾಲ್ಕೂ ಜನರು ಬೇರೆ ಬೇರೆ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಅವರನ್ನು ಗುರುತಿಸಿರುವುದು ಸಮಯೋಚಿತವಾಗಿದೆ. ಅವರನ್ನು ಅಭಿನಂದಿಸುವುದಾಗಿ ಹೇಳಿದರು.
ಉಪಚುನಾವಣೆಯಲ್ಲಿ ಕವರ್ ನಲ್ಲಿ ಬಿಜೆಪಿ ಹಣ ಹಂಚಿದೆ ಎಂದು ಕಾಂಗ್ರೆಸ್ ಡಿ.ಕೆ. ಶಿವಕುಮಾರ್ ದೂರುವುದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಗೆಲುವಿಗಾಗಿ ಎಲ್ಲರೂ ಕೃಷ್ಣನ ತಂತ್ರಗಾರಿಕೆ ಮಾಡಿz್ದÁರೆ.ಬಿಜೆಪಿ ಕವರ್ ನಲ್ಲಿ ಹಂಚಿದ್ದರೆ ಕಾಂಗ್ರೆಸ್ ನೇರವಾಗಿ ಹಣ ಹಂಚಿಕೆ ಮಾಡಿದೆ ಎಂದು ತಿರುಗೇಟು ನೀಡಿದರು.ವಿರೋಧ ಪಕ್ಷದವರು ಏನೇ ಮಾತನಾಡಬಹುದು. ಆದರೆ ಬಿಜೆಪಿ ಗೆಲುವು ನಿಶ್ಚಿತ. ಪಕ್ಷ ಮಾಡಿರುವ ಅಭಿವೃದ್ಧಿ ಕೆಲಸಗಳಿಂದ, ಬೇರು ಮಟ್ಟದ ಸಂಘಟನೆಯಿಂದ ಹಾಗೂ ವಿಶ್ವವೇ ಮೆಚ್ಚಿರುವ ಮೋದಿ ನಾಯಕತ್ವದಿಂದ ಬಿಜೆಪಿ ಅಭ್ಯರ್ಥಿಗಳು ಉಪ ಚುನಾವಣೆಯಲ್ಲಿ ಗೆಲ್ಲಲಿದೆ ಎಂದು ಹೇಳಿದರು.ಬಿಟ್ ಕಾಯಿನ್ ಹಾಗೂ ಮಾದಕ ವಸ್ತು ಮಾರಾಟ ಮತ್ತು ಸೇವನೆಯಲ್ಲಿ ಎಷ್ಟೇ ಪ್ರಭಾವಿಗಳಿದ್ದರೂ ಬಿಡುವುದಿಲ್ಲ ಎಂದು ಈಗಾಗಲೇ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮೇಯರ್ ಸುನೀತಾ ಅಣ್ಣಪ್ಪ, ಸೂಡಾ ಅಧ್ಯಕ್ಷ ಎಸ್.ಎಸ್. ಜ್ಯೋತಿ ಪ್ರಕಾಶ್, ಎಸ್.ಎನ್. ಚನ್ನಬಸಪ್ಪ, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಎಸ್ಪಿ ಲಕ್ಷ್ಮೀ ಪ್ರಸಾದ್, ಜಿಪಂ ಸಿಇಓ ಎಂ.ಎಲ್.ವೈಶಾಲಿ ಇದ್ದರು.